WhatsApp Image 2024-02-24 at 6.29.50 PM

ಹೆಚ್ಚು ವಿದ್ಯಾರ್ಹತೆ ಹೊಂದುವ ದೇಶ ಉನ್ನತಿ ಹೊಂದುತ್ತದೆ ಕಾರ್ಖಾನೆ ಗಳಿಂದಲ್ಲ : ಡಿಸಿ ಎಂ ಎಸ್ ದಿವಾಕರ

ಕರುನಾಡ ಬೆಳಗುನ ಸುದ್ದಿ

ವಿಜಯನಗರ,24- ನಗರದ ಸಾಯಿಲೀಲಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಪ್ರೌಢಶಾಲಾ ಹಸ ಶಿಕ್ಷಕರ ಸಂಘದ ಶೈಕ್ಷಣಿಕ ಕಾರ್ಯಗಾರ ಮತ್ತು ಸರ್ವ ಸದಸ್ಯರ ಸಭೆ ಹಾಗೂ ಮಹಾ ಸಮ್ಮೇಳನ ನಡೆಯಿತು.

ಈ ಸಂಧರ್ಭದಲ್ಲಿ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದರ ಜಿಲ್ಲಾಧಿಕಾರಿ ಎಂ ಎಸ್ ದಿವಾಕರ ಅವರು ದೇಶದಲ್ಲಿ ಕಾರ್ಖಾನೆಗಳು ಬೆಳೆದರೆ ದೇಶ ಉನ್ನತ ಸ್ಥಾನಕ್ಕೆ ಹೋಗುವುದಿಲ್ಲ ಯಾವ ದೇಶ ಅತಿ ಹೆಚ್ಚು ವಿದ್ಯಾರ್ಹತೆಯನ್ನು ಹೊಂದುತ್ತದೆ ಆ ದೇಶ ಉನ್ನತ ಸ್ಥಾನಕ್ಕೆ ಹೋಗುತ್ತದೆ ಎಂದು ಶಿಕ್ಷಣದ ಮತ್ವದ ಕುರಿತು ಹೇಳಿದರು.

ನನ್ನನ್ನು ಭೇಟಿ ಮಾಡಲು ಚೇಂಬರ್ ಬಳಿ ಬಂದ ಶಿಕ್ಷಕರನ್ನು ನೇರವಾಗಿ ಮುಕ್ತಾವಕಾಶ ಕೊಡುತ್ತೇನೆ, ಚೀಟಿ ಕೊಟ್ಟು ಬರುವವರಿಗೆ ಒಂದು ಗಂಟೆ ತಡವಕಾಶ ಮಾಡುತ್ತೇನೆ, ವೃದ್ಧರು, ಹಿರಿಯರು ಮತ್ತು ನಾಗರಿಕರು ಬಂದರೆ ಎಷ್ಟೊತ್ತಿದ್ದರೂ ಅವರನ್ನು ಮಾತನಾಡಿಸಿ ಕೆಲಸ ಆಗುತ್ತೋ ಇಲ್ಲವೋ ಎಂದು ಹೇಳಿ ಕಳುಹಿಸುತ್ತೇನೆ. ಕೆಲವರು ಹೇಳಿದರು ತಮ್ಮನ್ನು ಭೇಟಿ ಮಾಡಲು ಸಮಯವನ್ನು ನಿಗದಿ ಮಾಡಿ ಎಂದು. ನಾವು ಅಂತವುಗಳನ್ನ ಪಾಲಿಸುತ್ತಿಲ್ಲ ರಾತ್ರಿ ಎಂಟ ರಿಂದ ಒಂಬತ್ತು ಗಂಟೆವರೆಗೂ ಕೆಲಸ ಮಾಡುತ್ತೇನೆ ಸಮಯ ಮೀರಿದೆ ಎಂದು ಯಾರನ್ನು ಹಿಂತಿರುಗಿಸಿ ಕಳಿಸುವುದಿಲ್ಲ, ಹಾಗಾಗಿ ಸಮಯದ ಅವಶ್ಯಕತೆ ನನಗಿಲ್ಲ ಎಂದೆ. ಸರ್ಕಾರವು ನಾಗರಿಕರಿಗಾಗಿ ಸೇವೆ ಸಹಾಯ ಮಾಡಲು ನಮಗೆ ಅವಕಾಶ ಕೊಟ್ಟಿದೆ ಅದನ್ನು ನಾನು ಸಮರ್ಪಕವಾಗಿ ಮಾಡುತ್ತಿದ್ದೇನೆ, ಇದೇ ನನ್ನ ಗುರುಗಳು ನನಗೆ ಕಲಿಸಿಕೊಟ್ಟ ಪಾಠವಾಗಿದೆ. ನಾನು ಶಿಕ್ಷಕನ ಮಗನಾಗಿರುವುದರಿಂದ ಸಂಸ್ಕೃತಿ, ಸಂಸ್ಕಾರ, ಶಿಸ್ತು ಎಲ್ಲವನ್ನು ಕಲಿತಿದ್ದೇನೆ ಶಿಕ್ಷಕರು ಮಾತ್ರ ಇವುಗಳನ್ನು ಕಲಿಸಲು ಸಾಧ್ಯ, ಬೇರೆ ಹುದ್ದೆಯಲ್ಲಿರುವವರ ಮಕ್ಕಳು ಬಹುಶಃ ಇಷ್ಟೊಂದು ಕಲಿತುಕೊಳ್ಳಲು ಬಹುಶ ತುಂಬಾ ವಿರಳ ಅನಿಸುತ್ತೆ ಎಂದರು.

ಹೋಲಿಕೆ ಮನಸ್ಥಿತಿ ಬಂದಾಗ ವಿರೋಧ ಶುರುವಾಗುತ್ತೆ, ವೈರತ್ವ ಬರುತ್ತದೆ, ಅಂತಿಮವಾಗಿ ಆರೋಗ್ಯ ಹಾಳಾಗುತ್ತೆ. ಶಿಕ್ಷಕ ವೃತ್ತಿಯಲ್ಲಿರುವವರೆಗೆ ಬಿಪಿ ಶುಗರ್ ಎಂದಿಗೂ ಬರಬಾರದು. ಯಾರು ಬೇಕಾದರೂ ತಮ್ಮ ವೃತ್ತಿಯಲ್ಲಿ ಅತೃಪ್ತಿಯನ್ನು ವ್ಯಕ್ತಪಡಿಸಬಹುದು, ಹೋರಾಟವನ್ನು ಮಾಡಬಹುದು ಎಲ್ಲದನ್ನು ಸರಿ ಮಾಡಬಹುದು.

ಶಿಕ್ಷಕರು ಏನಾದರೂ ಹೋರಾಟ ಮಾಡಿದರೆ ಶಿಕ್ಷಣದಲ್ಲಿ ನಷ್ಟವಾಗಿದ್ದನ್ನು ಬರಿಸಲು ಮರಳಿ ತುಂಬಾಲಾರದಂತಹ ನಷ್ಟವಾಗುತ್ತದೆ. ಅಂತ ಲಾಸ್ಅನ್ನು ನೀವು ಯಾವತ್ತು ಮಾಡಿಲ್ಲ ಮಾಡಲು ಮನಸ್ಸು ಮಾಡುವುದಿಲ್ಲ. ಯಾವ ಶಿಕ್ಷಕರಿಗೂ ಪಾಠ ಹೇಗೆ ಮಾಡಬೇಕೆಂದು ಹೇಳಲು ಸಾಧ್ಯವೇ ಇಲ್ಲ ಅದು ಅವರಿಗೆ ಗೊತ್ತಿರುತ್ತದೆ ಒಂದು ವೇಳೆ ನಾವು ಅವರಿಗೆ ಹೇಗೆ ಪಾಠ ಮಾಡಬೇಕು ಎಂದು ಹೇಳುತ್ತೇವೆ ಎಂದರೆ ನಮ್ಮಂತ ಶತಮೂರ್ಖಾರು ಯಾರು ಇಲ್ಲ.

ನನಗೆ ಜ್ಞಾನದ ಅರಿವಿದೆ, ಹಣದ ಗೌರವವಿದೆ, ಸಂಸ್ಕೃತಿ ಸಂಸ್ಕಾರದ ಮಾಹಿತಿ ಇದೆ ಇವೆಲ್ಲವನ್ನೂ ಕಲಿಸಿಕೊಡುವುದು ಯಾರು ಎಂದು ಹೇಳಿದಾಗ ಮೊದಲು ತಂದೆ ತಾಯಿ ನಂತರ ಶಿಕ್ಷಕರೇ ಆಗಿರುತ್ತಾರೆ. ನೀವು ಕಲಿಸಿದಂತಹ ಪ್ರತಿಯೊಂದು ವಿದ್ಯಾರ್ಥಿಗಳಲ್ಲಿ ವಿಶೇಷತೆ, ಶ್ರೇಷ್ಠತೆ ಇರುತ್ತದೆ ಪ್ರಪಂಚದ ವೈಜ್ಞಾನಿಕತೆ ಬೆಳೆಯಬೇಕೆಂದರೆ ನೀವು ಬಿತ್ತಿದಂತಹ ಬೀಜಗಳೇ ನಮ್ಮಂತಹ ವ್ಯಕ್ತಿಗಳಾಗುತ್ತೇವೆ ಇದಕ್ಕೆ ಸಾಕ್ಷಿ ನಿಮ್ಮ ಮುಂದೆ ನಿಂತಿರುವ ನಾನೇ, ನಮ್ಮಂತವರ ಮೂಲಕ ಶಿಕ್ಷಕರ ಶ್ರೇಷ್ಠತೆ ಎದ್ದು ಕಾಣುತ್ತದೆ ಎಂದರು.

ಶ್ರೀ ಮನ್ ನಿರಂಜನ ಜಗದ್ಗುರುಗಳು ಕೊಟ್ಟೂರು ಬಸವಲಿಂಗ ಮಹಾಸ್ವಾಮಿ ಹೊಸಪೇಟೆ ಇವರು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ನಾವು ಪೀಠಾಧಿಪತಿಗಳಾಗಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳ ಸಮಸ್ಯೆಗಳನ್ನು ಅವಲೋಕಿಸಿದಾಗ ಹಲವಾರು ಸಮಸ್ಯೆಗಳಿವೆ ಅವುಗಳನ್ನು ಪ್ರಸ್ತಾವಿಕ ನುಡಿಗಳಲ್ಲಿ ತಿಳಿಸಿದ್ದಾರೆ. ಭಾರತದಲ್ಲಿ ಪ್ರಾಚೀನವಾಗಿ ಹೇಳುತ್ತಾ ಬಂದಂತಹ ಮಂತ್ರ ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮಯೇ ಶ್ರೀ ಗುರುವೇ ನಮಃ ಗುರು ಬ್ರಹ್ಮವಾಗುತ್ತಾನೆ ವಿಷ್ಣು ಆಗುತ್ತಾನೆ ಮಹೇಶ್ವರ ನಾಗುತ್ತಾನೆ ಆದರೆ ಬ್ರಹ್ಮ ಗುರುವಾಗುವುದಿಲ್ಲ ವಿಷ್ಣು ಗುರು ಆಗೊದಿಲ್ಲ ಮಹೇಶ್ವರ ಗುರು ಆಗೊದಿಲ್ಲ ಯಾಕಿಲ್ಲಿ ಗುರು ಬ್ರಹ್ಮ ಆಗುತ್ತಾನೆ ಎಂದರೆ ಏನು ತಿಳಿಯದ ಮಗುವನ್ನ ನಿಮ್ಮ ಕೈಗೆ ಕೊಡುತ್ತಾರೆ ಜಾತಿ,ಮತ, ಧರ್ಮಗಳ ಭೇದವಿಲ್ಲದೆ ಇರುವ ಹೃದಯದಲ್ಲಿ ಅಕ್ಷರದ ಬೀಜವನ್ನು ಬಿತ್ತುವುದು. ಕ್ಷರ ಎಂದರೆ ನಾಶ ಎನ್ನುವ ಅರ್ಥ ಅಕ್ಷರ ಎಂದರೆ ನಾಶವಿಲ್ಲದ್ದು ನಮ್ಮ ಜೀವನದಲ್ಲಿ ತಂದೆ ತಾಯಿಗಳು ಏನನ್ನಾದರೂ ಕೊಟ್ಟಿದ್ದರು ಸಹ ಅದನ್ನು ಕಳೆದುಕೊಳ್ಳಬಹುದು ಆದರೆ ನಾವು ಜೀವವಿರುವವರೆಗೂ ನಾವು ಕಳೆದುಕೊಳ್ಳಲಾರದೆ ಇರುವಂತದ್ದು ನೀವು ಬಿತ್ತಿದ ಶಿಕ್ಷಣದ ಬೀಜ ಅದನ್ನು ಕಳೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಇಂದಿನ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಅತಿ ಹೆಚ್ಚು ಡಿಗ್ರಿ ಕಲಿತಂತವರು, ದನ ಕಾಯುವವರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೋಡಿರುವುದು ತುಂಬಾ ವಿರಳ ಹಾಗಾಗಿ ವಿದ್ಯಾರ್ಥಿಗಳಿಗೆ ಜೀವನದ ಪಾಠವನ್ನು ಶಿಕ್ಷಕರು ಕಲಿಸಬೇಕೆಂದು ಶಿಕ್ಷಣದ ಮಹತ್ವದ ಕುರಿತು ಪ್ರವಚನ ನೀಡಿದರು.

ಈ ಸಂದರ್ಭದಲ್ಲಿ ಚಂದ್ರಶೇಖರ ಪಾಟೀಲ್, ಶಶಿಲ್ ಜಿ ಮನೋಶಿ ಶಾಸಕರು ಕರ್ನಾಟಕ ವಿಧಾನ ಪರಿಷತ್, ಶರಣಪ್ಪ ಮಟ್ಟೂರು, ಅಮರನಾಥ್ ಪಾಟೀಲ್ ಮಾಜಿ ವಿಧಾನ ಪರಿಷತ್ ಸದಸ್ಯರು, ಸಿದ್ದ ಬಸಪ್ಪ ರಾಜ್ಯಾಧ್ಯಕ್ಷರು, ರಾಮು ಅ ಗುಗವಾಡ, ಬಿರಾದರ, ಧನಸಿಂಗ್ ರಾಥೋಡ, ತುಕಾರಾಂ ಭಾಗನವರ, ಎನ್ ಜಿ ಮನೋಹರ್ ಜಿಲ್ಲಾಧ್ಯಕ್ಷರು, ಕೆ ಬಿ ತಿಮ್ಮಪ್ಪ , ಶೇಖರಪ್ಪ ಎಸ್ ಗಿರೆಡ್ಡಿ, ಎಸ್ ಆರ್ ವಿಜಯ ಭಾಸ್ಕರ್ , ಹೊಸಪೇಟೆಯ ಕ್ಷೇತ್ರ ಶಿಕ್ಷಣಾಧಿಕಾರಿ ಚೆನ್ನಬಸಪ್ಪ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!