ಪ್ರತಿಯೊಬ್ಬರೂ ತಪ್ಪದೆ ಮತದಾನ ಮಾಡಿ
ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ
ಜಿಲ್ಲಾ ಘಟಕದ ಅಧ್ಯಕ್ಷ ರವಿಚಳಗುರ್ಕಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,21- ಚುನಾವಣೆಗಳಲ್ಲಿ ಪ್ರತಿ ಒಬ್ಬರು ಮತದಾನವನ್ನು ತಪ್ಪದೇ ಮಾಡಬೇಕೆಂದು, ಇದು ನಾಗರಿಕನ ಪ್ರಥಮ ಕರ್ತವ್ಯವು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚಳಗುರ್ಕಿ ಹೇಳಿದರು.
ತಾಲೂಕಿನ ಸಂಜೀವನ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಚುನಾವಣೆ ಪರ್ವ ದೇಶದ ಲೋಕಸಭಾ 2024ರ ಕುರಿತು ಏರ್ಪಡಿಸಿದ್ದ ಮಕ್ಕಳಿಂದ ತಂದೆ ತಾಯಿಗೆ ಪತ್ರ ಬರೆಯುವ ಸ್ಪರ್ಧೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉತ್ತಮ ಪತ್ರ ಬರೆದ ಮಕ್ಕಳಿಗೆ ಪ್ರಸಂಶ ಮಾಡಿ ಮಾತನಾಡಿದರು.
ಸಂವಿಧಾನದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಒಂದು ವೋಟಿನ ಹಕ್ಕು ನೀಡಿದೆ ಆದ್ದರಿಂದ 2024 ಮೇ 7ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸುವಂತೆ ಮಕ್ಕಳು ಪೋಷಕರಿಗೆ ಮನೆ ಒಲಿಸಬೇಕು. ಅಂದು ಹಬ್ಬದ ರೀತಿಯಲ್ಲಿ ಆಚರಿಸಬೇಕು ಶೇಕಡ 100 ರಷ್ಟು ಸಾಧನ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭವಾಗಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮಲತಾ ಮತ್ತು ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ ರಾಜಕೀಯ ಪಕ್ಷಗಳು ತೋರಿಸುವ ಯಾವುದೇ ಅವಶ್ಯಕತೆ ಬಲಿಯಾಗದೆ ಉತ್ತಮ ನಾಯಕರಿಗೆ ತಮ್ಮ ಮತವನ್ನು ನೀಡಬೇಕೆಂದು ತಂದೆ ತಾಯಿಗಳಿಗೆ ವಿದ್ಯಾರ್ಥಿಗಳು ಹೇಳಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಹಲಕುಂದಿ ಕ್ಲಸ್ಟರ್ ಸಿಆರ್ಪಿ ಶ್ರೀನಿವಾಸ, ಶಿಕ್ಷಕರಾದ ವಿ ಬಸವರಾಜ ಮೋದಿನ ಸಾಬ್ ಶೇಷಮ್ಮ ರಾಮಾಂಜನೇಯ ಅಂಗನವಾಡಿ ಕಾರ್ಯಕರ್ತರಾದ ಪದ್ಮಾವತಿ ಶ್ರೀದೇವಿ ನಿಂಗಮ್ಮ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
