Chitra kale (1)

ಶಹಪುರ : ವಿಠ್ಠಲ ರುಕ್ಮಿಣಿ ಮಂದಿರದಲ್ಲಿ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 12- ಜಿಲ್ಲೆಯ ಬೇವಿನಹಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ಶಹಪುರ ಗ್ರಾಮದ ಶ್ರೀ ವಿಠ್ಠಲ ರುಕ್ಮಿಣಿ ಮಂದಿರದಲ್ಲಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಗೋಂಧಳಿ ಸಮಾಜದ ಯುವಕರ ಸಂಘದಿಂದ ಆಯೋಜಿಸಿದ್ದ ಈ ಚಿತ್ರಕಲಾ ಸ್ಪರ್ಧೆಯಲ್ಲಿ ಪುಟ್ಟ ಪುಟ್ಟ ಮಕ್ಕಳು ಭಾಗವಹಿಸಿದ್ದರು.

ಪೋಷಕರು ಮಕ್ಕಳಿಗೆ ಬೇಕಾದ ಪೇಪರ್, ಕಲರ್ ಪೆನ್ಸಿಲ್‌ಗಳನ್ನು ಒದಗಿಸಿದ್ದರು.

ಶಹಪುರ ಗ್ರಾಮದಲ್ಲಿ ಶ್ರೀ ಮಾರೆಮ್ಮ ದೇವಿ ಪ್ರಯುಕ್ತ ಗೋಂಧಳಿ ಸಮಾಜದ ಬಂಧುಗಳು ಆಗಮಿಸಿದ್ದು ಮಕ್ಕಳಿಗೆ ಚಿತ್ರಕಲೆ ಮತ್ತು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸ್ಪರ್ಧಾ ಮನೋಭಾವನೆಗಳನ್ನು ಮೂಡಿಸಿದರು.

ಈ ಚಿತ್ರಕಲಾ ಸ್ಪರ್ಧೆಯನ್ನು ಮಂಜು ಕೆ.ಜೋಷಿ, ಶಶಿ ವಾಷ್ಟರ್, ರಾಮ್ ಜೋಷಿ, ಮೇಘ ವಾಕೋಡೆ, ಪ್ರವೀಣ್ ವಾಕೋಡೆ, ಹನುಮಂತ ನಾಯ್ಕಲ್, ಕಿರಣ್ ವಾಷ್ಟರ್ ಮತ್ತಿತರರ ನೇತೃತ್ವದಲ್ಲಿ ಆಯೋಜಿಸಿದ್ದು, ಚಿಣ್ಣರು ಉತ್ಸಾಹದಿದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

 

Leave a Reply

Your email address will not be published. Required fields are marked *

error: Content is protected !!