IMG-20240402-WA0046

ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಭೆ

ಕರುನಾಡ ಬೆಳಗು ಸುದ್ದಿ 

ಸಿರುಗುಪ್ಪ, 2- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗಕ್ಕೆ ಯಾವುದೇ ರೀತಿಯ ತೊಂದರೆಯಾದರೂ ನೇರವಾಗಿ ನಮ್ಮನ್ನು ಸಂಪರ್ಕಿಸಬೇಕು ಎಂದು ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಸುಂದರೇಶ್ ಹೊಳೆಯಣ್ಣನವರ್ ಹೇಳಿದರು.

ಸಿರುಗುಪ್ಪ ತಾಲೂಕು ತೆಕ್ಕಲಕೋಟೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು ಛಲವಾದಿ ಮಲ್ಲಯ್ಯ ಮಾತನಾಡಿ ಹಳೆಕೋಟೆ, ಉಪ್ಪಾರಹೊಸಳ್ಳಿ ಬಲಕುಂದಿ ಪಪ್ಪನಹಾಳು ದೇವಿನಗರದಲ್ಲಿ ಕ್ಷೌರಿಕರು ಪರಿಶಿಷ್ಟ ಜಾತಿ ಜನಾಂಗಕ್ಕೆ ಕಟಿಂಗ್ ಮತ್ತು ಶೇವಿಂಗ್ ಮಾಡುವುದಿಲ್ಲವೆಂದು ಹೇಳುತ್ತಾರೆ ಎಂದು ಸಭೆಗೆ ತಿಳಿಸಿದರು.

ಸಿ ಕುಮಾರ ಮಾತನಾಡಿ ತೆಕ್ಕಲಕೋಟೆಯ ಹೋಬಳಿಯ ಕೆಲವು ದೇವಸ್ಥಾನಗಳಲ್ಲಿ ಪರಿಶಿಷ್ಟ ಜಾತಿ ಜನಾಂಗಕ್ಕೆ ಪ್ರವೇಶ ನಿರಾಕರಿಸುತ್ತಿದ್ದಾರೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ತಿಳಿಸಿದರು.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಿಪಿಐ ಸುಂದರೇಶ್ ತಿಳಿಸಿದರು.

ಪೊಲೀಸ್ ಸಬ್ ಇನ್ಸ್ಪೆಕ್ಟರ್ ತಾರಾಬಾಯಿ ಕ್ರೈಂ ಪಿ ಎಸ್ ಐ ಸಂಗಮೇಶ್ವರ ತೆಕ್ಕಲಕೋಟೆ ಅರಳಿಗನೂರು ಉಪ್ಪಾರ ಹೊಸಳ್ಳಿ ಪಪ್ಪನಹಾಳು ನಿಟ್ಟೂರು ಗ್ರಾಮಗಳ ಮುಖಂಡರಾದ ಕೆ ಕೃಷ್ಣ ಡಿ ವೀರೇಶ ಫಕೀರಯ್ಯ ಎಸ್ ವಿಜಯ್ ಕುಮಾರ್ ಕೆ ಗುರುಮೂರ್ತಿ ಡಿ ವೀರೇಶ ದುರುಗಪ್ಪ ಮರಿಸ್ವಾಮಿ ಮಲ್ಲಪ್ಪ ದುರ್ಗೇಶ ಇದ್ದರು.

Leave a Reply

Your email address will not be published. Required fields are marked *

error: Content is protected !!