ನರೇಗಾ ಯೋಜನೆಯನ್ನು ಸದ್ಬಳಕೆ ಪಡೆಯಲು
ಸಮೀನ ಭಾನು ಕರೆ
ಕರುನಾಡ ಬೆಳಗು ಸುದ್ದಿ
ಹೊಸಪೇಟೆ, 22- ( ವಿಜಯನಗರ )ಇಂದು ಸಹಾಯಕ ನಿರ್ದೇಶಕರಾದ ಸಮೀನ ಭಾನು ಅವರು, (ಗ್ರಾಮೀಣ ಉದ್ಯೋಗ ) ರವರು,ಹೊಸಪೇಟೆ ತಾಲೂಕಿನ,114ಡಣಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ, ವ್ಯಾಸನಕೆರೆ ಕೆರೆಯಲ್ಲಿ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿನೀಡಿ ಕೂಲಿ ಕಾರ್ಮಿಕರಿಗೆ ಮಾಹಿತಿಯನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ ಸರ್ಕಾರ ಕೂಲಿ ಕಾರ್ಮಿಕರಿಗೆ ಕೆಲಸಗಳು ಹುಡುಕಿಕೊಂಡು ಗೂಳಿ ಹೋಗುವುದನ್ನು ನಿಲ್ಲಿಸಲು ಈ ಯೋಜನೆಯನ್ನು ಜಾರಿಗೊಳಿಸುತ್ತಿರುವದಾಗಿ, ಈ ಯೋಜನೆಯನ್ನು ಸದ್ಬಳಿಕೆ ಪಡೆಯಲು ಕರೆ ನೀಡಿದರು. ಅಷ್ಟೇ ಅಲ್ಲದೆ ರಾಷ್ಟ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆಗಳನ್ನು ವಿವರವಾಗಿ ತಿಳಿಸಿಕೊಟ್ಟರು.
ನರೇಗಾ ಯೋಜನೆಯ *ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತ್ರಿ/ಉದ್ಯೋಗ ಖಾತ್ರಿ ದುಡಿಮೆ ಖಾತ್ರಿ ” ಎಂಬ ಅಭಿಯಾನದಡಿ” ಏಪ್ರಿಲ್ ಒಂದರಿಂದ ಮೇ ಅಂತ್ಯದವರೆಗೆ ನಿರಂತರವಾಗಿ ಕೂಲಿಕಾರರಿಗೆ ಯೋಜನೆಯಡಿ ಕೆಲಸ ನೀಡುವ ಬಗ್ಗೆ ಮಾಹಿತಿಯನ್ನು ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಈ ಅಭಿಯಾನವು ಪ್ರಾರಂಭಿಸಲಾಗಿದೆ ಎಂದರು ಹಾಗೂ ಗ್ರಾಮ ಪಂಚಾಯತಿಗೆ ನಮೂನೆ 6ರಲ್ಲಿ ಕೆಲಸಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದು ಎಂದು ಹೇಳಿದರು.
ನರೇಗಾ ನಿಯಮಾನುಸಾರ ಕೂಲಿ ಕಾರ್ಮಿಕರು ಕೆಲಸ ನಿರ್ವಹಣೆ ಮಾಡಬೇಕು, ಗಂಡು ಮತ್ತು ಹೆಣ್ಣಿಗೆ ಸಮಾನ ಕೂಲಿ ನೀಡಲಾಗುವುದು, ಹಿರಿಯ ನಾಗರಿಕರಿಗೆ ಮತ್ತು ವಿಶೇಷ ಚೇತನರಿಗೆ ಪ್ರತ್ಯೇಕವಾಗಿ NMR ಸೃಜನೆ ಮಾಡಿ ಕೆಲಸ ನೀಡಲಾಗುವುದು
, ಅಳತೆಗೆ ತಕ್ಕಂತೆ ಕೆಲಸ ನಿರ್ವಹಣೆ ಮಾಡಿದರೆ ಮಾತ್ರ ಒಂದು ದಿನದ ಪೂರ್ಣ ಪ್ರಮಾಣದ ಕೂಲಿಯು ಲಭ್ಯವಾಗುತ್ತದೆ ಎಂದು ತಿಳಿಸಿದರು ಸಂದರ್ಭದಲ್ಲಿ ನಾಗರಾಜ ಹೆಚ್,ಐಇಸಿ ಸಂಯೋಜಕರು,ಸುರೇಶ್ ತಾಂತ್ರಿಕ ಸಂಯೋಜಕರು ತಾ.ಪಂ.ಹೊಸಪೇಟೆ, ಮಂಜುಳಾ ತಾಂತ್ರಿಕ ಸಹಾಯಕರು, ಬಿ.ಎಪ್.ಟಿ ಕಲಂದರ್,ಜಿಕೆಎಮ್ ಮಂಜುಳಾ,ಗ್ರಾ.ಕೂ.ಸ.ಸಿಬ್ಬಂದಿ ಹಾಗೂ ಕಾಯಕಬಂಧುಗಳು ಉಪಸ್ಥಿತರಿದ್ದರು.
