WhatsApp Image 2024-04-13 at 6.40.07 PM

ರಾಮ ನವಮಿ ಪ್ರಯುಕ್ತ ಜೋಡಿ ರತೋತ್ಸವ ಶಾಂತಿ ಸಭೆ : ಸ್ಟಾರ್ ಫೋಟೋಗಳ ಪ್ರದರ್ಶನ ನಿಷೇದ

ಕರುನಾಡ ಬೆಳಗು ಸುದ್ದಿ

ಮರಿಯಮ್ಮನಹಳ್ಳಿ, 13- ಪಟ್ಟಣದಲ್ಲಿ ಪ್ರತಿ ವರ್ಷದಂತೆ ರಾಮನವಮಿ ಅಂಗವಾಗಿ ಈ ವರ್ಷ ಏಪ್ರಿಲ್ 17ನೇ ತಾರೀಕಿನಂದು ಜರುಗಲಿರುವ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ಮತ್ತು ಶ್ರೀ ಆಂಜನೇಯ ಸ್ವಾಮಿ ಜೋಡಿ ರಥೋತ್ಸವದ ನಿಮಿತ್ತ ಮರಿಯಮ್ಮನಹಳ್ಳಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಕೂಡ್ಲಿಗಿ ಡಿ.ವೈ.ಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ಇವರ ಅಧ್ಯಕ್ಷತೆಯಲ್ಲಿ ಶನಿವಾರ ಶಾಂತಿ ಸಭೆ ನಡೆಸಲಾಯಿತು.

ಸಭೆಯಲ್ಲಿಮಾತನಾಡಿದ ಅವರು ಜಾತ್ರೆಯಲ್ಲಿ ಯಾರ ಫೋಟೋಗಳನ್ನು ಪ್ರದರ್ಶಿಸುವಂತಿಲ್ಲ, ಫೋಟೋ, ಪೀಪಿ ನಿಷೇದಿಸಲಾಗಿದೆ. ಮುಂಜಾಗೃತ ಕ್ರಮವಾಗಿ ಭದ್ರತೆ ಒದಗಿಸಲು ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು.

ವಾಹನ ಸಂಚಾರ ಸುಗಮಕ್ಕೆ ಕ್ರಮ ಕೈಗೊಳ್ಳಲಾಗುವುದು. ಇತರೆ ಅಪರಾಧ ಕೃತ್ಯಗಳು ಜರುಗದಂತೆ ನಿಗಾವಹಿಸಲಾಗುವುದು.

ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುವಂತೆ, ಅಸಭ್ಯ ವರ್ತನೆ, ಮಹಿಳೆಯರಿಗೆ ಕಿರಿಕಿರಿ ಮಾಡುವುದು, ಯಾವುದೇ ರೀತಿಯ ಗಲಾಟೆಗಳು, ಸಮಾಜದಲ್ಲಿ ಅಶಾಂತಿ ಉಂಟುಮಾಡುವಂತಹ ಕೃತ್ಯಗಳು ಕಂಡು ಬಂದಲ್ಲಿ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು.

ಜಾತ್ರಾ ಮಹೋತ್ಸವವು ಸುಸೂತ್ರವಾಗಿ ಜರುಗಲು ಸಾರ್ವಜನಿಕರು ಸಹಕರಿಸಬೇಕೆಂದು ನೆರೆದವರಲ್ಲಿ ಮನವಿ ಮಾಡಿದರು.

ಹಗರಿ ಬೊಮ್ಮನಹಳ್ಳಿ ವೃತ್ತ ಸಿಪಿಐ ವಿಕಾಸ್ ಲಮಾಣಿ ಮಾತನಾಡಿ ತೇರು ಎಳೆಯುವ ಸಂದರ್ಭದಲ್ಲಿ ಸೊನ್ನೆ ಹಾಕುವವರು ಅರೆಬರೆ ಬಟ್ಟೆಗಳನ್ನು ತೊಟ್ಟು ಮೇಲಕ್ಕೆತ್ತಿ ಸೆಡ್ಡು ಹೊಡೆಯುವುದು ಸೀಟಿ ಹೊಡೆಯುವುದಾಗಲಿ,ಸಾರ್ವಜನಿಕರಿಗೆ ಮುಜುಗರ ತರುವಂತ ಕೆಲಸ ಮಾಡಬಾರದು, ಅನೈತಿಕ ಘಟನೆಗಳಿಗೆ ಕಾರಣರಾದವರ ಮೇಲೆ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಶಾಂತಿ ಸುವ್ಯವಸ್ಥೆಗಾಗಿ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು .

ಈ ಸಂದರ್ಭದಲ್ಲಿ ಪಟ್ಟಣದ ಪೊಲೀಸ್ ಠಾಣೆಯ ಪಿ ಎಸ್. ಐ. ಮೌನೇಶ್ ರಾಥೋಡ್ , ಉಪತಹಶಿಲ್ದಾರ್ ನಾಗರಾಜ್ ನಾಯಕ್ , ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಖಾಜಾ ಸಾಬ್ , ಜೆಸ್ಕಾಂ ಸಿಬ್ಬಂದಿ ವಿಜಯ್ ಕುಮಾರ್ , ಮುಖಂಡರಾದ ಎಲ್. ಪರಮೇಶ್ವರ್, ಸತ್ಯನಾರಾಯಣ, ಚಿದ್ರಿ ಸತೀಶ್, ಬುಡೆನ್ ಸಾಬ್, ಎಲ್.ನಾಗರಾಜ್ , ಗೋವಿಂದ ಪರಶುರಾಮ್, ಉದ್ದೇಕಲ್ ವೆಂಕಟೇಶ್, ದೊಡ್ಡರಾಮಣ್ಣ, ಬಂಗಾರಿ ಮಂಜುನಾಥ, ಮರಡಿ ಹನುಮಂತ, ಗರಗ ಪ್ರಕಾಶ್,ಏಕಾಂಬರೀಶ್ ನಾಯ್ಕ್, ನವೀನ್ ಶೆರಗಾರ, ಪೈಲ್ವಾನ್ ವೆಂಕಟೇಶ್, ಎಲ್. ಸುರೇಶ, ತಿಮ್ಮರಾಜು, ಬಿಸರಳ್ಳಿ ಹುಲುಗಪ್ಪ, ದೂಪದಳ್ಳಿ ನಾಗಪ್ಪ, ಮತ್ತು ಪಟ್ಟಣ ಪಂಚಾಯಿತಿ ಸದಸ್ಯರಾದ ರುದ್ರನಾಯ್ಕ್, ಮಂಜುನಾಥ, ಸುರೇಶ, ವಸಂತ ಹಾಗೂ ಊರಿನ ನಾಗರಿಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!