ದಮ್ಮೂರ ಗ್ರಾಮದಲ್ಲಿ 359ನೇ ಶಿವಾನುಭವ ಗೋಷ್ಠಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ,13- ತಾಲೂಕಿನ ದಮ್ಮೂರ ಗ್ರಾಮದಲ್ಲಿ ಮಹಾಶಿವಶರಣಿ ಶ್ರೀ ಭೀಮಾಂಬಿಕಾ ದೇವಿ ಮಠದಲ್ಲಿ ಚತುದರ್ಶಿ ಅಂಗವಾಗಿ ೩೫೯ ನೆ ಶಿವಾನುಭವ ಗೋಷ್ಠಿ ಜರುಗಿತು.
ಭಕ್ತಿಯಿಂದ ದೇವರ ದ್ಯಾನ ಏಕಾಗ್ರತೆ ಯಿಂದ.ಭಜನೆ ಮಾಡಿದಾಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಸಂಗನಾಳದ ಪುರಾಣ ಪ್ರವಚನಕಾರ ಭರಮಪ್ಪ ದಫೇದ ಅವರು ಶಿವರಾತ್ರಿ ಮಹತ್ವ ಕುರಿತು ಮಾತನಾಡಿದರು.
ಸತಿ-ಪತಿ ಸಿಟ್ಟು ,ಕೋಪದ ಆವೇಶದಲ್ಲಿ ಇದ್ದಾಗ ದಿಡಿರನೆ ದುಡಿಕಿನ ನಿರ್ಧಾರಗಳನ್ನು ತಗೆದುಕೊಳ್ಳಲಾರದೆ, ಶಾಂತಿಯಿಂದ, ತಾಳ್ಮೆಯಿಂದ ಯೋಚಿಸಿ ನಿರ್ಧಾರ ತಗೆದು ಕೊಂಡಾಗ ನಮ್ಮ ಜೀವನದಲ್ಲಿ ಜಯ ಸಾಧಿಸಲು ಸಾಧ್ಯವಾಗುತ್ತದೆ ಆಗ ನಮ್ಮ ಕುಟುಂಬ ಸಂತಸದಿಂದ ಇರುವದಕ್ಕೆ ಸಾದ್ಯ ಎಂದು ಶ್ರೀ ಭೀಮಾಂಬಿಕಾ ಶಿವಾನುಭವ ಸೇವಾ ಸಮಿತಿಯ ಅಧ್ಯಕ್ಷ ಶರಣಬಸಪ್ಪ ಅವರು ಮಾತನಾಡಿದರು. ನಂತರ ಪ್ರಾಸ್ತಾವಿಕವಾಗಿ ರುದ್ರೇಶ ಹರಿಜನ ಮಾತನಾಡಿದರು.
ಶ್ರೀ ಮಠದ ಒಡಯರಾದ ಹನುಮಂತಪ್ಪಜ್ಜ ಧರ್ಮರ, ಶರಣಯ್ಯ .ಗು. ಹಿರೇಮಠ ಸಾನಿದ್ಯವಹಿಸಿದ್ದರು. ಪ್ರಾರಂಭದಲ್ಲಿ ನವಜೀವನ ಸಮಿತಿ ಸದಸ್ಯರು ಶ್ರೀ ಮಂಜುನಾಥ ಸ್ವಾಮಿಯ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ , ಭಕ್ತಿಯಿಂದ ಭಜನೆಮಾಡಿ ಪ್ರಾರ್ಥನೆ ಸಲ್ಲಿಸಿದರು. ಸಮೀತಿಯ ಡಿ.ಮೌನೇಶ ಬಡಿಗೇರ, ಶರಣೆಗೌಡ ದ್ಯಾಮನಗೌಡ್ರ, ಬಾಬುಸಾಬ ಕುಷ್ಟಗಿ, ದ್ಯಾಮಕ್ಕ ಸಹ ಜರಕುಂಟಿ,ಕಳಕಪ್ಪ ಹಡಪದ , ಯಮನೂರಪ್ಪ ಹಳ್ಳಿಕೇರಿ ಸೇರಿದಂತೆ ಇತರರು ಭಾಗವಹಿಸಿದ್ದರು.
