ಪೊಲೀಸ್ ಠಾಣಾ ಆವರಣದಲ್ಲಿ ರೌಡಿಗಳಿಗೆ ಎಚ್ಚರಿಕೆ : ಡಿವೈಎಸ್ಪಿ ವೆಂಕಟೇಶ್
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,13- ನಗರದ ಪೊಲೀಸ್ ಠಾಣಾ ಆವರಣದಲ್ಲಿ ಡಿವೈಎಸ್ಪಿ ವೆಂಕಟೇಶ್ ರೌಡಿ ಶೀಟರ್ಸ್ಗಳ ಹಾಜರಾತಿ ಪಡೆದು ಅವರುಗಳಿಗೆ ಎಚ್ಚರಿಕೆ ನೀಡಿದರು.
ತಾಲೂಕಿನ ಸಿರುಗುಪ್ಪ, ತೆಕ್ಕಲಕೋಟೆ, ಸಿರಿಗೇರಿ, ಹಚ್ಚೋಳ್ಳಿ ಪೊಲೀಸ್ ಠಾಣೆಗಳಲ್ಲಿನ ರೌಡಿ ಶೀಟರ್ಸ್ ಲಿಸ್ಟ್ ನಲ್ಲಿ ಹೆಸರಿರುವವರನ್ನು ಕರೆಯಿಸಿದ್ದರು.
ಲೋಕಸಭಾ ಚುನಾವಣೆ ಹತ್ತಿರದಲ್ಲಿದ್ದು ಎಲ್ಲರೂ ಸನ್ನಡತೆಯಲ್ಲಿರ ಬೇಕು ಯಾವುದೋ ಕಾರಣಕ್ಕೆ ಈ ಹಂತದಲ್ಲಿದ್ದೀರಿ ನೀವು ಮತ್ತೆ ತಮ್ಮ ಹಳೆಯತನವನ್ನು ಮುಂದುವರೆಸಿದಲ್ಲಿ ಗಡಿಪಾರು ಮಾಡಬೇಕಾಗುತ್ತದೆ ಕೆಲವರು ಈಗಾಗಲೇ ಹಿರಿಯ ವಯಸ್ಕರು ಆಗಿದ್ದೀರಿ ಮಟ್ಕಾ, ಕಳ್ಳತನದಲ್ಲಿ ಉಸುಕು ಮಾರಾಟ, ಅಕ್ರಮ ಮಧ್ಯ ಮಾರಾಟ, ಸಣ್ಣ ಪುಟ್ಟ ಜಗಳ, ಕಳ್ಳತನಗಳಲ್ಲಿ ಭಾಗಿಯಾಗ ಬಾರದು ತಮ್ಮ ಮೇಲೆ ನ್ಯಾಯಾಲಯದಲ್ಲಿ ಇರುವ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಿ, ದುಡಿದು ತಿನ್ನುವ ಮತ್ತು ಯಾವುದೇ ಅಪಕೃತ್ಯಗಳಲ್ಲಿ ಭಾಗಿಯಾಗದೆ ಸನ್ನಡತೆ, ಸಚ್ಚಾರಿತ್ಯದಿಂದ ಇದ್ದಲ್ಲಿ ಕೆಲ ವರ್ಷಗಳಲ್ಲಿ ತಮ್ಮ ಹೆಸರನ್ನು ರೌಡಿಗಳ ಹಾಳೆಯಿಂದ ಹೆಸರು ತೆಗೆದು ಹಾಕಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿರುಗುಪ್ಪ ಪೊಲೀಸ್ ಠಾಣೆಯ ತಿಮ್ಮಣ್ಣ ತೆಕ್ಕಲಕೋಟೆ ಪೊಲೀಸ್ ಠಾಣೆಯ ತಾರಾ ಸಿರಿಗೇರಿ ಪೊಲೀಸ್ ಠಾಣೆಯ ವೆಂಕಟೇಶ್ ಮತ್ತು ಹಚ್ಚೋಳ್ಳಿ ಪೊಲೀಸ್ ಠಾಣೆಯ ರೇವಣ ಸಿದ್ದಪ್ಪ ಪಿಎಸ್ಐ ಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು.
