ಆನೆಗೋಂದಿ ಉತ್ಸವ-2024
ಹೋನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗೆ ಶಾಸಕ ಜನಾರ್ಧನರೆಡ್ಡಿ ಚಾಲನೆ
ಕರುನಾಡ ಬೆಳಗು ಸುದ್ದಿ
ಗಂಗಾವತಿ,9- 11-12ರಂದು ನಡೆಯುವ ಆನೆಗೋಂದಿ ಉತ್ಸವಕ್ಕೆ ಸರ್ವರೂ ಕೈಜೋಡಿಸಿ ಎಂದು ಶಾಸಕ ಗಾಲಿ ಜನಾರ್ಧನರೆಡ್ಡಿ ಹೇಳಿದರು.
ತಾಲೂಕಿನ ಆನೆಗೋಂದಿಯಲ್ಲಿ ಹೋನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ ಸರ್ವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ದೇಶಿಯ ಎಲ್ಲಾ ಕ್ರಿಡೆಗಳಾದ ಮಲ್ಲಕಂಬ, ಕಬ್ಬಡಿ, ಕೆಸರಗದ್ದೆಯಾಟ, ಸಾಹಸ ಜಲ ಕ್ರಿಡೆಗೆ ಒತ್ತು ನಿಡಲಾಗಿದೆ.
ಎರಡು ದಿನಗಳ ಆನೆಗೋಂದಿ ಉತ್ಸವದಲ್ಲಿ ಧ್ರುವ ಸರ್ಜಾ, ಶ್ರೀ ಮುರಳಿ, ಸಂಗಿತ ನಿರ್ದೇಶಕ ಹಂಸಲೇಖ, ಅರ್ಜುನ ಜನ್ಯ ಇನ್ನಿತರ ತಂಡಗಳಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.
ಈಸಂದರ್ಭದಲ್ಲಿ ಸಹಾಯಕ ಆಯುಕ್ತ ಕ್ಯಾಪ್ಟನ್ ಮಾಲಗಿತ್ತಿ, ಲಕ್ಷ್ಮಿ ಅರುಣಾ, ಆನೆಗೋಂದಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಹಾದೇವಿ, ಟಿ.ಮಾಲಗಿತ್ತಿ, ತಹಶೀಲ್ದಾರ ಯು ನಾಗರಾಜ, ತಾಲೂಕ ಪಂಚಾಯತ ಇಓ ಲಕ್ಷ್ಮೀ ದೇವಿ, ಮನೋಹರಗೌಡ ಹೇರೂರ, ಯಮನೂರ ಚೌಡ್ಕಿ, ಅಲಿಖಾನ, ಚಂದ್ರು ಹಿರೂರ, ಜಿಲಾನಿಖಾದ್ರಿ, ದುರುಗಪ್ಪ ದಳಪತಿ, ಟಿಜಿ ಬಾಬು, ತಿಮಪ್ಪ ಬಾಳೆಕಾಯಿ ಮುಂತಾದವರು ಉಪಸ್ಥಿತರಿದ್ದರು.

