02f62921-6b95-455f-b2fb-cd7b5830b2e9

ಸರಕಾರಿ ಶಾಲೆಯ ವಿದ್ಯಾರ್ಥಿಗಳೆ ಸ್ರ್ಟಾಂಗ್

ಲಯನ್ಸ್ ಕ್ಲಬ್ ಅಧ್ಯಕ್ಷ ಸಿದ್ದರಾಮೇಶ್ವರಗೌಡ

 

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 03- ಸರಕಾರಿ ಶಾಲೆಯ ವಿದ್ಯಾರ್ಥಿಗಳೆ ಸ್ರ್ಟಾಂಗ್, ಕಷ್ಟ ಮತ್ತು ಸುಖಕ್ಕೆ ಹೊಂದಿಕೊಂಡು ಸಾಗುವ ಶಕ್ತಿ ಹಳ್ಳಿಯ ವಿದ್ಯಾರ್ಥಿಗಳಿಗೆ‌ ಇದೆ‌ ಎಂದು ಹಿರಿಯ ಲೆಕ್ಕಪರಿಶೋಧಕ, ಲಯನ್ಸ್ ಕ್ಲಬ್ ಅಧ್ಯಕ್ಷ ಸಿದ್ದರಾಮೇಶ್ವರಗೌಡ ತಿಳಿಸಿದರು.

ಉದ್ಯಮಿ ಜೋಳದರಾಶಿ ತಿಮ್ಮಪ್ಪ ಅವರು ತಮ್ಮ ತಂದೆ  ಬಿ.ಶ್ರೀ ಎರ್ರಿಸ್ವಾಮಿ ಅವರ ಸ್ಮರಣಾರ್ಥ ಬಳ್ಳಾರಿ ತಾಲೂಕಿನ ಸೋಮಸಮುದ್ರ ಗ್ರಾಮದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ  ಉಚಿತ ಪರೀಕ್ಷೆ ಪ್ಯಾಡ್ ಮತ್ತು ಪೆನ್ ಗಳನ್ನು ವಿತರಿಸಿ ಮಾತನಾಡಿದರು.

ಇತಿಹಾಸ ಪುಟ ನೋಡಿದಾಗ ಸರಕಾರಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ, ಕಲಿಕೆಗೆ ಶ್ರೀಮಂತಿಕೆ, ಬಡತನ ಎನ್ನುವುದಕ್ಕಿಂತ ಕಲಿಕೆಯ ಮನಸ್ಸು ಮುಖ್ಯ, ಇದೇ ಸಾಧನೆ ದೊಡ್ಡಶಕ್ತಿ ಎಂದು ತಿಳಿಸಿದರು.

ದಾನಿ ಜೋಳದರಾಶಿ ತಿಮ್ಮಪ್ಪ ಮಾತನಾಡಿ, ಖಾಸಗಿ ಶಾಲೆಯ ಮಕ್ಕಳು ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯ ಎಂಬ ತಪ್ಪು ಕಲ್ಪನೆಯಿಂದ ಹೊರಬರಬೇಕು, ಸರಕಾರಿ ಶಾಲೆಗಳು ಬಲಿಷ್ಟವಾಗಬೇಕೆಂಬ ಆಶಯ ನಮ್ಮದಾಗಿದೆ ಎಂದರು.

ಈ ಸಂದರ್ಭದಲ್ಲಿ  ಪತ್ರಕರ್ತರಾದ ಕೆ.ಎಂ.ಮಂಜುನಾಥ್, ಶಶಿಧರ್ ಮೇಟಿ, ಭಾರತೀಯ ಮಿಲ್ಕ್ ಪ್ರೊಡೆಕ್ಟ್ಸ್ ಪುರುಷೊತ್ತಮ, ರಂಗಕಲಾವಿದ ಪುರುಷೋತ್ತಮ ಹಂದ್ಯಾಳ, ಮುಖ್ಯೋಪಾಧ್ಯಾಯ ನಾಗರಾಜ್ , ಗ್ರಾಪಂ ಅಧ್ಯಕ್ಷ ರಮೇಶ್, ಗ್ರಾಮದ ಮುಖಂಡ ಜಂಬುನಾಥ್, ನಿತ್ಯನಂದಗೌಡ, ಜೋಳದರಾಶಿ ಶೇಕ್ಷಾವಲಿ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!