ರಂಜಾನ್ ಮಾಸ ನಮಾಜ್ ರೋಜಾ ಉಪವಾಸ ಸ್ವಯಂ ನಿಯಂತ್ರಣ ಉದ್ದೇಶ ಶಿಸ್ತು ತ್ಯಾಗ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,15- ರಮ್ ಜಾನ್ ಪವಿತ್ರವಾದ ತಿಂಗಳು ಅಲ್ಲಾಹನ ರಸೂಲರು ನಬಿ ಎ ಕರೀಂ ಮೊಹಮ್ಮದ್ ಪೈಗಂಬರ್ ಅವರು ಹೇಳಿದ ಇಸ್ಲಾಂ ಧರ್ಮ 5 ಆಧಾರ ಸ್ತಂಭಗಳ ಮೇಲೆ ನಿರ್ಮಿಸಲಾಗಿದೆ ಈಮಾನ್ ಅಲ್ಲಾಹನ ಮೇಲೆ ವಿಶ್ವಾಸ ಇಡುವುದು ದಿನದಲ್ಲಿ ನಮಾಜ್ ಐದು ಸಲ ನಿರ್ವಹಿಸುವದು ರಂಜಾನ್ ತಿಂಗಳ ರೋಜಾ ಉಪವಾಸ ಮಾಡುವುದು ಸಂಪಾದನೆ ಗಳಿಕೆಯಲ್ಲಿ ಶೇಕಡ2.5 ರಷ್ಟು ಬಡವರಿಗೆ ಜಕಾತ್ ಫಿತ್ರ್ ದಾನ ಧರ್ಮ ನೀಡುವುದು ಆಯುಷ್ಯದಲ್ಲಿ ಒಂದು ಸಲವಾದರೂ ಹಜ್ ಯಾತ್ರೆ ಕೈಗೊಳ್ಳುವುದು ಇಡೀ ರಂಜಾನ್ ಮಾಸ ರೋಜಾ ಉಪವಾಸವು ಪವಿತ್ರ ಗ್ರಂಥ ಖುರಾನ್ ಅವತೀರ್ಣಗೊಳಿಸಿದ ಅಲ್ಲಾಹನಿಗೆ ಸಲ್ಲಿಸುವ ಕೃತಜ್ಞತೆಯಾಗಿದೆ ಎಂದರು.
ಇಸ್ಲಾಂನ ರೋಜಾ ಉಪವಾಸದ ಪ್ರಮುಖ ಗುರಿ ಮತ್ತು ಉದ್ದೇಶ ಅಲ್ಲಾಹನ ಸಂಪ್ರೀತಿಯಾಗಿದೆ ನಮಗೆಲ್ಲರಿಗೂ ಸನ್ಮಾರ್ಗ ಮಾರ್ಗದರ್ಶನವನ್ನು ಅನುಗ್ರಹಿಸಲಿ ಎಂದು ಅಲ್ಲಾಹನಲ್ಲಿ ನಮಾಜ್ ನಿರ್ವಹಿಸಿ ಪ್ರಾರ್ಥಿಸುವುದು ಇಸ್ಲಾಂ ಪ್ರಪಂಚದಲ್ಲಿ ಶಾಂತಿ ಸಹನೆ ಸಾ ಹೃದಯತೆ ಸೌಹಾರ್ದತೆ ಪರಮಧರ್ಮ ಸಹಿಷ್ಣುತೆಯ ಧರ್ಮವಾಗಿದೆ ಇಸ್ಲಾಂ ಜಗತ್ತಿನ ಸರ್ವಜನರ ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ ಅಲ್ಲಾಹನ ಮೊದಲಗೊಂಡ ಕೊನೆಯ ಪ್ರವಾದಿ ಮೊಹಮ್ಮದ್ ಪೈಗಂಬರ್ ರವರ 23 ವರ್ಷಗಳ ಕಾಲ ಅವ ತೀರ್ಣವಾದ ಪರಿಪೂರ್ಣ ಗ್ರಂಥ ಪವಿತ್ರ ಖುರಾನ್ ಕೇವಲ ಮುಸಲ್ಮಾನರಿಗಾಗಿ ಬಂದಂತಹ ಗ್ರಂಥವಲ್ಲ ಇದು ಸರ್ವಜನರ ಮಾರ್ಗದರ್ಶನಕ್ಕೆ ಬಂದ ಪವಿತ್ರ ಗ್ರಂಥ ಖುರಾನ್ ಒಬ್ಬ ಮನುಷ್ಯ ತಾನು ಹುಟ್ಟಿದ ದಿನದಿಂದ ಸಾಯುವವರೆಗೆ ಯಾವ ರೀತಿಯಲ್ಲಿ ಕೌಟುಂಬಿಕ ಆರ್ಥಿಕ ಮತ್ತು ಸಾಮಾಜಿಕ ಜೀವನ ನಡೆಸಬೇಕು ಎಂಬುದರ ಬಗ್ಗೆ ಕುರಾನ್ ನಲ್ಲಿ ವಿವರಣೆ ಇದೆ ಎಂದು ಹೇಳಿದರು.
ಸಮಾನತೆ ಮಾನವ ಹಕ್ಕು ನ್ಯಾಯ ನೀತಿ ಪಾಲಿಸುವದು ನಮ್ಮ ನೆರೆಹೊರೆಯವರ ಸಂಬಂಧಿಕರು ಸಹವರ್ತಿಗಳಿಗೆ ನಿತ್ಯವೂ ಕರುಣೆ ಅನುಕಂಪ ತೋರುವುದು ಎಲ್ಲಾ ವಿವಿಧ ದುಷ್ಕೃತ್ಯಗಳಿಂದ ವಿಮುಖ ರಾಗಲು ಎಂಬುದು ಪವಿತ್ರ ಗ್ರಂಥ ಕುರಾನ್ ಆಜ್ಞಾಪಿಸುತ್ತದೆ ಕುರಾನ್ ಸನ್ಮಾರ್ಗ ಪ್ರತಿಯೊಬ್ಬರ ಗುರಿ ಯಾಗಲಿ ಪವಿತ್ರ ಗ್ರಂಥ ಕುರಾನ್ ಅವಿತೀರ್ಣಗೊಂಡ ರಂಜಾನ್ ತಿಂಗಳಾಗಿದೆ ಅಲ್ಲಾಹನೆ ವರ್ಣಿಸಿದಂತೆ ರಂಜಾನ್ ಮಾಸದಲ್ಲಿ ಹಗಲು ರಾತ್ರಿ ಹೃದಯವನ್ನು ಅಲ್ಲಾಹನ ಸ್ಮರಣೆ ನಮಾಜ್ ದುವಾಗಳ ಸಮೃದ್ಧಗೊಳಿಸುವದು ಪುಣ್ಯಗಳ ಲೆಕ್ಕಾ ಅಲ್ಲಾಹನ ಬಲ್ಲವನಾಗಿದ್ದಾನೆ.
ರೋಜಾ ಉಪವಾಸ ಸ್ವಯಂ ನಿಯಂತ್ರಣ ಶಿಸ್ತು ತ್ಯಾಗ ಅಂಶಗಳ ಆಶಾ ಭಾವನೆ ಒಳಪಡುವುದನ್ನು ನೋಡಿ ಕಲೆಯೂವಂತಹದು ರಂಜಾನ್ ತಿಂಗಳಲ್ಲಿ ಸ್ವರ್ಗದ ಬಾಗಿಲು ತೆರೆಯುತ್ತದೆ ನರಕದ ಬಾಗಿಲು ಮುಚ್ಚುತ್ತದೆ ಶೈತಾನನನ್ನು ಕಟ್ಟಿ ಹಾಕಲಾಗುತ್ತದೆ ಎಂಬ ನಂಬಿಕೆಯಿಂದ ಒಳ್ಳೆಯದನ್ನು ಮಾಡಬೇಕು ಅದಕ್ಕಾಗಿ ರೋಜಾ ಉಪವಾಸ ಇಡುತ್ತೇವೆ ನಮ್ಮನ್ನು ನಾವು ದಂಡಿಸಿಕೊಳ್ಳುತ್ತಾ ಮನಸ್ಸಿನ ನಿಯಂತ್ರಣ ದಾನ ತ್ಯಾಗ ಮಾಡುತ್ತೇವೆ ಪ್ರಪಂಚಕ್ಕೆ ರಮ್ ಜಾನ್ ಮಾಸ ಶಾಂತಿಯ ಸಂದೇಶ ನೀಡುತ್ತದೆ ರೋಜಾ ಉಪವಾಸ ಮಾಡುತ್ತಿರುವದು ಇನ್ನೊಬ್ಬರ ಹಸಿವನ್ನು ಅರಿಯುವುದೇ ರಂಜಾನ್ ತಿಂಗಳ ರೋಜಾ ಉಪವಾಸ ಆಚರಿಸುತ್ತಿರುವ ನಾವೆಲ್ಲರೂ ಪ್ರೀತಿ ವಿಶ್ವಾಸದಿಂದ ಬದುಕಬೇಕು ಸರ್ವರಿಗೂ ಮಾಹೆ ರಂಜಾನ್ ಮುಬಾರಕ್ ಅಲ್ ಹಾಜ್ ಅಬ್ದುಲ್ ನಬಿ ಅವರು ಶುಭ ಹಾರೈಸಿದರು.
