
ಪಕ್ಷದಲ್ಲಿ ನನ್ನ ಸ್ವಾಭಿಮಾನಕ್ಕೆ ಧಕ್ಕೆ
ಸಂಸದ ಸಂಗಣ್ಣ ಕರಡಿ ಬೇಸರ
ಕರುನಾಡ ಬೆಳಗು ಸುದ್ದಿ
ಕೊಪ್ಪಳ ,03- ಬಿಜೆಪಿ ಸರ್ಕಾರದಲ್ಲಿ ಅಂದಿನ ಸಚಿವರಾದ ಸಿ.ಸಿ.ಪಾಟೀಲ್, ಕಾರಜೋಳ ಬಳಿ ಹೋದರು ಕೆಲಸ ಆಗಲಿಲ್ಲ. ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ. ಆದರೂ ಪಕ್ಷದ ಚೌಕಟ್ಟಿನಲ್ಲಿ ಇರುವ ಕಾರಣ ಏನು ಮಾಡಲು ಆಗಿಲ್ಲ. ಒಮ್ಮೊಮ್ಮೆ ಹೊರ ಬರಬೇಕು ಅನಿಸುತ್ತದೆ. ಆದರೂ ಅನಿವಾರ್ಯ ಎಂದು ಸಂಸದ ಸಂಗಣ್ಣ ಕರಡಿ ಬೆಸರ ವ್ಯಕ್ತಪಡಿಸಿದರು.
ಅವರು ಜಿಲ್ಲಾ ನ್ಯಾಯಾಲಯದ ಸಂಕೀರ್ಣ ಕಟ್ಟಡ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಬಿಜೆಪಿ ಸರ್ಕಾದಲ್ಲಿ ಅವರಿಗೆ ಆದ ಅನುಭವ ಹಾಗೂ ಅವಮಾನವನ್ನು ವೇದಿಕೆ ಮೇಲೆ ಹಂಚಿಕೊಂಡ ಅವರು ಕಳೆದ ಸರ್ಕಾರದ ಆಡಳಿತ ವೈಫಲ್ಯದ ಬಗ್ಗೆ ಬೆಸರ ವ್ಯಕ್ತಪಡಿಸಿದರು.
ಹಿಂದೆ ನ್ಯಾಯಾಲಯ ಕಟ್ಟಡಕ್ಕೆ ಹಣ ಒದಗಿಲಸಲು ವಿಳಂಬ ವಾಯಿತು ಎಂದು ಬೆಸರ ವ್ಯಕ್ತ ಪಡಿಸಿದರು.
ನ್ಯಾಯಾಂಗ ವ್ಯವಸ್ಥೆಗೆ ತನ್ನದೇ ಗೌರವ ಇದೆ. ಸಮಾಜ, ಸರ್ಕಾರ ಎಡವಿದಾಗ ಎಚ್ಚರಿಸುವ ಕೆಲಸ ಮಾಡಬೇಕು. ಟೆಕ್ನಾಲಜಿ ಯುಗದಲ್ಲಿದ್ದೇವೆ. ಅದನ್ನು ಬಳಸಿ ಇರುವ ವ್ಯವಸ್ಥೆಯಲ್ಲಿ ನ್ಯಾಯದಾನ ಮಾಡಬೇಕು.
ನಮ್ಮ ಸರ್ಕಾರ ಇದ್ದರೂ ಕೋರ್ಟ್ ಕಟ್ಟಡ ಮಾಡಲಾಗಲಿಲ್ಲ.
ನಮ್ಮ ವಕೀಲರು ಪಿಐಎಲ್ ಹಾಕಿ ಕೋರ್ಟ್ ಕಟ್ಟಿಸಿಕೊಳ್ಳುವಂತಾಗಿದ್ದು ದುರಂತ. ಆದರೂ ಈಗ ಆರಂಭವಾಗಿರುವುದು ಖುಷಿ ತಂದಿದೆ. ಜಿಲ್ಲಾ ಹೋರಾಟದಲ್ಲೂ ವಕೀಲರ ಪಾತ್ರ ದೊಡ್ಡದಿದೆ. ಸದ್ಯ ವಿಮಾನ ನಿಲ್ದಾಣ ಹೋರಾಟ ಆರಂಭವಾಗಿದೆ ನಿಮ್ಮೊಂದಿಗೆ ನಾನಿರುವೆ ಎಂದುಭರವಸೆ ನೀಡಿದರು.