WhatsApp Image 2024-04-10 at 6.08.30 PM

ಆಧ್ಯಾತ್ಮಿಕ ಚಿಂತನೆಯಿಂದ ಉತ್ತಮ ಫಲಿತಗಳು ಸಾಧ್ಯ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 10- ನೂತನ ಹೊಸ ವರ್ಷ ಕ್ರೋಧಿ ನಾಮ ಸಂವತ್ಸರದಲ್ಲಿ ನಾವು ಭಗವಂತನ ಆರಾಧನೆ ಎಷ್ಟು ಮಾಡುತ್ತಿವೋ ಅಷ್ಟು ಉತ್ತಮ ಫಲಿತವನ್ನು ಹೊಂದುತ್ತೇವೆ ಎಂದು, ಆಚಾರ್ಯ ನರಸಪ್ಪನವರು ತಿಳಿಸಿದರು.

ಸತ್ಯನಾರಾಯಣಪೇಟೆಯಲ್ಲಿ ಇರುವ ಲಕ್ಷ್ಮಿ ಸತ್ಯನಾರಾಯಣ ದೇವಸ್ಥಾನದಲ್ಲಿ, ಪರಶುರಾಮ ಸೇವಾ ಟ್ರಸ್ಟ್, ಮತ್ತು ಸತ್ಯನಾರಾಯಣ ದೇವಸ್ಥಾನ ಟ್ರಸ್ಟ್ ಸಂಯುಕ್ತ ವತಿಯಿಂದ ನಡೆಸಿದಕ್ರೋಧಿ ನಾಮ ಪಂಚಾಂಗ ಶ್ರವಣ ಕಾರ್ಯಕ್ರಮದಲ್ಲಿ ಹೊಸ ಪಂಚಾಂಗಕ್ಕೆ ಪೂಜಾ ದೇವಸ್ಥಾನ ಪೂಜೆ ನಂತರ ಪಂಚಾಂಗ ಶ್ರವಣ ಮಾಡುತ್ತಾ ನೋಡಿದರು.

ಈ ಹೊಸ ವರ್ಷದಲ್ಲಿ, ಒಂದು ಕಡೆ ಅತಿವೃಷ್ಟಿ ಮತ್ತೊಂದು ಕಡೆ ಅನಾವೃಷ್ಟಿ ಮಳೆ ಬೆಳೆಗಳು ಇದ್ದರೂ, ಏನೇ ಸಂಕಷ್ಟಗಳು ಬಂದರೂ,ಜನರು ಭಗವಂತನನ್ನು ಅತಿಹೆಚ್ಚಿನ ಆರಾಧನೆಯಿಂದ ಎಲ್ಲಾ ಸಂಕಷ್ಟಗಳು ದೂರವಾಗುತ್ತವೆ ಎಂದು ತಿಳಿಸಿದರು.

ಈ ಸಂದರ್ಭವಾಗಿ ಕಾರ್ಯಕ್ರಮದಲ್ಲಿ ಪರಶುರಾಮ ಸೇವಾ ಟ್ರಸ್ಟ್ ಜಿಲ್ಲಾಧ್ಯಕ್ಷರು, ಗೋಪಿಕೃಷ್ಣ, ಸತ್ಯನಾರಾಯಣ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷರು ರಾಜರಾಜ ಮತ್ತು ಟ್ರಸ್ಟ್ ಸದಸ್ಯರು ಪರಶುರಾಮ ಸೇವಾ ಟ್ರಸ್ಟ್ ಸದಸ್ಯರು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಪಂಚಾಂಗ ಶ್ರವಣವನ್ನು ಕೇಳಿದರು.

ಈ ಸಂದರ್ಭವಾಗಿ ನಂತರ ಪಂಚಾಂಗ ಶ್ರವಣ ನಡೆಸಿಕೊಟ್ಟ ಆಚಾರ್ಯ ನರಸಪ್ಪನವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಕೊನೆಯಲ್ಲಿ ಭಕ್ತಾದಿಗಳಿಗೆ ತೀರ್ಥ ಪ್ರಸಾದವನ್ನು ನೀಡಲಾಯಿತು.

Leave a Reply

Your email address will not be published. Required fields are marked *

error: Content is protected !!