ಜನಾರ್ದನ ರೆಡ್ಡಿ

ಕಾಂಗ್ರೆಸ್- ಬಿಜೆಪಿ ಎಲ್ಲೂ ಹೋಗಲ್ಲ: ಜನಾರ್ದನ ‌ರೆಡ್ಡಿ

ಕರುನಾಡ ಬೆಳಗು ಸುದ್ದಿ

ಕೊಪ್ಪ,17-: ನಾನು ವಾಪಾಸ್ ಬಿಜೆಪಿ ಸೇರುವುದು, ಪಕ್ಷ‌ ವಿಲೀನ ಮಾಡುವ ಪ್ರಶ್ನೆಯೇ ಇಲ್ಲ.‌ ಇನ್ನು ಕಾಂಗ್ರೆಸ್ ಸೇರುವುದಂತೂ ಕನಸಿನಲ್ಲೂ ಆಗದ ಮಾತು ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ, ಸದ್ಯ ದೇಶದ ಜನರು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿ ಮೆಚ್ಚಿದ್ದಾರೆ. ಈ ಹಿನ್ನೆಲೆ ಜನರ ಆಶಯಕ್ಕೆ ಪೂರಕವಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿಗೆ ನಾನು ಸಿದ್ಧ. ಹಾಗಂತಾ ಕೆಆರ್ ಪಿಪಿಯನ್ನು ವಿಲೀನ ಮಾಡುವುದಿಲ್ಲ. ನನ್ನ ಜೊತೆ ಮಾತನಾಡಿರುವ ಹಿರಿಯರಿಗೆ ನನ್ನ ವಿಚಾರ ಹೇಳಿದ್ದೇನೆ. ರಾಜ್ಯಸಭೆ ಚುನಾವಣೆ ಬಗ್ಗೆ ನನ್ನ ಜೊತೆ ಯಾರು ಮಾತನಾಡಿಲ್ಲ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿ, ನಾನು ಮತ್ತು ಡಿಸಿಎಂ ಡಿ.ಕೆ ಶಿವಕುಮಾರ ಉತ್ತಮ ಸ್ನೇಹಿತರು. ನಮ್ಮದು ಇಪ್ಪತ್ತು ವರ್ಷದ ‌ಸಂಬಂಧ. ಸ್ನೇಹವೇ ಬೇರೆ ರಾಜಕಾರಣವೇ ಬೇರೆ.‌ ಹಾಗಂತಾ ನಾನು ಕಾಂಗ್ರೆಸ್ ಗೆ ಹೋಗ್ತೇನೆ ಎಂದರೆ ಸುಳ್ಳು. ಹಾಗಂತಾ ಕನಸು ಬಿದ್ದರೂ ಕೂಡಾ ಅದು ಸುಳ್ಳು. ಸಿಎಂ ಸಿದ್ದರಾಮಯ್ಯ ಅನುದಾನ ನೀಡಲು ತಾರತಮ್ಯ ಮಾಡುತ್ತಿಲ್ಲ. ಅಂಜನಾದ್ರಿ ‌ಅಭಿವೃದ್ಧಿಗೆ ಈ ಬಾರಿ 100 ಕೋಟಿ ಅನುದಾನ ನೀಡಿದ್ದಾರೆ ಎಂದರು.

ಗಂಗಾವತಿ ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯ ‌ನನಗೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಸ್ಯಾಡಿಸ್ಟ್ ಮನೋಭಾವದ ವ್ಯಕ್ತಿಯೊಬ್ಬರು ಮಾತ್ರ ಅಭಿವೃದ್ಧಿ ವಿಚಾರದಲ್ಲಿ ಕಿರಿಕಿರಿ ಮಾಡುತ್ತಿದ್ದಾರೆ. ಲೋಕಸಭೆ ಮುಗಿವವರೆಗೆ ಅವರಿಗೆ ಒಂದಷ್ಟು ಬೆಲೆ ಸಿಗುತ್ತದೆ.‌ ನಂತರ ಅವರನ್ನು ಅವರ ಪಕ್ಷದ ನಾಯಕರು, ಕಾರ್ಯಕರ್ತರೇ ಡಸ್ಟ್ ಬಿನ್ ಗೆ ಎಸೆಯುತ್ತಾರೆ ಎಂದು ಜನಾರ್ದನರೆಡ್ಡಿ ಪರೋಕ್ಷವಾಗಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಅವರಿಗೆ ಟಾಂಗ್ ನೀಡಿದರು.

Leave a Reply

Your email address will not be published. Required fields are marked *

error: Content is protected !!