ರೈತರ ಹಿತ ಕಾಪಾಡಲು ಶಕ್ತಿ ಮೀರಿಶ್ರಮಿಸುವೆ : ಹಸನ್ ಸಾಬ ದೋಟಿಹಾಳ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,16 – ತುಂಗಭದ್ರಾ ಜಲಾಶಯ ವ್ಯಾಪ್ತಿಯಲ್ಲಿಯ ರೈತರ ಹಿತ ಕಾಪಾಡಲು ಶಕ್ತಿ ಮೀರಿಶ್ರಮಿಸುವುದಾಗಿ ಮುನಿರಾಬಾದ ಕಾಡಾ ನೂತನ ಅಧ್ಯಕ್ಷ ಹಸನ್ ಸಾಬ ದೋಟಿಹಾಳ ಹೇಳಿದರು.
ಅವರು ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅದಿಕಾರ ಸ್ವೀಕರಿಸಿದ ನಂತರ ಮಾತನಾಡುತ್ತಿದ್ದರು.
ಅಭಿನಂದನೆ : ಅಧ್ಯಕ್ಷರಾಗಿ ಅಧಿಕಾರ ಸ್ವಿಕರಿಸಿದ ನಂತರ ಕೊಪ್ಪಳ, ಬಳ್ಳಾರಿ, ರಾಯಚೂರ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹಾಗೂ ಇತರರು ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಕೆ ರಾಜಶೇಖರ ಹಿಟ್ನಾಳ, ಕೊಪ್ಪಳದ ಮಾಜಿ ಶಾಸಕ ಕೆ ಬಸವರಾಜ ಹಿಟ್ನಾಳ, ಕುಷ್ಟಗಿ ಮಾಜಿ ಶಾಸಕರಾದ ಅಮರೇಗೌಡ ಬಯ್ಯಾಪುರ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
