ಕಟ್ಟಡಕ್ಕೆ ಅನುದಾನ ನೀಡಲು ಶಾಸಕರಿಗೆ ಗುಡದಪ್ಪ ಮನವಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,24- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ ಹಲಗೇರಿ ಯಲ್ಲಿ ನಿವೇಶನ ಭೂಮಿ ಇದ್ದು ಸದರಿ ನಿವೇಶನದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಸರ್ಕಾರದಿಂದ ವಿಶೇಷ 10 ಲಕ್ಷ ಅನುದಾನವನ್ನು ಒದಗಿಸಿ ಕೊಡಬೇಕೆಂದು ಶಾಸಕ ಕೆ ರಾಘವೇಂದ್ರ ಹಿಟ್ನಾಳ್ ರವರಿಗೆ ಸಂಘದ ಅಧ್ಯಕ್ಷ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗ ಗುಡದಪ್ಪ ಬಾನಪ್ಪನವರ್ ಹಲಗೇರಿ ಅವರು ಮನವಿ ಮಾಡಿಕೊಂಡರು.
ಹಲಗೇರಿ ಗ್ರಾಮದಲ್ಲಿ ಶಾಸಕರು ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಮನವಿ ಪತ್ರ ಅರ್ಪಿಸಿ ಸಂಘದ ಕಟ್ಟಡ ನಿರ್ಮಾಣಕ್ಕೆ ಅನುದಾನ ವಿಶೇಷ ಅನುದಾನ ಸರ್ಕಾರದ ವತಿಯಿಂದ ಒದಗಿಸಿ ಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದರು.
ಈ ಸಂದರ್ಭದಲ್ಲಿ ಅನೇಕ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಅಧಿಕಾರಿ ವರ್ಗದವರು ಸಹ ಪಾಲ್ಗೊಂಡಿದ್ದರು
