WhatsApp Image 2024-03-13 at 7.40.11 PM

ದಶಕಗಳ ಕನಸು ನನಸು ಮಾಡಿದ ಮೋದಿ ಸರ್ಕಾರ ನಾಳೆಯಿಂದ ಸಿಂಧನೂರಿಗೆ ರೈಲು ಸಂಚಾರ : ಸಂಗಣ್ಣ ಕರಡಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ: ದಶಕಗಳ ಕನಸಾಗಿದ್ದ ಸಿಂಧನೂರಿಗೆ ಸಂಚಾರ ಶುಕ್ರವಾರದಿಂದ ಆರಂಭವಾಗಿದೆ. ಚುನಾವಣೆ ವೇಳೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಂಧನೂರಿನಿಂದ ಹುಬ್ಬಳ್ಳಿ ಹಾಗೂ ಬೆಂಗಳೂರಿಗೆ ರೈಲು ಸಂಚಾರ ಆರಂಭಿಸಬೇಕೆಂದು ದಶಕಗಳಿಂದ ಜನರ ಆಗ್ರಹವಿತ್ತು. ಈ ವಿಷಯವನ್ನು ಕಾಂಗ್ರೆಸ್ ನವರು ಚುನಾವಣೆ ಮಾತ್ರ ಸೀಮಿತ ಮಾಡಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಸಿಂಧನೂರು ಜನತೆಗೆ ಮಾತು ಕೊಟ್ಟಿದ್ದೆ. ಅದರಂತೆ ರೈಲ್ವೆ ಹಳಿ ಹಾಕಿ ಸಂಚಾರಕ್ಕೆ ಅನುಮು ಮಾಡಿಕೊಟ್ಟಿದ್ದೇನೆ. ಇದೆಲ್ಲ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಸಾಧ್ಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಿಂಧನೂರಿನಿಂದ ಹುಬ್ಬಳ್ಳಿ ಹಾಗೂ ಬೆಂಗಳೂರಿಗೆ ಪ್ರತಿದಿನ ರೈಲು ಸಂಚಾರ ನಡೆಸಲಿದೆ. ಇಲ್ಲಿನ ಜನತೆ ಆರಾಮವಾಗಿ ಪ್ರಯಾಣ ಮಾಡಲು ಅನುಕೂಲ ಮಾಡಿಕೊಡಲಾಗಿದೆ. ಚುನಾವಣೆಯಲ್ಲಿ ಕೊಟ್ಟ ಭರವಸೆ ಮರಳಿ ಚುನಾವಣೆ ಬರುವುದರೊಳಗೆ ಈಡೇರಿಸಿದ್ದೇನೆ. ಮೋದಿ ಸರ್ಕಾರಕ್ಕೆ ಕೊಪ್ಪಳ ಲೋಕಸಭಾ ಕ್ಷೇತ್ರದ ಜನತೆಯಿಂದ ಅಭಿನಂದನೆ ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಭಿವೃದ್ಧಿ ಗ್ಯಾರೆಂಟಿ ಗೆ ಇದು ಸಾಕ್ಷಿಯಾಗಿದೆ. ಮತ್ತೊಮ್ಮೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕಾಗಿ ಎಲ್ಲರು ಬಿಜೆಪಿಗೆ ಮತ ನೀಡಿ. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸುವ ಮೂಲಕ ಮತ್ತೊಮ್ಮೆ ಜನರ ಸೇವೆ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

* ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಸಿಂಧನೂರಿಗೆ ನಾಳೆ ರೈಲು ಸಂಚಾರ
* ಪ್ರತಿದಿನ ಹುಬ್ಬಳ್ಳಿ, ಬೆಂಗಳೂರಿಗೆ ರೈಲು ಸಂಚಾರ.
* ಗುರುವಾರ ರೈಲು ಪ್ರಾಯೋಗಿಕ ಪರೀಕ್ಷೆ
* ಬಿಜೆಪಿಯಿಂದ ಅಭಿವೃದ್ಧಿ ಕಾಮಗಾರಿಗೆ ವೇಗ
* ಮತ್ತೊಮ್ಮೆ ಬಿಜೆಪಿ ಸರ್ಕಾರಕ್ಕೆ ಸಂಸದ ಸಂಗಣ್ಣ ಮನವಿ
* ಬಿಜೆಪಿಗೆ ಮತ ಹಾಕಿದರೆ ಅಭಿವೃದ್ಧಿಗೆ ಮತ ಹಾಕಿದಂತೆ

Leave a Reply

Your email address will not be published. Required fields are marked *

error: Content is protected !!