IMG-20240402-WA0048

ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಅಲ್ಲಂಪ್ರಶಾಂತ್ ನೇಮಕ

ಕರುನಾಡ ಬೆಳಗು ಸುದ್ದಿ 

ಬಳ್ಳಾರಿ, 2- ಕಾಂಗ್ರೆಸ್ ಪಕ್ಷದ ನಗರದ ಜಿಲ್ಲಾ ಸಮಿತಿಯ ಅಧ್ಯಕ್ಷರನ್ನಾಗಿ ಅಲ್ಲಂಪ್ರಶಾಂತ್ ಅವರನ್ನು ನೇಮಕ ಮಾಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ನೆನ್ನೆ ರಾತ್ರಿ ಆದೇಶ ಹೊರಡಿಸಿದ್ದಾರೆ.

ಇವರಿಗೆ ಕಳೆದ ಹಲವು ವರ್ಷಗಳಿಂದ ಸಂತೋಷದ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಬಿಎಸ್ ಮಹಮ್ಮದ್ ರಫೀಕ್ ಅವರು ಈ ಸ್ಥಾನದಲ್ಲಿ ಇದ್ದರು. ಇವರನ್ನು ಬದಲಾಯಿಸುವ ಪ್ರಯತ್ನ ಆಗಿದ್ದಂಗೆ ಕೇಳಿ ಬರುತ್ತಿದ್ದರು ಅವರನ್ನೇ ಮುಂದುವರಿಸಲಾಗಿತ್ತು ಈಗ ಚುನಾವಣೆ ಸಂದರ್ಭದಲ್ಲಿ ಅವರನ್ನು ಬದಲಾಯಿಸಲಾಗಿದೆ.

ಈ ಸ್ಥಾನಕ್ಕೆ ಬೆಳೆಕಲ್ ಬಸವರಾಜ್ ಗೌಡ ಸೇರಿದಂತೆ ಹಲವಾರು ಪ್ರಯತ್ನಿಸಿದ್ದರು. ಆದರೆ ಪಕ್ಷ ಕೆಪಿಸಿಸಿ ಮಾಜಿ ಅಧ್ಯಕ್ಷರಾದ ಅಲ್ಲಂ ವೀರಭದ್ರಪ್ಪ ಅವರ ಪುತ್ರ ಜಿಲ್ಲಾ ಪಂಚಾಯತಿಯ ಮಾಜಿ ಸದಸ್ಯ ಅಲ್ಲಂ ಪ್ರಶಾಂತ್ ಅವರನ್ನು ನೇಮಕ ಮಾಡಿದೆ. ಪ್ರಶಾಂತ್ ಅವರು ರಾಜ್ಯಮಟ್ಟದ ನಿಗಮ ಮಂಡಳಿಯ ಅಧ್ಯಕ್ಷರಾಗಲು ಬಯಸಿದ್ದರು ಆದರೆ ಪಕ್ಷ ಬಿಸಿಸಿ ಜವಾಬ್ದಾರಿ ವಹಿಸಿಕೊಂಡು ಪಠ್ಯ ಸಂಘಟನೆ ಮಾಡಲು ಸೂಚಿಸಿದೆ. ಇದರೊಂದಿಗೆ ನಗರದ ವೆಂಕಟೇಶ್ ಹೆಗಡೆ ಮತ್ತು ಮಯೂನ್ ಖಾನ್ ಅವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕ ಮಾಡಲಾಗಿದೆ.

ಈ ಸಂದರ್ಭವಾಗಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಲ್ಲಮ ಪ್ರಶಾಂತ್ ಅವರು ಇಂದು ನಗರದ ಆರಾಧ್ಯ ದೇವತೆ ಕನಕದುರ್ಗಮ್ಮ ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿದ ಸಂದರ್ಭದಲ್ಲಿ, ಕಾಂಗ್ರೆಸ್ ಮುಖಂಡ ಮತ್ತು ದೇವಸ್ಥಾನದ ಮುಖಂಡ ಪೂಜಾರಿ ರಾಜಪ್ಪ ಮತ್ತು ಇತರರು ಸನ್ಮಾನಿಸಿದರು.

Leave a Reply

Your email address will not be published. Required fields are marked *

error: Content is protected !!