ನಟ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ನಿಮಿತ್ಯ ರಕ್ತದಾನ ಶಿಬಿರ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ 17 ಎಲ್ಲರೂ ಸ್ವ ಇಚ್ಛೆಯಿಂದ ಬಂದು ರಕ್ತದಾನ ಮಾಡಬೇಕು. ರಕ್ತದಾನ ಮಾಡುವದರಿಂದ ಆರೋಗ್ಯ ವೈದ್ದಿಯಾಗುತ್ತದೆ ಮತ್ತುಎಲ್ಲಾ ದಾನಗಳಲ್ಲಿ ರಕ್ತದಾನ ಶ್ರೇಷ್ಠದಾನ ವಾಗಿದೆ ಎಂದು ಮಾಜಿ ತಾಪಂ. ಸದಸ್ಯ ಶರಣಪ್ಪ ಈಳಗೇರ ಹೇಳಿದರು
ಪಟ್ಟಣದ ಪುನೀತ್ ರಾಜಕುಮಾರ್ ಅವರ ಸಕ೯ಲ್ ಹತ್ತಿರ ರೇಡ್ ಕ್ರಾಸ್ ಸಂಸ್ಥೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕು ಘಟಕ ಮತ್ತು ಅಪ್ಪು ಹುಡುಗರ ಸಂಘ ಹಾಗೂ ಸ್ನೇಹಜೀವಿ ಗೆಳೆಯರ ಬಳಗ ಯಲಬುರ್ಗಾ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬ್ರಹತ್ ರಕ್ತದಾನ ಶಿಬಿರ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇಂದಿನ ಯುವಕರು ದುಷ್ಟ ಚಟ್ಟಕೆ ಬಲಿಯಾಗದೆ ಸಮಾಜ ಮುಖಿ ಸೇವೆಯಲ್ಲಿ ತೋಡಗಿಕೊಳ್ಳಬೇಕು.
ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವದರಿಂದ ಇನ್ನೂಂದು ಜೀವ ಉಳಿವಿಗಾಗಿ ಕಾರಣರಾಗುತ್ತಾರೆ ಸತ್ತ ಮನುಷ್ಯನನ್ನು ಬದುಕಿಸಲು ಆಗುವದಿಲ್ಲ ಆದರೆ ನಾವು ನೀವೇಎಲ್ಲರೂ ರಕ್ತದಾನ ಮಾಡುವದರಿಂದ ಸಾಯುವ ಮನುಷ್ಯನನ್ನು ಉಳಿಸ ಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ 15 ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು ಈ ರಕ್ತದಾನ ಶಿಬಿರ ದಲ್ಲಿ ಕನಾ೯ಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀಕಾಂತಗೌಡ ಮಾಲಿ ಪಾಟೀಲ ರಕ್ತದಾನ ಮಾಡಿದರು ,ಈ ಸಂದರ್ಭದಲ್ಲಿ ಡಾಕ್ಟರ್ ಶಿವನಗೌಡ ದಾನರಡ್ಡಿ. ಡಾಕ್ಟರ್ ಅನ್ನದಾನೇಶ ಗದ್ದಿ. ಪ. ಪಂ. ಸದಸ್ಯ ಅಮರೇಶ ಹುಬ್ಬಳ್ಳಿ ಈರಪ್ಪ ಕುಡಗುಂಟಿ ವೀರಣ್ಣ ಹುಬ್ಬಳ್ಳಿ ಮಂಜುನಾಥ ಅಧಿಕಾರಿ ಶಂಕರ ಟೆಂಗಿನಕಾಯಿ ವಿಜಯ ಜಕ್ಕಲಿ. ಮತ್ತು ರೇಡ್ ಕ್ರಾಸ್ ಸಂಸ್ಥೆಯ ವೆಂಕಟೇಶ್ ನಾಯಕ್ ರಾಘವೇಂದ್ರ ಡಿ. ಎನ್. ಆಂಜನಪ್ಪ. ಮಂಜುನಾಥ ಅಳವಂಡಿ. ಆನಂದ ಇಟಗಿ. ಸೃಷ್ಠಿ ಮತ್ತು ಇತರರು ಭಾಗವಹಿಸಿದರು
