IMG-20240414-WA0175

ಶೋಷಿತ ಜನರಿಗೆ ಮುಕ್ತಿ ಕೊಡಿಸಿದ ಮಹಾನಾಯಕ ಡಾ. ಅಂಬೇಡ್ಕರ್

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 14- ತಾಲೂಕಿನ ಗಿಣಿಗೇರಾ ಗ್ರಾಮದಲ್ಲಿ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರ 133ನೇ ಜನ್ಮ ದಿನ ಅಂಗವಾಗಿ ಸಾಂಕೇತಿಕ ಕಾರ್ಯಕ್ರಮ ಮಾಡಲಾಯಿತು.

ಈ ಕಾರ್ಯಕ್ರಮದ ನೇತೃತ್ವ ವಹಿಸಿದ ಬಿಆರ್ ಅಂಬೇಡ್ಕರ್ ಸಂಘದ ಮಾಜಿ ಅಧ್ಯಕ್ಷರು ಆನಂದ ಮೂರುಮನಿ ಮಾತನಾಡಿ
ಪ್ರತಿ ವರ್ಷ ಕೂಡ ಅಂಬೇಡ್ಕರ್ ಅವರ ಹೆಸರಲ್ಲಿ ವಿವಿಧ ಕಾರ್ಯಕ್ರಮಗಳ ಜೊತೆ ಬಡವರು ಅಸಹಾಯಕ ಜನರಿಗೆ, ಅಂಗವಿಕಲರಿಗೆ, ಆಹಾರವಿಲ್ಲದೆ ರೈಲ್ವೆ ಸ್ಟೇಷನ್ ನಲ್ಲಿ ವೃದ್ಧರಿಗೆ ಊಟ ಮತ್ತು ವಿವಿಧ ಸ್ಥಳದಲ್ಲಿ ವಾಸಿಸುತ್ತಿರುವಂತ ಜನಗಳಿಗೆ ಅನ್ನದಾನವನ್ನು ಮಾಡಲಾಗುತ್ತಿದೆ.

ಅಂಬೇಡ್ಕರ್ ಬದುಕಿನ ಆದರ್ಶ ವಿಚಾರಗಳು ನಮ್ಮೆಲ್ಲರನ್ನು ಬಡಿದೆಬ್ಬಿಸಿದೆ. ಎಲ್ಲಾ ರೀತಿಯ ಶೋಷಣೆಗೆ ಒಳಗಾದ ಜನರನ್ನು ಮೇಲೆ ತರುವಂತ ಅವರ ಆಸೆಗಳು ಈಡೇರಿಲ್ಲ. ಅವರ ಆಶಯಗಳನ್ನು ಈಡೇರಿಸುವಂತಹ ನಮ್ಮಂತ ಯುವ ಜನಾಂಗದ ಮೇಲಿರುವ ಜಾತ್ರೆಯಾಗಿದೆ ಜವಾಬ್ದಾರಿಯಾಗಿದೆ ಎಂದು ಅಂಬೇಡ್ಕರ್ ಕುರಿತು ನೆನೆದರು.

ಈ ಸಂದರ್ಭದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಂಘದ ಉಪಾಧ್ಯಕ್ಷರ ರಾಘು ಹಿರೇಮನಿ, ಸತೀಶ್ ಹಲಗೇರಿ, ಕೃಷ್ಣಮೂರ್ತಿ ಹಲಗೇರಿ, ಸಂತೋಷ್ ಮ್ಯಾಗಳಮನಿ, ಧ್ವನಿಯಪ್ಪ ಹೊಸಳ್ಳಿ, ಹನುಮಂತ್ ಹಿರೇಮನಿ, ಮೌನೇಶ್ ಹಲಗೇರಿ, ಗುಡದಪ್ಪ ಹಿರೇಮನಿ, ಗುಡದಪ್ಪ ಬೇವಿನಹಳ್ಳಿ, ಗಣೇಶ್ ಚಿಲವಾಡಗಿ, ನಿಂಗಪ್ಪ ಶಿಡ್ಲಪ್ಪನವರ್, ನೀಲಪ್ಪ ಶಿಡ್ಲಪ್ಪನವರ್, ಮೈಲಾರಿ ಶಿಡ್ಲಪ್ಪ ನವರ್, ದುರ್ಗಪ್ಪ ಮೇಸ್ತ್ರಿ ಹಾಗೂ ಇನ್ನಿತರರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!