03 TVR 01

ಪೋಲಿಯೊ ಲಸಿಕೆ ದಿನ : 240 ಮಕ್ಕಳಿಗೆ ಲಸಿಕೆ ಹಾಕುವ ಗುರಿ

ಕರುನಾಡ ಬೆಳಗು ಸುದ್ದಿ

ತಾವರಗೇರಾ,3- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕೊಪ್ಪಳ. ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ,ಸಮುದಾಯ ಆರೋಗ್ಯ ಕೇಂದ್ರ ತಾವರಗೇರಾ ಇವರ ಸಯುಕ್ತ ಆಶ್ರಯದಲ್ಲಿ ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಟಿಮ್ ನಂ-3, ಕರಿವೀರಭದ್ರೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ 12 ಗಂಟೆಗೆ ಸುಮಾರು 84 ಮಕ್ಕಳಿಗೆ ಲಸಿಕೆಯನ್ನು ಹಾಕಲಾಗಿತ್ತು. ಈದಿನ 240 ಮಕ್ಕಳಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ ಎಂದು ತುಳಜಾಬಾಯಿ ಅಂಗನವಾಡಿ ಶಿಕ್ಷಕಿ ತಿಳಿಸಿದ ರು.

ಪ್ರತಿ 5ವರ್ಷದ ಒಳಗಿನ ಮಗುವಿಗೆ ಪೋಲಿಯೊ ಲಸಿಕೆ ಕಡ್ಡಾಯವಾಗಿ ಹಾಕಿಸಬೇಕು ಎಂದರು.

ಭಾರತವು ಪೋಲಿಯೊ ಮುಕ್ತ ದೇಶವಾಗಿದೆ, ಆದರೆ ಇನ್ನು ಕೆಲವು ದೇಶಗಳಲ್ಲಿ ಈ ರೋಗದ ಲಕ್ಷಣಗಳು ಕಂಡುಬರುತ್ತಿದ್ದು ಭೀತಿಯನ್ನು ಉಂಟುಮಾಡುತ್ತಿದೆ, ಆದಕಾರಣ ನಮ್ಮ ದೇಶದಲ್ಲಿಯು ಮರುಕಳಿಸುವ ಸಾಧ್ಯತೆ ಇದೆ, ಕಾರಣ ಪ್ರತಿ ಬಾರಿಯು ೨ ಹನಿ ಪೋಲಿಯೊ ಲಸಿಕೆ ಹಾಕಿಸಿ ನಿಮ್ಮ ಮಗುವಿನ ಸಂಪೂರ್ಣ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಿ ಹಾಗು ಶಾಶ್ವತ ಅಂಗವಿಕಲತೆಯನ್ನು ತರಬಲ್ಲ ಪೋಲಿಯೊವನ್ನು ಲಸಿಕೆಯ ಮೂಲಕ ಪ್ರತಿರೋಧಿಸೋಣ ಎಂದು ಸರ್ಕಾರಿ ಪ್ರಕಟನೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!