11gvt01

ರಂಜಾನ್ ಹಬ್ಬ ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 12- ನಗರದ ಜಯನಗರ ರಸ್ತೆಯಲ್ಲಿರುವ ವಕ್ಫ್ ಕಮೀಟಿಯ ಈದ್ಗಾ ಮೈದಾನದಲ್ಲಿ- ರಂಜಾನ್ ಹಬ್ಬದ ನಿಮಿತ್ತ ನಗರದ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಕಮಲ್ ಮುಸ್ತಫಾ ಅವರು ಸಾಮೂಹಿಕ ಧರ್ಮ ಬೋಧನೆ ಹಾಗೂ ಪ್ರಾರ್ಥನೆ ನೆರವೇರಿಸಿದರು.

ಶಾಸಕ ಗಾಲಿ ಜನಾರ್ದನರೆಡ್ಡಿ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಮುಸ್ಲಿಂ ಬಾಂಧವರಿಗೆ ಶುಭ ಕೋರಿದರು.

ಚುನಾವಣಾ ನೀತಿ ಸಂಹಿತೆ ತಂಡದಿಂದ ವಿಡಿಯೋ ಚಿತ್ರಿಕರಣ- ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆಯ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ಮಾಡಿದ ಭಾಷಣವನ್ನು ಚುನಾವಣಾ (ಪ್ಲೇಯಿಂಗ್ ಟೀಂ) ಅಧಿಕಾರಿ ಗುರುಪ್ರಸಾದ ನೇತೃತ್ವದ ತಂಡದವರು ವಿಡಿಯೋ ಚಿತ್ರೀಕರಣ ಮಾಡಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಮೌಲಸಾಬ,ಮುಸ್ತಕ ಅಲಿ,ಜಬ್ಬಾರ ಬೇಗ ಬಿಚಗತ್ತಿ, ಮಹಮ್ಮದ ಉಸ್ಮಾನ, ಈದ್ಗಾ ಕಮೀಟಿ ಸಲಹಾ ಸಮಿತಿ ಸದಸ್ಯ ಎಸ್.ಬಿ.ಖಾದ್ರಿ, ಶೇಖ ಇಲಿಯಾಸ್, ಸೈಯದ್ ಅಲಿ, ರಹೆಮತ್ ಸಂಪಂಗಿ ಮುಂತಾದವರು ಉಪಸ್ಥೀತರಿದ್ದರು.

Leave a Reply

Your email address will not be published. Required fields are marked *

error: Content is protected !!