WhatsApp Image 2024-03-03 at 6.26.40 PM

ಮರಿಯಮ್ಮನಹಳ್ಳಿ : ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ

ಕರುನಾಡ ಬೆಳಗು ಸುದ್ದಿ

ಮರಿಯಮ್ಮನಹಳ್ಳಿ,3- ರಾಷ್ಟ್ರೀಯ ಪಲ್ಸ್ ಪೋಲಿಯೋ-2024 ಅಂಗವಾಗಿ ಪಟ್ಟಣದ ಪ್ರಾಥಮಿಕ ಅರೋಗ್ಯ ಕೇಂದ್ರದಿಂದ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯರಾದ ಡಾ. ಮಂಜುಳಾ ಮಾತನಾಡಿ ಈ ಅಭಿಯಾನವು ನಾಲ್ಕು ದಿನಗಳವರೆಗೆ ಇರುತ್ತದೆ ತಾಯಂದಿರು ಮಕ್ಕಳಿಗೆ ತಪ್ಪದೆ ಪೋಲಿಯೋ ಲಸಿಕೆ ಹಾಕಿಸಲು ಮನವಿ ಮಾಡಿದರು.

ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ಡಣನಾಯಕನಕೆರೆ, ನಾಗಲಾಪುರ, ದೇವಲಾಪುರ, ನಂದಿಬಂಡಿ, ಡನಾಪುರ, ಹನುಮನಹಳ್ಳಿ, ಗಾಳೆಮ್ಮನಗುಡಿ, ವೆಂಕಟಾಪುರ, ಹಂಪಿನಕಟ್ಟಿ, ಮತ್ತು ವ್ಯಾಸನಕೇರಿ ಅಯ್ಯನಹಳ್ಳಿ, ನಂದಿಬಂಡಿ ಗ್ರಾಮಗಳಲ್ಲಿ ಒಟ್ಟು 5,868 ಮಕ್ಕಳಿದ್ದು, ಸಾಯಂಕಾಲದ ಹೊತ್ತಿಗೆ 5,861, ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗಿದೆ. ಶೇಕಡಾ 99.88 ವರೆಗೂ ಗುರಿ ಸಾಧಿಸಲಾಗಿದೆ ಎಂದರು.

ಈ ಸಂಧರ್ಭದಲ್ಲಿ ಬಿ ಎಂ ಎಸ್ ರಾಜು ಸದಸ್ಯರು, 4ನೇ ವಾರ್ಡ್ ಡಾ. ರಾಧಾ ಕೃಷ್ಣ, ಭರತ್ ಕುಮಾರ್ ಸಿ ಹೆಚ್ ಓ, ಡಿ ಬಿ ತಳವಾರ್ ಎಸ್ ಹೆಚ್ ಐ ಓ, ಎಲ್. ನಾರಾಯಣ ಎಸ್ ಐ ಓ , ದೇವೇಂದ್ರಪ್ಪ ಎಸ್ ಆರ್ ಹೆಚ್ ಐ, ಮಾರೆಕ್ಕ ಆಶಾಕಾರ್ಯಕರ್ತೆ ಇದ್ದರು.

Leave a Reply

Your email address will not be published. Required fields are marked *

error: Content is protected !!