ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮಕ್ಕಳಿಗೆ ಪೌಷ್ಟಿಕತೆ ಯೊಂದಿಗೆ ಉತ್ತಮ ಅಭ್ಯಾಸದ ರೂಢಿ ಸಂಸ್ಕಾರ ಕಲಿಸಿ : ನ್ಯಾ. ಹಾಜಿ ಹುಸೇನ್ ಸಾಬ್ ಯಾದವಾಡ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,14- ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ ಅಧಿಕಾರಿಗಳ ಕಚೇರಿ ಸಭಾಭವನದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ವಕೀಲರ ಸಂಘ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾಲೂಕ ಆಡಳಿತ ಸಹ ಭಾಗಿತ್ವದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಕಾನೂನು ನೆರವು ಕಾರ್ಯಕ್ರಮ ದಲ್ಲಿ ಜೆ ಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಹಾಜಿ ಹುಸೇನ್ ಸಾಬ್ ಯಾದವಾಡ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ಸರ್ವರನ್ನು ಉದ್ದೇಶಿಸಿ ಮಾತನಾಡುತ್ತಾ ಮಹಿಳೆಯರು ಸಮಾಜದ ಪರಿವರ್ತನೆ ಸಾಧ್ಯವಾಗಿದ್ದು ಎಲ್ಲಾ ಅಂಗನವಾಡಿ ಮೇಲ್ವಿಚಾರಕಿಯರು ಕಾರ್ಯಕರ್ತೆಯರು ಸಹಾಯಕರು ತಮ್ಮ ಕೇಂದ್ರಕ್ಕೆ ಬರುವ ಮಕ್ಕಳಿಗೆ ಪೌಷ್ಟಿಕತೆ ಯೊಂದಿಗೆ ಉತ್ತಮ ಅಭ್ಯಾಸದ ರೂಢಿ ಸಂಸ್ಕಾರಗಳನ್ನು ಕಲಿಸಬೇಕು ಎಂದು ಅವರು ಕರೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ ಅಧಿಕಾರಿ ಪ್ರದೀಪ್ ಕುಮಾರ್ ಅವರು ಮಾತನಾಡಿ ಸಹನೆ ಮತ್ತು ಗುರುವಿನ ಪ್ರತಿಕವಾಗಿರುವ ಮಹಿಳೆಯರು ಎಂದರು ಸಹಾಯಕ ಸರ್ಕಾರಿ ಅಭಿಯೋಜಕೀ ಶಾರದಾ ಅವರು ಮಾತನಾಡಿ 1908 ರಲ್ಲಿ ನ್ಯೂ ಯಾರ್ಕ್ ನಲ್ಲಿ 1500 ಕ್ಕೂ ಅಧಿಕ ಮಹಿಳೆಯರು ದುಡಿಮೆಯ ಶಕ್ತಿಗೆ ತಕ್ಕ ವೇತನ ನೀಡುವಂತೆ ಲಿಂಗ ತಾರತಮ್ಯದ ವಿರುದ್ಧ ಸಿಡಿದೆದ್ದು ಮತದಾನದ ಹಕ್ಕಿಗಾಗಿ ಪ್ರತಿಭಟನೆ ಮಾಡಿದ್ದರ ಫಲವಾಗಿ 1975 ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನಗಳ ದಿನಾಚರಣೆಯನ್ನಾಗಿ ಆಚರಿಸಲಾಯಿತು ಎಂದು ವಿವರಿಸಿದರು.
ಹಿರಿಯ ವಕೀಲರು ಸಂಪನ್ಮೂಲ ವ್ಯಕ್ತಿ ಗಳಾಗಿ ಎನ್ ಅಬ್ದುಲ್ ಸಾಬ್ ರಾರಾವಿ ಅವರು ಮಹಿಳಾ ದಿನಾಚರಣೆಯ ಕುರಿತು ಉಪನ್ಯಾಸ ನೀಡಿದರು ಕಾರ್ಯಕ್ರಮದಲ್ಲಿ ಉತ್ತಮ ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.
ತಾಲೂಕ ಆರೋಗ್ಯ ವೈದ್ಯಾಧಿಕಾರಿ ಡಾ ಬಿ ಈರಣ್ಣ ರಾಷ್ಟ್ರೀಯ ಸಾಕ್ಷರತಾ ಅಬ್ದುಲ್ ನಬಿ ವಕೀಲರ ಸಂಘದ ಕಾರ್ಯದರ್ಶಿ ಹೆಚ್ ಪ್ಯಾಟೆ ಗೌಡ ಪ್ಯಾನಲ್ ವಕೀಲರಾದ ಮಲ್ಲಿಗೌಡ ವೆಂಕಟೇಶ್ ನಾಯಕ್ ರುದ್ರಮುನಿ ಟಿ ನೆಲಗುಂಟಯ್ಯ ಸರೋಜಾ ಮತ್ತಿತರರು ಇದ್ದರು.
