ಭಾರತೀಯತೆ ಎತ್ತಿ ಹಿಡಿದ ಶ್ರೀ ಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,25- ಮಕ್ಕಳಲ್ಲಿ ಜಾತಿ, ಭೇದ, ಭಾವ ಇರಬಾರದೆಂಬ ಸಂಕಲ್ಪದಿಂದ ವಸುದೈವ ಕುಟುಂಬಕಂ ಎಂಬ ಶೀರ್ಷಿಕೆಯಡಿ ತೊಗಲುಗೊಂಬೆ ಪ್ರದರ್ಶನ ಏರ್ಪಡಿಸಲಾಗಿದ್ದು, ಬಳ್ಳಾರಿಯ ಶ್ರೀ ಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್ ಭಾರತೀಯತೆಯನ್ನು ಎತ್ತಿ ಹಿಡಿಯಿತು.
ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ನ್ಯೂ ದೆಹಲಿ ಎಂಬ ಶೀರ್ಷಿಕೆ ಅಡಿಯಲ್ಲಿ ಜನ್ ಭಾರತ್ ರಂಗ ಮಹೋತ್ಸವ 25ನೇ ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ತೊಗಲುಗೊಂಬೆ ಪ್ರದರ್ಶನ ಜರುಗಿತು.
ಐಕ್ಯತೆ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಭಾರತದಾದ್ಯಂತ ಹಮ್ಮಿಕೊಂಡ ಎಲ್ಲಾ ಕಲಾ ಪ್ರಕಾರದೊಂದಿಗೆ ಏಕಕಾಲದಲ್ಲಿ ಪ್ರದರ್ಶನ ಗೊಂಡವು. ಇದರ ಮೂಲ ಉದ್ದೇಶ ನಾವೆಲ್ಲರೂ ಭಾರತೀಯರು. ಭಾರತ ತಾಯಿಯ ಮಕ್ಕಳು. ಜಾತಿ, ಧರ್ಮ, ಭೇದ, ಭಾವ ಇರಬಾರದು. ನಮ್ಮ ಹಿರಿಯರ ಕಾಲದಿಂದ ಬಂದಂತಹ ಆಚರಣೆ-ವಿಚಾರಣೆ ಸಾಂಸ್ಕøತಿಕ ಕಾರ್ಯಕ್ರಮಗಳು ಮುಂದುವರಿಸಕೊಂಡು ಹೋಗುವುದು ಮುಖ್ಯ ಉದ್ದೇಶವಾಗಿದೆ ಎಂದು ಬಿಂಬಿಸಲಾಯಿತು.
ಶ್ರೀ ಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್ ನ ಅಧ್ಯಕ್ಷÀ ಸುಬ್ಬಣ್ಣ ಭಾರತೀಯತೆ ಮತ್ತು ಭ್ರಾತೃತ್ವದ ಕುರಿತು ಮಾತನಾಡಿದರು. ಬಳಿಕ ಕಲಾ ತಂಡದ ಕಲಾವಿದರಿಂದ “ವಸುದೈವ ಕುಟುಂಬಂಕಂ” ತೊಗಲುಗೊಂಬೆ ಕಲಾವಿದರು ನಡೆಸಿಕೊಟ್ಟ ಪ್ರದರ್ಶನ ಯಶಸ್ವಿ ಗೊಂಡಿತು.
