WhatsApp Image 2024-02-22 at 2.57.33 PM

ರಾಯರೆಡ್ಡಿ ಕಾಲೋನಿಯಲ್ಲಿ ಮಾರುತೇಶ್ವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ

ಕರುನಾಡ ಬೆಳಗು ಸುದ್ದಿ

ಕುಕನೂರ, 22- ಪಟ್ಟಣದ 1 ನೇ ವಾರ್ಡ್ ನಲ್ಲಿ ಮಾರುತೇಶ್ವರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಶ್ರದ್ಧಾ ಭಕ್ತಿಯಿಂದ ಜರುಗಿತು.

ಬೆಳಗ್ಗೆಯಿಂದ ದೇವಸ್ಥಾನದಲ್ಲಿ ವೀರ ಪೂಜಾ ಪುರಸ್ಕಾರಗಳು ಜರಗಿದವು. ಯಲಬುರ್ಗಾ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ಅಮೃತ ಹಸ್ತದಿಂದ ಮಾರುತೇಶ್ವರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನಡೆಯಿತು. ನಂತರ ಮಧ್ಯಾಹ್ನದ ವೇಳೆ ಅನ್ನ ಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ವಾರ್ಡಿನ ಹಿರಿಯ ಮುಖಂಡ ವೀರಯ್ಯ ತೋಟದಾರ್ಯ ಮಠ ಮಾತನಾಡಿ, ಸುಮಾರು 25 ವರ್ಷಗಳ ಹಿಂದಿನ ಈ ವಾರ್ಡಿನಲ್ಲಿ ಮಾರುತೇಶ್ವರ ದೇವಸ್ಥಾನ ಚಿಕ್ಕದಾಗಿ ಇತ್ತು ಈಗ ದಿನಗಳ ಬೆಳೆದಂತೆಲ್ಲ ಭಕ್ತಾದಿಗಳು ಜಾಸ್ತಿಯಾಗಿ ವಾರ್ಡಿನಲ್ಲಿ ಪ್ರತಿ ಶನಿವಾರ ಮತ್ತು ವಿಶೇಷ ಅಮಾವಾಸ್ಯೆ ಹುಣ್ಣಿಮೆ ಜಾತ್ರಾ ಶ್ರಾವಣ ಮಾಸ ದಸರಾ ಸಮಯದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಹೇಗೆ ಎಲ್ಲಾ ವಾರ್ಡಿನ ಭಕ್ತರು ಸೇರಿಕೊಂಡು ಒಂದು ನೂತನ ಮಾರುತೇಶ್ವರ ಮೂರ್ತಿಯನ್ನು ಪ್ರತಿಷ್ಠಾಪನೆ ಇಂದು ಜರುಗಿತು ಎಂದರು.

ಈ ಸಂದರ್ಭದಲ್ಲಿ ಹನುಮಂತರಾವ್ ಪೋಳದ, ರಾಮಣ್ಣ ಮಡಿಕೇರಿ, ದಾದಸಾಹೇಬ, ಸಿದ್ದು ತೊಂಡಿಹಾಳ್, ಮಂಜುನಾಥ ಪೂಜಾರಿ, ಮಲ್ಲಪ್ಪ ಹಾಳಕೆರಿ, ಪರಶುರಾಮ ಪೊಳದ, ಪೀರಸಾಬ ಅಡೂರು, ಈರಪ್ಪ ಬಂಗಿ, ಹನುಮಂತಪ್ಪ ರಾಟಿಮನಿ, ರೈಮಾನಸಾಬ ಎಲಿಗಾರ, ಮುದುಕಪ್ಪ ಮುತ್ತಾಳ, ಹಾಗೂ ರಾಯರೆಡ್ಡಿ ಕಾಲೋನಿಯ ನೂರಾರು ಯುವಕರು ಹಾಗೂ ಮಹಿಳೆಯರು ಇತರರು ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *

error: Content is protected !!