ಅರಳಿಗನೂರು : ಶರಣ ಶ್ರೀ ಬಸಪ್ಪ ತಾತನವರ 58ನೇ ಪುಣ್ಯರಾಧನೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,15- ತಾಲೂಕು ಅರಳಿಗನೂರು ಗ್ರಾಮದ ಶರಣ ಶ್ರೀ ಬಸಪ್ಪ ತಾತನವರ 58ನೇ ಪುಣ್ಯರಾಧನೆ ಅಂಗವಾಗಿ ದೇವಸ್ಥಾನದ ನೂತನ ಗೋಪುರಕ್ಕೆ ಕಲಶಾರೋಹಣ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು ಗಣಪತಿ ಉಮಾ ಮಹೇಶ್ವರಿ ಸ್ವಸ್ತಿ ಪುಣ್ಯ ವಾಚನ ನಾಂದಿ ಸಮಾರಾಧನೆ ನವಗ್ರಹ ಸಕಲ ದೇವತೆ ಪೂಜೆ ಮತ್ತು ವಾಸ್ತು ಹೋಮ ನೆರವೇರಿಸಲಾಯಿತು.
ನಂತರ ರಾರಾವಿ ಹತ್ತಿರದ ವೇದಾವತಿ ಹಗರಿ ನದಿಗೆ ತೆರಳಿ ಗಂಗೆ ಪೂಜೆ ನೆರವೇರಿಸಿ ಸಕಲ ವಾದ್ಯಗಳೊಂದಿಗೆ ಗಂಗೆ ತುಂಬಿದ ಕೊಡವನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತಂದು ಗದ್ದುಗೆಗೆ ಅಭಿಷೇಕ ಮಾಡಲಾಯಿತು ಬಳಿಕ ಸಹಸ್ರ ಬಿಲ್ವಾರ್ಚನೆ ಮಾಡಿ ನೂತನ ಗೋಪುರಕ್ಕೆ ಕಲಶಾರೋಹಣ ಮಾಡಲಾಯಿತು.
ಕಂಬಾಳಿ ಮಠದ ಶ್ರೀ ವೀರಭದ್ರ ಶಿವಾಚಾರ್ಯರು ಚರಣಗಿರಿ ಸಂಸ್ಥಾನ ಮಠ ಹಾಲ್ವಿಯ ಅಭಿನವ ಮಹಾಂತ ಸ್ವಾಮೀಜಿ ಇತರರು ಇದ್ದರು.
