WhatsApp Image 2024-04-08 at 7.03.48 PM

ಜಿಲ್ಲೆಗೆ ಮೋದಿಯವರ ಕೊಡುಗೆ ಏನು : ಇ ತುಕಾರಾಂ

ಕರುನಾಡ ಬೆಳಗು ಸುದ್ದಿ

ವಿಜಯನಗರ, 8- ಲೋಕಸಭಾ ಚುನಾವಣೆ 2019ರ ಅಂಗವಾಗಿ ವಿಜಯನಗರ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪೂರ್ವಭಾವಿ ಸಭೆಯನ್ನು ನಗರದ ಟಿಬಿ ಡ್ಯಾಮ್ ರಸ್ತೆಯಲ್ಲಿರುವ ಸಾಯಿಲೀಲಾ ರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದರು.

ಈ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಂಡ ಬಳ್ಳಾರಿ ಲೋಕ ಸಭಾ ಕ್ಷೇತ್ರ ಅಭ್ಯರ್ಥಿ ಇ. ತುಕಾರಾಂ ಕಾಂಗ್ರೇಸ್ ಪಕ್ಷ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಜಯಭೆರಿ ಬಾರಿಸುತ್ತದೆ.

2014 ರಿಂದ 24ರ ಅವಧಿಯವರೆಗೆ ಅಖಂಡ ಬಳ್ಳಾರಿ ಜಿಲ್ಲೆಗೆ ಮೋದಿಯವರ ಕೊಡುಗೆ ಏನು. ರಾಜ್ಯದ, ಜಿಲ್ಲೆಯ ಜನರು ಮೋದಿಯ ಮುಖನೋಡಿ ಓಟು ಹಾಕಿದ್ದರು ಅವರಿಗೆ ಕೇಂದ್ರದಿಂದ ನೀವೇನು ಕೊಡುಗೆಯನ್ನು ತಂದು ಕೊಟ್ಟಿದ್ದೀರಿ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.

ಕೇಂದ್ರದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರದಲ್ಲಿದ್ದಾಗ ಮಾಡಿದಂತಹ ಕೆಲಸಗಳು ಇಂದು ಗುರುತರವಾದ ಆಸ್ತಿಯಾಗಿವೆ. ರಾಜ್ಯ ಸರ್ಕಾರದ ಕಾರ್ಯಕ್ರಮಗಳು ನಮಗೆ ಬೆಂಬಲವಾಗಿವೆ ಅವುಗಳನ್ನೇ ಇಟ್ಟುಕೊಂಡು ಈ ಚುನಾವಣೆ ಎದುರಿಸುತ್ತಿದ್ದೇವೆ.

ಕೇಂದ್ರದ ವರಿಷ್ಟರು ಮತ್ತು ರಾಜ್ಯ ನಾಯಕರ ಸಲಹೆಮೇರೆಗೆ ಪಕ್ಷದ ಎಲ್ಲಾ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಮಾಡುತ್ತಿದ್ದೇವೆ. ಕಾಂಗ್ರೇಸ್ ನ ಜಿಲ್ಲೆಯ ಎಲ್ಲಾ ನಾಯಕರು ಒಗ್ಗಟ್ಟಿನಿಂದಇದ್ದೇವೆ ಸಣ್ಣಪುಟ್ಟ ವೈಮನಸ್ಸುಗಳಿದ್ದರೆ ಸರಿಪಡಿಸಿಕೊಂಡು ಹೋಗುತ್ತೇವೆ ಎಂದರು.

ಹೆಚ್ ಆರ್ ಗವಿಯಪ್ಪ, ಪಿ ಟಿ ಪರಮೇಶ್ವರ್ ನಾಯ್ಕ್,ಶಿವಯೋಗಿ, ರಾಣಿ ಸಂಯುಕ್ತ, ಆಡಿಟರ್ ಮಹಮ್ಮದ್ ಇದ್ದರು.

Leave a Reply

Your email address will not be published. Required fields are marked *

error: Content is protected !!