WhatsApp Image 2024-02-24 at 6.52.38 PM

ಶ್ರೀ ಬನಶಂಕರಿ ದೇವಿ ಜಾತ್ರೆ ಅದ್ದೂರಿಯಾಗಿ ಸಂಪನ್ನಗೊಂಡಿತು

ಕರುನಾಡ ಬೆಳಗು ಸುದ್ದಿ

ಅಳವಂಡಿ,24- ಸಮೀಪದ ಗೊಂಡಬಾಳ ಗ್ರಾಮದ ಶ್ರೀ ಬನಶಂಕರಿ ದೇವಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು.

ಶತಾಯುಷಿ ಶ್ರೀಮತಿ ಕಲ್ಲಮ್ಮ ಕರ್ಕಿಹಳ್ಳಿ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ಷ.ಬ್ರ. 108 ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಉಜ್ಜಿನಿ ಶಾಖಾ ಬಿಕನಳ್ಳಿ ಮೈನಳ್ಳಿ ಅವರು ಸಾನಿಧ್ಯವನ್ನು ವಹಿಸಿ ಮಾತನಾಡಿ ಶತಾಯುಷಿ ಶ್ರೀಮತಿ ಕಲ್ಲಮ್ಮ ಕರ್ಕಿಹಳ್ಳಿ ಅವರು ಈ ರಥೋತ್ಸವಕ್ಕೆ ಚಾಲನೆ ನೀಡುವುದು ಹೆಮ್ಮೆಯ ವಿಷಯ. ಮನುಷ್ಯನಿಗೆ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ಸವಾಲಾಗಿ ಪರಿಣಮಿಸಿದೆ. ಆದ್ದರಿಂದ ನಾವೆಲ್ಲ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಸಮಾಜದ ಸ್ವಾಸ್ಥ್ಯ ಕಾಪಾಡಬೇಕೆಂದು ಕರೆ ನೀಡಿದರು.

ಸಾವಿರಾರು ಭಕ್ತರು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು. ನಂತರ ಸಾಧಕರಿಗೆ ಸನ್ಮಾನ ಕಾರ್ಯಕ್ರಮ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಗೊಂಡಬಾಳ ಗ್ರಾಮದ ನಿಂಗಜ್ಜ ಜಹಗೀದಾರ್, ಹೊನ್ನಪ್ಪ ಮೆತಗಲ್, ಈಶಪ್ಪ ಹಲಗೇರಿ, ಮಂಜುನಾಥ ಹಳ್ಳಿಕೇರಿ, ಶಂಕ್ರಪ್ಪ ಚಳಗೇರಿ, ಪ್ರದಾನೆಪ್ಪ ಅಂಡಿ, ದೇವೇಂದ್ರಪ್ಪ ಬಗನಾಳ, ಹಾಗೂ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಗ್ರಾಮ ಪಂಚಾಯತಿ ಗೊಂಡಬಾಳ, ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!