ಪರಿಶ್ರಮದಿಂದ ವಿದ್ಯೆ ಸಂಪಾದಿಸಿ : ಈರಪ್ಪ ಕುಡಗುಂಟಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ,18- ಶ್ರದ್ಧೆ ಹಾಗೂ ಪರಿಶ್ರಮದಿಂದ ವಿದ್ಯೆಯನ್ನು ಕಲಿತಾಗ ಗುರಿಯನ್ನು ಸಾಧಿಸಲು ಸಾಧ್ಯವೆಂದು ಜಿ.ಪಂ.ಮಾಜಿ ಸದಸ್ಯರಾದ ಈರಪ್ಪ ಕುಡುಟಿ ರವರು ಅಭಿಪ್ರಾಯ ಪಟ್ಟರು.
ತಾಲೂಕಿನ ಕುದರಿಕೊಟಗಿ ಯ ಗುಡ್ ಶೇಫರ್ಡ ಆಂಗ್ಲಮಾಧ್ಯಮ ಫ್ರೌಢ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣವನ್ನು ಕೊಡಿಸುವುದು ಪಾಲಕರ ಜವಬ್ದಾರಿಯಾಗಿದೆ ಹಾಗೇಯೆ ಎಲ್ಲಾ ಬಗೆಯ ಕೌಶಲ್ಯತೆ ಹಾಗೂ ಜ್ಞಾನವನ್ನು ಪಡೆದುಕೊಂಡರೆ ನಾಳೆಯ ದಿನ ನಾವು ಸಂತೋಷದಿಂದ ಇರಲು ಸಾಧ್ಯ ಎಂದರು.
ಇಂದು ನಾವು ಕ್ರೀಯಾಶೀಲರಾದಾಗ ಮುಂದೆ ನಾವೂ ಒಬ್ಬ ಯಶಸ್ವಿ ವ್ಯಕ್ತಿಆಗತ್ತೆವೆ . ಬದುಕಿನ ಸಂಕಷ್ಟಗಳನ್ನು ದೂರಮಾಡಲು ಶಿಕ್ಷಣವನ್ನು ಪಡೆದುಕೊಂಡು ಪ್ರತಿಯೋಬ್ಬರು ಸತ್ಯ, ಶಾಂತಿ, ಸಮಯಪರಿಪಾಲನೆ, ಪ್ರಾಮಣಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಪರಸ್ಪರ ಗೌರವವನ್ನು ಕೊಡುವುದರ ಮೂಲಕ ತಮ್ಮ ಘನತೆ, ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮುನಿರಾಬಾದಿನ ಫಾದರ್ ರೇವೆಂಡ ದೇವಕುಮಾರ ರವರು ಮಾತನಾಡಿ ಗ್ರಾಮೀಣ ಪ್ರದೇಶದ ಮಕ್ಕಳು ವಿದ್ಯಾವಂತರಾಗಬೇಕು ಅವರು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಳಕಳಿಯನ್ನು ಇಟ್ಟುಕೊಂಡು ಈ ಸಂಸ್ಥೆಯನ್ನು ಹುಟ್ಟುಹಾಕಲಾಗಿದೆ ಎಂದರು .
ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮಹೇಶ ಪಟ್ಟೇದ ˌ ವೀರಪ್ಪ ಗಾಣಗೇರ! ಶಾಲೆಯ ವ್ಯವಸ್ಥಾಪಕರು !ಗ್ರಾ.ಪಂ. ಅಧ್ಯಕ್ಷರು ˌಸದಸ್ಯರು ಹಾಗೂ ಇನ್ನೀತರರು ಉಪಸ್ಥಿತರಿದ್ದರು.
