ಯಲಬುರ್ಗಾ ಮಂಡಲದ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಅಯ್ಯನಗೌಡ ಕೆಂಚಮ್ಮನವರು ಆಯ್ಕೆ
ಕಾರ್ಯಕರ್ತರಿಂದ ಸನ್ಮಾನ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ 17 ತಾಲೂಕಿನ ಹುಣಶಿಹಾಳ ಗ್ರಾಮದಲ್ಲಿ ಮಂಡಲದ ಬಿಜೆಪಿ ತಾಲೂಕ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಅಯ್ಯನಗೌಡ ಕೆಂಚಮ್ಮನವರಿಗೆ ಗುಳೆ ಗ್ರಾಮದ ಬಿಜೆಪಿ ಕಾರ್ಯಕರ್ತರು ಸನ್ಮಾನಿಸಿ ಅಭಿನಂದಿಸಿದ್ದಾರೆ.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಯ್ಯನಗೌಡ ಕೆಂಚಮ್ಮನವರ ನಿಮ್ಮೆಲ್ಲರ ಬೆಂಬಲದೊಂದಿಗೆ ತಾಲೂಕಿನಾದ್ಯಂತ ಪಕ್ಷದ ತಳಮಟ್ಟದಿಂದ ಸಂಘಟನೆ ಸಲುವಾಗಿ ಹಗಲು ಇರುಳು ಶ್ರೇಮಿಸುತ್ತೇನೆ ಮತ್ತು ನರೇಂದ್ರ ಮೋದಿಜೀ ಅವರು ಮತ್ತೋಮೆ ಪ್ರಧಾನಿಯಾಗಬೇಕು ಅವರು ದೇಶದ ಸಮಗ್ರ ಅಭಿವೃದ್ಧಿ ಮಾಡಿದ್ದಾರೆ .
ದಕ್ಷ. ಪ್ರಮಾಣಿಕ. ಉತ್ತಮ ಅಡಳಿತ ನೀಡುವ ಮೂಲಕ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಮತ್ತು ಇಡೀ ಪ್ರಪಂಚವೇ ನಮ್ಮ ದೇಶದ ಕಡೇ ತಿರುಗಿ ನೋಡುವಂತ ಮಾಡಿದ್ದಾರೆ. ಪ್ರತಿಯೊಬ್ಬ ಬಿಜೆಪಿ ಪಕ್ಷದ ಕಾರ್ಯಕರ್ತರು ಸಂಘಟನೆಗಾಗಿ ಶ್ರಮಿಸಬೇಕು ಭಾಗಿಯಾಗಬೇಕೆಂದು ಹೇಳಿದರು
ಸನ್ಮಾನ ಕಾರ್ಯಕ್ರಮದಲ್ಲಿ ನಿಂಗರಾಜ ಮಾದರ, ಸೋಮಶೇಖರ್ ಪಾಟೀಲ್, ಶಿವರಾಜ ಪಾಟೀಲ್, ಹನಮೇಶ ಹೊಸಳ್ಳಿ , ನಿಜಲಿಂಗಪ್ಪ ಮಂತ್ರಿ, ದೇವೇಂದ್ರಪ್ಪ ಆವಾರಿ, ದುರಗಪ್ಪ ಹರಿಜನ ,ಹನಮಂತಪ್ಪ ಕೊಬ್ಲರ ಪಾಮಣ್ಣ ಬೋದೂರು ಶರಣಪ್ಪ ಗಾಳಿ ಲಿಂಗರಾಜ ಪಾಟೀಲ್ ಸೇರಿದಂತೆ ಮತ್ತು ಇತರರು ಭಾಗವಹಿಸಿದರು
