IMG_20240309_144336

 

ನ‌ದಾಫ್/ ಪಿಂಜಾರ ಸಮಾಜದ  ಪದಾಧಿಕಾರಿಗಳ ಪದಗ್ರಹಣ 

ಸಮಾಜಕ್ಕೆ ಸರ್ಕಾರಿ ಸೌಲಭ್ಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ – ಶಾಸಕ ಹಿಟ್ನಾಳ 

ನ‌ದಾಫ್/ ಪಿಂಜಾರ ಸಮಾಜ ನಿರ್ಲಕ್ಷ್ಯ – ಹೆಚ್ಚ್ , ಜಲೀಲಸಾಬ

 

ಕರುನಾಡ ಬೆಳಗು ಸುದ್ದಿ
ಕೊಪ್ಪಳ, 09- ಸರ್ಕಾರದ ಸೌಲಭ್ಯ ಸಿಗದ ಜಾತಿಗಳಿಗೆ ಸೌಲಭ್ಯ ಒದಗಿಸಲು ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ಮಾಡಿಸುತ್ತಿದ್ದಾರೆ ಮುಖ್ಯಮಂತ್ರಿಗಳನ್ನು ಸಮಾಜದ ಮುಖಂಡರನ್ನು‌ ಬೇಟಿ‌ ಮಾಡಿಸಿ ನ‌ದಾಫ್/ ಪಿಂಜಾರ ಸಮಾಜದ ಬೇಡಿಕೆಗಳನ್ನು ಇಡೆರಿಸಲು‌ ಪ್ರಮಾಣಿಕ ಪ್ರಯತ್ನ ‌ಮಾಡುವುದಾಗಿ ಶಾಸಕ ಕೆ ರಾಘವೇಂದ್ರ ಹಿಟ್ನಾಳ ಹೇಳಿದರು.

ನಗರದ ಶಾದಿಮಹಲ್ ನಲ್ಲಿ ಶನಿವಾರ ಶಿವಮೊಗ್ಗದ ರಾಜ್ಯ ನದಾಫ್/ಪಿಂಜಾರ ಸಂಘದ ಆಶ್ರಯದಲ್ಲಿ ನಡೆದ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದಗ್ರಹಣ ಹಾಗೂ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಿದ್ದರಾಮಯ್ಯನವರು ಅಲ್ಪಸಂಖ್ಯಾತರಿಗೆ ಹೆಚ್ಚು ಅನುದಾನ ನೀಡಿದ್ದಾರೆ. ಈ ನಿಟ್ಟಿನಲ್ಲಿ ಕಾಂತರಾಜು ವರದಿ ಸಹಕಾರಿ ಆಗಲಿದೆ. ಸರ್ಕಾರದ ಸೌಲಭ್ಯ ಒದಗಿಸಲು ನಿಮ್ಮ ಜತೆ ಕೈಜೋಡಿಸುತ್ತೇನೆ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮುಂಚೂಣಿಗೆ ಬರಬೇಕಿದೆ.
ಎಲ್ಲರನ್ನೂ ಸಮಾನವಾಗಿ ಕಂಡಾಗ ಮಾತ್ರ ಬಸವಣ್ಣನವರ ಆಶಯ ಸಾಕಾರಗೊಳ್ಳುತ್ತದೆ. ಖಂಡಿತವಾಗಿ ಅರ್ಧಗಂಟೆ ಸಮಯ ಸಿದ್ದರಾಮಯ್ಯನವರಿಂದ ಕೊಡಿಸುತ್ತೇನೆ. ಸಿ.ಎ ಸೈಟ್ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದರು.

ಶಿವಮೊಗ್ಗದ ರಾಜ್ಯ ನದಾಫ್/ಪಿಂಜಾರ ಸಂಘದ ರಾಜ್ಯಾಧ್ಯಕ್ಷ ಎಚ್.ಜಲೀಲ್ ಸಾಬ್ ಮಾತನಾಡಿ ಇಷ್ಟು ವರ್ಷಗಳಾದರೂ ಜನಜಾಗೃತಿ ಆಗಿಲ್ಲ. ಈಗಲಾದರೂ ಸರ್ಕಾರದ ಸೌಲಭ್ಯ ಪಡೆಯಲು ಜನಜಾಗೃರಾಗಬೇಕು ಎಂದು ಹೇಳಿದರು.

ಸಂಘಕ್ಕೆ ವಿಶೇಷ ಸಹಕಾರ ನೀಡಿದ್ದೀರಿ. ಸಮಾಜದ ಅಸ್ತಿತ್ವ ತೋರಿಸುತ್ತಿದ್ದೇವೆ. ಸಂಘದಲ್ಲಿ ಶೇ.೧೫ರಷ್ಟು ಕನಿಷ್ಠ ಸರ್ಕಾರದವರು ನಮ್ಮನ್ನು ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸ್ಥಾನಮಾನ ನೀಡಬೇಕು. ಪ್ರವರ್ಗ-೧ರಲ್ಲಿ ಇದ್ದೇವೆ ಎಂದು ಸರ್ಕಾರದ ಅಧಿಕಾರಿಗಳಿಗೆ ಗೊತ್ತಿಲ್ಲ. ಶಾಲಾ ದಾಖಲೆ ಆಧಾರದ ಮೇಲೆ ಮಾತ್ರ ಪ್ರಮಾಣ ಪತ್ರ ನೀಡಬಾರದು. ಬದಲಿಗೆ ಸಂಸ್ಕೃತಿ ಆಧಾರದ ಮೇಲೆ ಪ್ರವರ್ಗ-೧ರ ಪ್ರಮಾಣಪತ್ರ ನೀಡಬೇಕು. ೪೫ ಕ್ಷೇತ್ರಗಳಲ್ಲಿ ನಾವು ನಿರ್ಣಾಕರಾಗಿದ್ದೇವೆ‌.‌ ಇದನ್ನು ರಾಜಕೀಯ ಅಧಿಕಾರ ಬೇಡ. ಬದಲಿಗೆ ಸೌಲಭ್ಯಗಳನ್ನು ನೀಡಬೇಕು‌. ಜಾಗೃತರಾಗಿ ಸವಲತ್ತುಗಳನ್ನು ಪಡೆಯಬೇಕು.

೧೦ ತಿಂಗಳಾದರೂ ಸಮಾಜಕ್ಕೆ ಸಿದ್ದರಾಮಯ್ಯನವರಿಗೆ ಭೇಟಿಗೆ ಸಮಯ ನೀಡುತ್ತಿಲ್ಲ. ರಾಜ್ಯಮಟ್ಟದಲ್ಲಿ ಮುಸ್ಲಿಂ ಸಮಾಜದವರು ಮತ್ತು ಪಿಂಜಾರ್ ಸಮಾಜದವರು ಒಗ್ಗಟ್ಟಾಗಿಲ್ಲ. ತಳಮಟ್ಟದಲ್ಲಿ ಒಗ್ಗಟ್ಟಾಗಿದ್ದೇವೆ. ಅಂಕಿ-ಅಂಶಗಳಲ್ಲಿ ಮುಸ್ಲಿಂ ಎಂದು ತೋರಿಸಿ, ಅಧಿಕಾರ ಪಡೆಯುತ್ತಾರೆ. ಆದರೆ ಪಿಂಜಾರ ಸಮುದಾಯದವರಾದ ನಾವು ಅಧಿಕಾರ ಮತ್ತು ಸೌಲಭ್ಯಗಳಿಂದ ವಂಚಿತರಾಗುತ್ತೇವೆ. ಭಾಷೆ, ನಮಾಜ್ ಬರುವುದಿಲ್ಲ ಎಂದು ಕೀಳರಿಮೆಯಿಂದ ಕಾಣುತ್ತಾರೆ. ಹಾಗಾಗಿ ಧಾರ್ಮಿಕ ಶಿಕ್ಷಣವನ್ನು ಉಚಿತವಾಗಿ ನೀಡುತ್ತಿದ್ದೇವೆ.

ಬಳ್ಳಾರಿ ಹೊರತುಪಡಿಸಿದರೆ ಹೆಚ್ಚು ದೇಣಿಗೆ ನೀಡುವವರು ಕೊಪ್ಪಳ ಜಿಲ್ಲೆಯವರು ಎನ್ನಲು ಹೆಮ್ಮೆ ಎನಿಸುತ್ತದೆ. ಹಾಗಾಗಿ ಬಡ ವಿದ್ಯಾರ್ಥಿಗಳನ್ನು ಕಳುಹಿಸಿಕೊಡಿ, ಪ್ರತಿವರ್ಷ ೨೦ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಶಿಕ್ಷಣ ನೀಡುತ್ತೇವೆ.

ಮೂಲ ಕಸುಬಾದ ಗಾದಿ ಹೊಲಿಯುವ ವೃತ್ತಿಯವರನ್ನು ತಲುಪಲಾಗುತ್ತಿಲ್ಲ. ವ್ಯಕ್ತಿತ್ವದ ಒಡೆಯನಿಗೆ ನಮ್ಮ ನೋವು ತಲುಪಿಲ್ಲ. ಹಾಗಾಗಿ ಒಡೆಯನನ್ನು ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ನಾವು. ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತ ಇಲಾಖೆ ಎರಡೂ ಇಲಾಖೆಗಳಿಂದ ಅನುದಾನ ಕೊಡಿಸಬೇಕು.
ಮೊರಾರ್ಜಿ ವಸತಿ ಶಾಲೆಗಳಲ್ಲಿ ಪಿಂಜಾರ ಸಮುದಾಯವರಿಗೆ ಮೀಸಲಾತಿ ನೀಡಬೇಕು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ರಾಜ್ಯ ಮತ್ತು ತಾಲ್ಲೂಕು ಮಟ್ಟದ ನಾಮನಿರ್ದೇಶನಕ್ಕೆ ಮುಸ್ಲಿಂರ ಜತೆಗೆ ಪಿಂಜಾರ ಸಮಾಜದವರನ್ನು ಪರಿಗಣಿಸಬೇಕು. ಕೇಂದ್ರ ಸರ್ಕಾರದ ಹಿಂದುಳಿದ ವರ್ಗದ ಶೇ. ೨೭ರಷ್ಟು ಮೀಸಲಾತಿಯಲ್ಲಿ ಪಿಂಜಾರ ಸಮುದಾಯಕ್ಕೆ ಒಳಮೀಸಲಾತಿ ನೀಡಬೇಕು. ಸಮುದಾಯವರು ಐಎಎಸ್ ಮತ್ತು‌ ಐಪಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅನುಕೂಲ ಆಗಲಿದೆ‌.

ಸೈಯ್ಯದ ಪೌಂಡೇಶನ್ ಅಧ್ಯಕ್ಷ ಕೆ.ಎಂ.ಸೈಯ್ಯದ್ ಮಾತನಾಡಿ, ಸಮಾಜದ ಜನರು ಕಷ್ಟಪಟ್ಟು ಶಿಕ್ಷಣ, ಸಂಘಟನೆಯಲ್ಲಿ ಮುಂಚೂಣಿಯಲ್ಲಿರುತ್ತದೆ. ಉಚಿತ ಸಾಮೂಹಿಕ ವಿವಾಹ ಮಾಡಿಸುತ್ತಾರೆ. ಸಮಾವೇಶ ನಡೆಸಲಾಯಿತು. ಇಬ್ರಾಹಿಂ ಸಾಬ್ ಅವರ ಗುರುವಿ‌ನ ಶಕ್ತಿ, ಸಿದ್ದರಾಮಯ್ಯರ ನೇತೃತ್ವದಲ್ಲಿ ಶೇ. ೪ರಷ್ಟು ಮೀಸಲಾತಿ ಹಾಗೂ ನದಾಫ್ ನಿಗಮಕ್ಕೆ ಅನುದಾನ ನೀಡಿ, ಕಾರ್ಯಪ್ರವೃತ್ತ ಗೊಳಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಇಡಲಾಗಿದೆ. ಶಿಕ್ಷಣ ಮುಖ್ಯವಾಗಿದ್ದು, ಎಲ್ಲರೂ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ನೋವು ಯಾರ ಬಳಿ ಹೇಳಬೇಕು ಎಂಬುದು ಅರ್ಥವಾಗುತ್ತಿಲ್ಲ. ಒಗ್ಗಟ್ಟು ಇದ್ದಾಗ ಮಾತ್ರ ಅಧಿಕಾರ ಸಿಗಲಿದೆ. ಅಧಿಕಾರ ಸಿಕ್ಕಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.

 

ಸಂಘದ ಜಿಲ್ಲಾ ಪ್ರತಿನಿಧಿ ಕಾಸೀಂಸಾಬ್ ಸಂಕನೂರು ಪ್ರಾಸ್ತಾವಿಕ ಮಾತನಾಡಿ, ೧೯೯೩ರಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಇಬ್ರಾಹಿಂ ಸಾಬ್ ನೇತೃತ್ವದಲ್ಲಿ ಸ್ಥಾಪಿಸಲಾಯಿತು. ಜಿಲ್ಲೆಯಲ್ಲಿ ೬೦-೬೫ ಸಾವಿರ ಜನಸಂಖ್ಯೆ ಹೊಂದಿದ್ದೇವೆ. ಸಾಮಾಜಿಕ, ಆರ್ಥಿಕ‌ ಹಾಗೂ ಹಿಂದುಳಿದ ಸಮಾಜದ ಹೇಳಿಗಾಗಿ ಗಮನ ಸೆಳೆಯುವ ಕೆಲಸ ಮಾಡಲಾಗುತ್ತಿದೆ. ೪೦ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಜವಾಬ್ದಾರಿ ತೆಗೆದುಕೊಳ್ಳಲಾಗಿದೆ. ರಂಜನಾ ಸಂದರ್ಭದಲ್ಲಿ ಜಕಾತ್ ಸಂಗ್ರಹಿಸಿ, ಉನ್ನತ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಧಾರ್ಮಿಕ ಶಿಕ್ಷಣವನ್ನು ಊಟ ಮತ್ತು ವಸತಿಯೊಂದಿಗೆ ಉಚಿತವಾಗಿ ನೀಡಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರು ಬೆಂಗಳೂರಿನಲ್ಲಿ ಒಂದೂವರೆ ಎಕರೆ ಜಮೀನು ನೀಡಿದ್ದಾರೆ. ಹಿಂದುಳಿದ ವರ್ಗಗಳಿಗೆ ೧,೬೦೦ ಕೋಟಿ ಅನುದಾನ ನೀಡಿದ್ದು, ಈ ಪೈಕಿ ನಮ್ಮ ಸಮುದಾಯಕ್ಕೆ ಯಾವುದೇ ಅನುದಾನ ನೀಡಿಲ್ಲ. ನೂತನ ಪದಾಧಿಕಾರಿಗಳು ಸಮಾಜದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಕುರಾನ್ ಪಠಣದೊಂದಿಗೆ ಕಾರ್ಯಕ್ರಮ ಚಾಲನೆ ನೀಡಲಾಯಿತು. ನೂತನ ಪದಾಧಿಕಾರಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಕ್ಯಾಲೆಂಡರ್ ಬಿಡುಗಡೆ ಗೊಳಿಸಲಾಯಿತು.

ಸಂಘದ ನೂತನ ಜಿಲ್ಲಾಧ್ಯಕ್ಷ ಕಾಸೀಂಅಲಿ ಮುದ್ದಾಬಳ್ಳಿ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ್,ಸಂಘದ ಮಹಿಳಾ ಘಟಕದ ನಿಕಟಪೂರ್ವ ಜಿಲ್ಲಾಧ್ಯಕ್ಷೆ ರೇಷ್ಮಾ ಖಾಜಾವಲಿ, ನೂತನ ಜಿಲ್ಲಾಧ್ಯಕ್ಷೆ ಸಲ್ಮಾ ಜಹಾನ್, ಸಮಾಜದ ಮುಖಂಡ ಭಾಷುಸಾಬ್ ಖತೀಬ್, ಸರ್ಧಾರ ಗಲ್ಲಿ ಮುಸ್ಲಿಂ ಪಂಚ ಕಮಿಟಿಯ ಅಧ್ಯಕ್ಷ ಖಾದರಸಾಬ್ ಕುದ್ರಿಮೋತಿ, ನಗರಸಭೆ ಸದಸ್ಯ ಅಮ್ಜದ್ ಪಟೇಲ್, ಮಾಜಿ ನಗರಸಭೆ ಸದಸ್ಯ ಮಾನ್ವಿಪಾಷಾ, ಸೈಯ್ಯದ್ ಶಾ ಹಜರತ್ ಮರ್ದಾನೇ ಗೈಬ್ ಕಮಿಟಿ ಅಧ್ಯಕ್ಷ ಕಾಟನ್ ಪಾಷಾ, ತಾಲ್ಲೂಕಾಧ್ಯಕ್ಷ ಅಸ್ಮಾನ್ ಸಾಬ್ ನದಾಫ್, ನಗರ ಘಟಕದ ಅಧ್ಯಕ್ಷ ರಿಯಾಜ್ ಕುದ್ರಿಮೋತಿ, ಫಕ್ರುಸಾಬ್ ಚುಕ್ಕನಕಲ್,ಫಾತೀಮಾ ಬೇಗಂ ಇದ್ದರು.ಬಾಬುಸಾಬ್ ನೂರಬಾಷಾ ನಿರೂಪಿಸಿದರು.

 

Leave a Reply

Your email address will not be published. Required fields are marked *

error: Content is protected !!