IMG-20240402-WA0053

ಭೂತದ ಬಾಯಲ್ಲಿ ಭಗವದ್ಗೀತೆ : ಶ್ರೀರಾಮುಲು

ಕರುನಾಡ ಬೆಳಗು ಸುದ್ದಿ

 ಬಳ್ಳಾರಿ, 2- ಇವತ್ತು ಬಳ್ಳಾರಿಯ ಭೂತದ ಬಾಯಲ್ಲಿ ಭಗವದ್ಗೀತಾ ಬರ್ತಾ ಇದೆ, ಒಂದು ಕಡೆ ಮಹಾಭಾರತವನ್ನು ಉಲ್ಲೇಖಿಸುತ್ತಿದ್ದಾರೆ ಮತ್ತೊಂದು ಕಡೆ ಭವಿಷ್ಯದ ಬಗ್ಗೆ ಉಲ್ಲೇಖ ಮಾಡ್ತಾ ಇದ್ದಾರೆ, ಹಾಗೆ ಇಲ್ಲಿಯ ಕೆಲವರಿಗೆ ಮದ ಏರಿದೆ, ಕಲಾ ನರಿಗಳು ಈಗಾಗಲೇ ಕುತಂತ್ರವನ್ನು ಮಾಡಲು ಶುರು ಮಾಡಿದ್ದಾರೆ ಇದಕ್ಕೆ ಕಾಲವೇ ಉತ್ತರ ನೀಡಲಿದೆ ಎಂದು ಲೋಕಸಭಾ ಬಿಜೆಪಿ ಅಭ್ಯರ್ಥಿ ಬಿ ಶ್ರೀರಾಮುಲು ಅವರು ಪರೋಕ್ಷವಾಗಿ ಸಚಿವ ನಾಗೇಂದ್ರ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಹಿಂದೂ ಬಳ್ಳಾರಿ ನಗರ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಹಮ್ಮಿಕೊಂಡಿದ್ದ ಶ್ರೀರಾಮುಲು ಅವರನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇವತ್ತು ನರೇಂದ್ರ ಮೋದಿಜಿ ದೇಶದ ಒಂದು ದೊಡ್ಡ ಶಕ್ತಿ ಅಂತಹ ಶಕ್ತಿ ಜೊತೆಗೆ ಕೆಲಸ ಮಾಡುವ ಅವಕಾಶ ನನಗೆ ಮಾಡಿಕೊಟ್ಟಿದ್ದಾರೆ ಹೀಗಾಗಿ ಈ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರ ಸರ್ಕಾರ ಜನರಿಗೆ ಮಾಡಿದ ಒಳ್ಳೆ ಕೆಲಸಗಳೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದರು.

ನನ್ನನ್ನು ಸೋಲಿಸಲು ಕಾಂಗ್ರೆಸ್ ಅವರು ತಂತ್ರ ಕುತಂತ್ರಗಳು ಏನೇ ಮಾಡಲಿ, ಅವರದ್ದು ಸರ್ಕಾರ ಇದೆ ಅವರ ಶಕ್ತಿಯಿಂದ ಅವರು ಏನೇ ಪ್ರಯತ್ನ ಮಾಡದೇ ಇವತ್ತು ಮೋದಿ ಅವರು ಗೆಲ್ಲಬೇಕು ಇದೇ ಹಾಗೆ ಶ್ರೀರಾಮುಲು ಅವರನ್ನು ಗೆಲ್ಲಿಸಲು ಜನ ತೀರ್ಮಾನ ಮಾಡಿದ್ದಾರೆ ಎಂದರು.

ಕಾಂಗ್ರೆಸ್ ನವರಿಗೆ ಕ್ಯಾಂಡೇಟ್ ಗಳೇ ಸಿಗುತ್ತೆ ಇಲ್ಲ ಹಾಗಾಗಿ ಬಹುತೇಕ ಅಭ್ಯರ್ಥಿಗಳು ಸಚಿವರ ಮಕ್ಕಳು ಸಚಿವರ ಕುಟುಂಬಸ್ಥರು ಸ್ಪರ್ಧೆ ಮಾಡಿದ್ದಾರೆ, ಕಾಂಗ್ರೆಸ್ ದೇಶದಲ್ಲಿ ಮುಳುಗುವ ಹಡಗಿನಂತಾಗಿದೆ ಎಂದು ಟೀಕಿಸಿದರು.

ಈ ಸಲದಲ್ಲಿ ಮಾಜಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ, ಬಿಜೆಪಿ ಮುಖಂಡರು ಚೆನ್ನಪ್ಪ ಮಲ್ಲಿಕಾರ್ಜುನ್, ಡಾಕ್ಟರ್ ಮಹಿಪಾಲ್, ಅನಂತ್ ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!