WhatsApp Image 2024-03-09 at 5.09.06 PM

ಕುಟುಂಬದಲ್ಲಿ ಮಹಿಳೆಯರ ಆರೋಗ್ಯಕ್ಕೆ ಆದ್ಯತೆ ನೀಡಬೇಕು : ಜಿಲ್ಲಾಧಿಕಾರಿ ದಿವಾಕರ್

ಕರುನಾಡ ಬೆಳಗು ಸುದ್ದಿ

ವಿಜಯನಗರ,9-  ಆರೋಗ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಡಬೇಕಾದ ಅವಶ್ಯಕತೆ ಇಂದು ಅನಿವಾರ್ಯವಾಗಿದೆ ದೇಶದ ಆರ್ಥಿಕ ಪರಿಸ್ಥಿತಿ ಕೂಡಾ ಪ್ರಜೆಗಳ ಆರೋಗ್ಯದ ಮೇಲೆ ಅವಲಂಭಿತವಾಗಿರುತ್ತದೆ ಏಕೆಂದರೆ ಆರೋಗ್ಯ ಕಾಪಾಡುಕೊಳ್ಳುವಲ್ಲಿ ಆರ್ಥಿಕ ಸಂಕಷ್ಟ ಎದುರಿಸಬೇಕಾಗಿರುತ್ತದೆ  ಇದರಿಂದಾಗಿ ಹೆಚ್ಚು ಸಂಕಷ್ಟಕ್ಕೆ ಗುರಿಯಾಗ ಬೇಕಾದ ಸಂದರ್ಭಗಳು ಒದಗಿಬರುತ್ತದೆ.

ಕುಟುಂಬಗಳಲ್ಲಿ ಮಹಿಳೆಯರ ಆರೋಗ್ಯ ಚೆನ್ನಾಗಿದ್ದಲ್ಲಿ ಸಂಸಾರಗಳು ಚೆನ್ನಾಗಿರುತ್ತವೆ ಆದ್ದರಿಂದ ಮಹಿಳೆಯರ ಆರೋಗ್ಯಕ್ಕೆ ಹೆಚ್ಚು ಮಹತ್ವ ಕೊಡಬೇಕಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ನಾಗರೀಕರಿಗೆ ಉತ್ತಮ ಆರೋಗ್ಯ ಸರ್ಕಾರಿದಿಂದಾಗಲೀ ಅಥವಾ ಖಾಸಾಗಿ ಆಸ್ಪತ್ರೆ ಗಳಲ್ಲಾಗಲಿ ಸೇವೆಗಳು ದೊರಕಲಿ ಅದು ಜಿಲ್ಲೆಯ ಅಥವಾ ದೇಶದ ಆರೋಗ್ಯ ಎಂದು ಪರಿಗಣಿಸಲಾಗುವುದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.

ಅವರು ತಾಯಮ್ಮ ಶಕ್ತಿ ಸಂಘ ಶುಕ್ರವಾರ ಹಮ್ಮಿಕೊಂಡಿದ್ದ ಮಹಿಳೆಯರ ದಿನಾಚರಣೆಯ ಅಂಗವಾಗಿ ಮಹಿಳೆಯರ ಉಚಿತ ಅರೋಗ್ಯ ತಪಾಸಣೆ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಈ ಹಿಂದೆ ಒಂದು ಲಕ್ಷಜನರಲ್ಲಿ ಒಬ್ಬ ಕ್ಯಾನ್ಸರ್ ರೋಗಿಯನ್ನು ಪತೆ ಹಚ್ಚಲಾಗುತ್ತಿತ್ತು , ಆದರೆ ಈಗ ಒಂದು ಸಾವಿರಕ್ಕೆ ಒಬ್ಬ ಕ್ಯಾನ್ಸರ್ ರೋಗಿಯನ್ನು ಪತ್ತೆ ಹಚ್ಚಲಾಗುತ್ತಿದೆ, ಕ್ಯಾನ್ಸರ್ ನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿದಲ್ಲಿ ಗುಣ ಹೊಂದುವ ಎಲ್ಲಾ ಸಾದ್ಯತೆಗಳಿವೆ. ಪ್ರಸ್ತುತ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚು ಹಣ ವ್ಯಯಿಸ ಬೇಕಾದ ಅನಿವಾರ್ಯತೆ ಇದೆ ಎಂದ ಜಿಲ್ಲಾಧಿಕಾರಿ ಸ್ಥಳೀಯ ಶ್ರೀಕರಿ ಆಸ್ಪತ್ರೆಯಲ್ಲಿ ಉತ್ತಮ ಕ್ಯಾನ್ಸರ್ ತಜ್ಞ್ ಡಾ.ಪ್ರವೀಣ್ ಹರಕೇರಿ ಇಲ್ಲಿಯ ಜನರಿಗೆ ಸೇವೆ ಮಾಡಲು ಬಂದಿರುವುದನ್ನು ಪ್ರಶಂಸಿದ ,ಅವರು ದೇಶದಲ್ಲಿ ಕೆಲವೇ, “ಆಂಕೋ”ಶಸ್ತ್ರ ಚಿಕಿತ್ಸಕರು ಇದ್ದು ನಮ್ಮ ಹೊಸಪೇಟೆಯ ಜನರಿಗೆ ಕಡಿಮೆ ವೆಚ್ಚದಲ್ಲಿ ಕ್ಯಾನ್ಸರ್ ಚಿಕಿತ್ಸೆ ನೀಡಲು ಮುಂದೆ ಬಂದಿರುವ ಡಾ. ಪ್ರವೀಣ್ ರವರ ಸೇವಾ ಮನೋಭಾವನೆಯನ್ನು ಕೊಂಡಾಡಿದರು.

ಇದೇ ಸಂದರ್ಭದಲ್ಲಿ ತಾಯಮ್ಮ ಸಂಸ್ಥೆ ಸಾರ್ವಜನಿಕ ದೃಷ್ಠಿಯಿಂದ ನಡೆಸುತ್ತಿರುವ ಇಂತಹ ಶಿಬಿರ ಗಳನ್ನು ಹೆಚ್ಚಾಗಿ ನಡೆಸಲಿ ಎಂದು ತಾಯಮ್ಮ ಸಂಸ್ಥೆಯ ಅದ್ಯಕ್ಷೆ ಕವಿತಾಸಿಂಗ್ ರ ಸೇವೆಯನ್ನು ಶ್ಲಾಘಿಸಿದರು.

ಮಾತಿನ ಮದ್ಯೆ ಅವರು ಮಹಿಳೆಯರಿಗೆ ಹೆಚ್ಚಾಗಿ ಹೃದಯಾಘಾತ ಮತ್ತು ಪಾರ್ಶ್ವವಾಯು ರೋಗಗಳು ಕಾಣಿಸದೆ ಇರುವುದಕ್ಕೆ ಅವರ ದೈಹಿಕ ಸೃಷ್ಠಿಯೇ ಕಾರಣ , ಆದರೆ ಅವರು ಹೆಚ್ಚು ತಲೆ ನೋವು ಮಾಡಿ ಕೊಂಡು ಅದನ್ನು ತಮ್ಮ ಪುರುಷರಿಗೆ ವರ್ಗಾಯಿಸುತ್ತಾರೆ ಎಂಬ ಹಾಸ್ಯಬರಿತ ಮಾತುಗಳಿಂದ ಮಹಿಳೆಯರನ್ನು ನಗುವಿನ ಅಲೆಯಲ್ಲಿ ತೇಲಿಸಿದರು.

ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಮಾತನಾಡಿ ಇಂದಿನ ದುಭಾರಿ ವೈದ್ಯಕೀಯ ಕ್ಷೇತ್ರದಲ್ಲಿ ಕಡಿಮೆ ವೆಚ್ಚದಲ್ಲಿ ಜನರ ಅರೋಗ್ಯವನ್ನು ಕಾಪಾಡುವಲ್ಲಿ ಹೆಜ್ಜೆ ಇಟ್ಟಿರುವ ಶ್ರೀಕರಿ ಆಸ್ಪತ್ರೆಯ ಡಾ.ಗಂಗೋತ್ರಿಯವರ ಸೇವೆಯನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಕವಿತಾಈಶ್ವರ್ ಸಿಂಗ್ ಜಾಗು ಡಾ.ಪ್ರವೀಣ್, ಡಾ.ಗಂಗೋತ್ರಿ ಹಾಗು ಜಿಲ್ಲಾ ಆರೋಗ್ಯ ಆಧಿಕಾರಿ ಶಂಜರ್ ನಾಯ್ಕ ಭಾಗವಹಿದ್ದರುಸುಮಾರು ಎರಡು ನೂರು ಮಹಿಳೆಯರು ಉಚಿತ ಕ್ಯಾನ್ಸರ್ ಮತ್ತು ಕಣ್ಣು ತಪಾಸಣೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!