IMG_20240313_200502

ಲೋಕಸಭಾ ಚುನಾವಣೆ
ಹಾಲಿ ಸಂಸದ ಸಂಗಣ್ಣಗೆ ಟಿಕೆಟ್ ಮಿಸ್

ಕರುನಾಡ ಬೆಳಗು ಸುದ್ದಿ

ಕೊಪ್ಪಳ,12- ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಘೋಷಣೆ ಅಗಿದ್ದು ಅಚ್ಚರಿ ಎಂಭಂತೆ ಡಾ ಬಸವರಾಜ ಕ್ಯಾವಟರ್ ಹೆಸರನ್ನು ಬಿಜೆಪಿ ಅಂತಿಮ ಗೋಳಿಸಿದೆ.
ಬುಧವಾರ ಬಿಜೆಪಿ ಎರಡನೆ ಪಟ್ಟಿ ಪ್ರಕಟ ಗೊಂಡಿದ್ದು ಹಾಲಿ‌ಸಂಸದ ಸಂಗಣ್ಣ ಕರಡಿ ಅವರಿಗೆ ಬಿಜೆಪಿ ಕೈ ಕೊಟ್ಟದೆ.

ಬಹು ನಿರೀಕ್ಷಿತ ಕೊಪ್ಪಳ ಲೋಕಸಭಾ ಕ್ಷೇತ್ರದ ಕಮಲದ ಟಿಕೆಟ್, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯರಾಗಿರುವ, ವೈದ್ಯ ಬಸವರಾಜ್ ಕ್ಯಾವಟರ್ ಅವರಿಗೆ ಒಲಿದಿದೆ. ಹಾಲಿ ಸಂಸದ ಸಂಗಣ್ಣ ಕರಡಿಗೆ ಟಿಕೆಟ್ ಮಿಸ್ ಆಗಿದ್ದು, ಕರಡಿ ಕುಟುಂಬದ ಮುಂದಿನ ನಡೆ ಕೂತೂಹಲ ಹುಟ್ಟಿಸಿದೆ.
ಕಳೆದ ಎರಡು ಅವಧಿಯಿಂದ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಹ್ಯಾಟ್ರಿಕ್ ಬಾರಿಸುವ ಕನವರಿಕೆಯಲ್ಲಿ ಟಿಕೆಟ್ ಗಾಗಿ ತೀವ್ರ ಪೈಪೋಟಿ ಒಡ್ಡಿದ್ದರು.ಅಲ್ಲದೆ, ಒಂದು ಹಂತದಲ್ಲಿ ಸಂಗಣ್ಣ ಕರಡಿಗೆ ಟಿಕೆಟ್ ಫೈನಲ್ ಆಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಕಳೆದ ಎರಡು ದಿನಗಳಲ್ಲಾದ ಬದಲಾವಣೆಯಿಂದ ಟಿಕೆಟ್ ಕೈ ತಪ್ಪಿ ವೈದ್ಯ ಬಸವರಾಜ ಕ್ಯಾವಟರ್ ಪಾಲಾಗಿದೆ.
ಮೂಲತಹ ಕುಷ್ಟಗಿಯವರಾದ ಇವರು, ಮಾಜಿ ಶಾಸಕ ಕೆ.ಶರಣಪ್ಪ ಅವರ ಪುತ್ರರಾಗಿದ್ದಾರೆ.ವೈದ್ಯಕೀಯ ವೃತ್ತಿ ಜತೆಗೆ ರಾಜಕೀಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ವಿದೇಶದಲ್ಲಿ ವೈದ್ಯ ವೃತ್ತಿ ಮಾಡುತ್ತಿದ್ದ ಅವರು, ಹಲವು ವರ್ಷಗಳ ಹಿಂದೆ ಕೊಪ್ಪಳಕ್ಕೆ ಆಗಮಿಸಿ ಖಾಸಗಿ ಆಸ್ಪತ್ರೆ ತೆರೆದಿದ್ದರು.
2019 ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿಯೇ ಟಿಕೆಟ್ ಸಿಗುವ ಸಾಧ್ಯತೆಗಳಿದ್ದವು.ಆದರೆ, ಅಂದು ವೈದ್ಯ ಬಸವರಾಜ ಮಾನಸಿಕವಾಗಿ ಸಿದ್ದನಿಲ್ಲದ ಪರಿಣಾಮ ಸ್ಪರ್ಧೆಗೆ ಹಿಂದೇಟು ಹಾಕಿದ್ದರು.
ಈ ಬಾರಿ ಸ್ಪರ್ಧಿಸಲು ತಯಾರಿ ನಡೆಸಿ, ಕಳೆದ 6 ತಿಂಗಳಿಂದ ಟಿಕೆಟ್ ಗೆ ಸಂಘ ಪರಿವಾರದ ಮೂಲಕ ತೀವ್ರ ಪ್ರಯತ್ನ ನಡೆಸಿದ್ದರು.

ಈ ಬಾರಿ ಸ್ಪರ್ಧಿಸಲು ತಯಾರಿ ನಡೆಸಿ, ಕಳೆದ 6 ತಿಂಗಳಿಂದ ಟಿಕೆಟ್ ಗೆ ಸಂಘ ಪರಿವಾರದ ಮೂಲಕ ತೀವ್ರ ಪ್ರಯತ್ನ ನಡೆಸಿದ್ದರು. ಕೊನೆಯಲ್ಲಿ ಟಿಕೆಟ್ ಬಸವರಾಜ ಕ್ಯಾವಟರ್ಗೆ ಆಗಿದೆ.
ನಿರಾಸೆ ; ಸಂಸದ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ಮಿಸ್ ಆಗಿದ್ದಕ್ಕೆ ಅವರ ಬೆಂಬಲಿಗರು ಹಾಗೂ ಕಾರ್ಯಕರ್ತರು ಸಂಸದರ ಮನೆ ಮುಂದೆ  ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!