WhatsApp Image 2024-03-07 at 2.47.21 PM

ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ಮುಂಡರಗಿ ನಾಗರಾಜ್ ಪದಗ್ರಹಣ

ಕರುನಾಡ ಬೆಳಗು ಸುದ್ದಿ

ವಿಜಯನಗರ,7- ಕರ್ನಾಟಕ ಸರ್ಕಾರದ ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ಬಿ ಮುಂಡರಗಿ ನಾಗರಾಜ್ ರವರು ಇಂದು ಅಧಿಕಾರ ವಹಿಸಿಕೊಂಡರು.

ಬೆಂಗಳೂರಿನ ಲಿಡ್ಕರ್ ಭವನದಲ್ಲಿ ಇಂದು ತಮ್ಮ ಕುಟುಂಬ ವರ್ಗದವರು, ಹಿತೈಷಿಗರು, ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ತೆರಳಿ ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಕೆ.ಎಂ. ವಸುಂದರಾ ರವರು, ಮಾಜಿ ವಿಧಾನಪರಿಷತ್ ಸದಸ್ಯರಾದ ಕೆ.ಎಸ್.ಎಲ್ ಸ್ವಾಮಿ ರವರು, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಕವಿತಾ ರೆಡ್ಡಿ, ಕಾಂಗ್ರೆಸ್ ಮುಖಂಡರಾದ ವೆಂಕಟೇಶ್ ಪ್ರಸಾದ್, ಬೆಣಕಲ್ಲು ಬಸವರಾಜ್ ಗೌಡ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಬಳ್ಳಾರಿ ಜಿಲ್ಲಾ ಸಂಚಾಲಕರಾದ ಜಿ ಗೋವರ್ಧನ, ವಿಜಯನಗರ ಜಿಲ್ಲಾ ಸಂಚಾಲಕರಾದ ಎಸ್ ದುರುಗೇಶ್, ಜಿಲ್ಲಾ ಸಂಘಟನಾ ಸಂಚಾಲಕರಾದ ನಟರಾಜ, ಸಣ್ಣ ನಾಗರಾಜ, ಫೋಟೋರಾಜ, ಕದಸಂಸ ಮುಖಂಡರಾದ ಬಾಪೂಜಿನಗರ ವೆಂಕಟೇಶ್, ಬಳ್ಳಾರಿ ನಗರ ಸಂಚಾಲಕರಾದ ಗುರುದೇವ, ಬಳ್ಳಾರಿ ತಾಲೂಕು ಸಂಚಾಲಕರಾದ ಹೊನ್ನೇಶ್, ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕರಾದ ಅರುಣ್ ಕುಮಾರ್ ಮುಂಡ್ರಿಗಿ, ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!