WhatsApp Image 2024-03-10 at 4.30.58 PM

ಕುಡಿಯುವ ನೀರಿನ ಅರವಟ್ಟಿಗೆ ಉದ್ಘಾಟನೆ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ,10- ತಾಲೂಕು ಕೇಂದ್ರ ನಗರದ ಕಲ್ಯಾಣ ಕರ್ನಾಟಕ ಬಸ್ ನಿಲ್ದಾಣದ ಮುಂದಿನ ಆಟೋ ಸ್ಟ್ಯಾಂಡಿನ ಬಳಿ ಜೀವನಿಧಿ ಟ್ರಸ್ಟ್ ರಕ್ತದಾನ ಬಳಗ ಇವರಿಂದ ಕುಡಿಯುವ ನೀರಿನ ಅರವಟ್ಟಿಗೆ ಪ್ರಾರಂಭಗೊಳಿಸಲಾಯಿತು.

ಈಗಾಗಲೇ ಜಲ ಮೂಲಗಳು ಬತ್ತುತ್ತಿದ್ದು, ಬೇಸಿಗೆಯ ಬಿರು ಬಿಸಿಲಿಗೆ ಬಾಯಾರಿಸಿಕೊಳ್ಳಲು ಕುಡಿಯುವ ನೀರಿಗಾಗಿ ಜನ ಇನ್ನಿಲ್ಲದ ತೊಂದರೆ ಕೊಡುತ್ತಿದ್ದಾರೆ. ಈ ತೊಂದರೆ ತಪ್ಪಿಸಲು ಜೀವನಿದಿ ಟ್ರಸ್ಟ್ ರಕ್ತದಾನ ಬಳಗದ ಸಂಸ್ಥಾಪಕ ಅಧ್ಯಕ್ಷ ಎಸ್. ಲೋಕೇಶ್ ಸಾರ್ವಜನಿಕರ ಅನುಕೂಲಕ್ಕಾಗಿ ಕುಡಿಯುವ ನೀರಿನ ಅರವಟ್ಟಿಗೆ ಪ್ರಾರಂಭಿಸಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕುಡಿಯುವ ನೀರಿನ ಅರವಟ್ಟಿಗೆಯನ್ನು ಸಿಂಧನೂರು ತಾಲೂಕು ಗೋನವಾರದ ಶ್ರೀ ಸದ್ಗುರು ಅಬ್ಬಾಸ್ ಅಲಿ ತಾತನವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಬಿ.ಈರಣ್ಣ, ಡಾ. ಪ್ರಶಾಂತ್ ಕುಮಾರ್ ಡಾ.ಗಂಗಮ್ಮ, ಜಿಲ್ಲಾ ಪರಿಶಿಷ್ಟ ವರ್ಗಗಳ ಇಲಾಖೆ ಅಧಿಕಾರಿ ಶಾಷು ಮೋದ್ದೀನ್, ಸಿರುಗುಪ್ಪ ವಿದ್ಯಾ ಸಂಸ್ಥೆ ಅಧ್ಯಕ್ಷ ಬಿ.ಇ. ದೊಡ್ಡಯ್ಯ ಚಿಟ್ಗಿ ಹುಸೇನ್ ಬಾಷಾ, ವಿಕ್ರಂ ಜೈನ್, ರಬ್ಬಾನಿ, ಮೋಹನ್ ಲಾಲ್, ಅಭಿ, ಎಸ್ ಮಲ್ಲಯ್ಯ ಸೇರಿದಂತೆ ರಕ್ತದಾನ ಬಳಗದ ಪದಾಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!