ಟೆನ್ನಿಸ್ ಸಿಂಗಲ್ ಬಾಲ್ ಪೈಡ್ ಲೈಟ್ ಮ್ಯಾಚ್ ಫೈನಲ್ ಪಂದ್ಯಕ್ಕೆ ಶಾಸಕ ಎಂ ನಾಗರಾಜ್ ಚಾಲನೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,9- ನಗರದ ಪ್ರೌಢಶಾಲಾ ಮೈದಾನದಲ್ಲಿ ಸಿರುಗುಪ್ಪ ವಿಜಯನಗರ ಕ್ರಿಕೆಟ್ ಕ್ಲಬ್ ವತಿಯಿಂದ ಟೆನ್ನಿಸ್ ಸಿಂಗಲ್ ಬಾಲ್ ಫೈಟ್ ಲೈಟ್ ಮ್ಯಾಚ್ ಅಂತಿಮ ಫೈನಲ್ ಪಂದ್ಯದಲ್ಲಿ ವಿಜಯನಗರ ಕ್ರಿಕೆಟ್ ತಂಡ ಹಾಗೂ ಯೂಥ್ ಲಯನ್ಸ್ ತಂಡದ ಮಧ್ಯೆ ಪಂದ್ಯ ನಡೆಯಿತು ಶಾಸಕ ಬಿ ಎಂ ನಾಗರಾಜ ಅವರು ಈ ಪಂದ್ಯಕ್ಕೆ ಟಾಸ್ಕ್ ಹಾಕುವ ಮೂಲಕ ಚಾಲನೆ ನೀಡಿದರು.
ಪಂದ್ಯದಲ್ಲಿ ರನ್ನರಾಗಿ ಯೂಥ್ ಲೈನ್ಸ್ ವಿನ್ನರ್ ಆಗಿ ವಿಜಯನಗರ ಕ್ರಿಕೆಟ್ ತಂಡಕ್ಕೆ ಕಪ್ ನೀಡಿ ವಿಜೇತರಾದ ವಿಜಯನಗರ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿದರು.
ಸಿರುಗುಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕರಿಬಸಪ್ಪ, ಮುಖಂಡರಾದ ಬಿ ಎಂ ವೆಂಕಟೇಶ್ ನಾಯಕ್, ನಗರಸಭಾ ಸದಸ್ಯ ಕಾಯಿ ಪಲ್ಲೆ ಆರ್ ನಾಗರಾಜ, ಎಚ್ ಗಣೇಶ್, ವಿ ಪರಶುರಾಮ, ರೇಣುಕಾ, ರಾಜ್ ಗೊರವರ, ಶ್ರೀನಿವಾಸ್ ಕೋಟಿ ರೆಡ್ಡಿ, ಪವನ್ ದೇಸಾಯಿ, ರಾಷ್ಟ್ರೀಯ ಸಾಕ್ಷರತಾ ಅಬ್ದುಲ್ ನಬಿ ಮತ್ತಿತರ ಮುಖಂಡರು ಸಾವಿರಾರು ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ಭಾಗವಹಿಸಿದ್ದರು.
