WhatsApp Image 2024-03-10 at 12.41.27 PM

ಐತಿಹಾಸಿಕ ಪುರಾಣ ಪ್ರಸಿದ್ಧ ನೆಲೆವೀಡು ಹನುಮನ ಜನ್ಮಸ್ಥಳ ಅಂಜನಾದ್ರಿ

ಕರುನಾಡ ಬೆಳಗು ಸುದ್ದಿ

ಗಂಗಾವತಿ,10- ಐತಿಹಾಸಿಕ ಪುರಾಣ ಪ್ರಸಿದ್ಧ ನೆಲೆವೀಡು ಕಿಷ್ಕಿಂದೆಯ ನಾಡು ಹನುಮನ ಜನ್ಮ ಸ್ಥಳ ಅಂಜನಾದ್ರಿ ರಾಮಾಯಣ ಕಾಲದ ಕಾಲಘಟ್ಟದಲ್ಲಿ ರಾಮದೇವರು ಆಂಜನೇಯನಿಗೆ ಸಂಪೂರ್ಣ ಅನುಗ್ರಹಿಸಿದ ನಾಡು ತಾಲ್ಲೂಕಿನ ಅಂಜನಾದ್ರಿ ಬೀಡಾಗಿದೆ.

ಅಯೋಧ್ಯೆಯ ಶ್ರೀರಾಮ ದೇವರು, ಆಂಜನೇಯ (ಹನುಮಂತ) ತನ್ನ ಪರಮಶಿಷ್ಯನನ್ನಾಗಿ ಪಡೆದುಕೊಂಡು ಇಡಿ ರಾಮಾಯಣದ ಕಾಲಘಟ್ಟವನ್ನೇ ನೆನೆಪಿಸುವಂತಹದಾಗಿದೆ.

ಗಂಗಾವತಿ ಕ್ಷೇತ್ರದ ಶಾಸಕ ಗಾಲಿ ಜನಾರ್ಧನ ರೆಡ್ಡಿ ಮಾತನಾಡಿ ಅಯೋದ್ಯೇಯಂತೆ ತಿರುಪತಿ ಮಾದರಿಯಲ್ಲಿ ಅಂಜನಾದ್ರಿ ದೇವಸ್ಥಾನವನ್ನು ನಿರ್ಮಿಸುವಂತಹ ಮಹಾದಿಚ್ಛೆಯನ್ನು ಹೊಂದಿದ್ದೇವೆ. ಈಗಾಗಲೇ ಹಿಂದಿನ ಬಿಜೆಪಿ ಸರಕಾರದ ಸಮಯದಲ್ಲಿ ೧೨೦ ಕೋಟಿ ಅನುದಾನ ಹಾಗೂ ಈಗಿನ ಸಿದ್ದರಾಮಯ್ಯನವರ ನೇತೃತ್ವದ ಸರಕಾರದಲ್ಲಿ ೧೦೦ ಕೋಟಿ ಅನುದಾನ ಹಾಗೂ ಕೆಕೆಆರ್‌ಡಿಬಿ (ಕಲ್ಯಾಣ ಕರ್ನಾಟಕ ಯೋಜನೆ) ಅಡಿ ೪೦ ಕೋಟಿ ಒಟ್ಟು ೨೪೦ ಕೋಟಿಯಲ್ಲಿ ಅಭಿವೃದ್ಧಿಯ ಪರ್ವ ಅಂಜನಾದ್ರಿಯಲ್ಲಿ ಪ್ರಾರಂಭವಾಗುತ್ತಿದೆ.

ಈಗಾಗಲೇ ಕೇಂದ್ರ ಸರಕಾರದಿಂದ ಅಂಜನಾದ್ರಿಗೆ ರೂಪ್‌ವೇ ನಿರ್ಮಾಣಕ್ಕಾಗಿ ಅನುದಾನ ಮಂಜೂರಾಗಿದೆ.
ಯಾತ್ರಿ ನಿವಾಸ, ಭೂಸ್ವಾಧೀನ ಪ್ರಕ್ರಿಯೆ, ದ್ವಿಪಥ ರಸ್ತೆಗಳನ್ನು ಮಾಡಿ, ಬದಿಯಲ್ಲಿ ವಿದ್ಯುತ್ ಅಲಂಕಾರ ಅನೇಕ ಅಭಿವೃದ್ಧಿ ಕಾರ್ಯಗಳ ಕೈಗೊಳ್ಳುವ ಕಾರ್ಯ ಶೀಘ್ರದಲ್ಲಿ ಪ್ರಾರಂಭವಾಗಲಿದೆ.

ಪ್ರಧಾನಮಂತ್ರಿ ನರೇಂದ್ರಮೋದಿಯವರ ಆಶಯದಂತೆ ಅಯೋಧ್ಯೆಯ ರಾಮಮಂದಿರದ ಮಾದರಿಯಲ್ಲಿಯೇ ಕಿಷ್ಕಿಂದೆಯ ಅಂಜನಾದ್ರಿ ಹನುಮನ ನಾಡು ಅಭಿವೃದ್ಧಿಗೊಳ್ಳುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಷಿ ತಿಳಿಸಿದರು.

ರಾಜ್ಯ ಸರಕಾರ ಉಚಿತ ಬಸ್ ಪ್ರಯಾಣ ಯೋಜನೆ ಕೈಗೊಂಡಾಗಿನಿಂದ ಪ್ರತಿ ರವಿವಾರ ಸುಮಾರು ೨೦ಸಾವಿರಕ್ಕೂ ಅಧಿಕ ಭಕ್ತರು ಹನುಮನ ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ.

ಒಟ್ಟಾರೆ ಭಕ್ತರ ಆಶಯದಂತೆ ಹನುಮನನಾಡು ಶೀಘ್ರದಲ್ಲಿಯೇ ಅಭಿವೃದ್ಧಿ ಪಥದತ್ತ ಸಾಗಲಿ.

Leave a Reply

Your email address will not be published. Required fields are marked *

error: Content is protected !!