ಡಾ.ಅಂಬೇಡ್ಕರ್ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ : ಅಶೋಕ ಶಿಗ್ಗಾಂವಿ
ಕರುನಾಡ ಬೆಳಗು ಸುದ್ದಿ
ಕುಕನೂರ, 14- ಡಾ. ಬಿ.ಆರ್ ಅಂಬೇಡ್ಕರ್ ಶಿಕ್ಷಣ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವರು ನೀಡಿದ ಕೊಡುಗೆ ಅಪಾರ ಎಂದು ತಹಸಿಲ್ದಾರ್ ಅಶೋಕ ಶಿಗ್ಗಾಂವಿ ಹೇಳಿದರು.
ಪಟ್ಟಣದ ತಹಸಿಲ್ದಾರ್ ಕಚೇರಿಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ 133 ನೇ ಜಯಂತಿಯನ್ನು ಆಚರಣೆ ಮಾಡಲಾಯಿತು.
ತಹಸಿಲ್ದಾರ್ ಅಶೋಕ್ ಶಿಗ್ಗಾ0ವಿ ಮಾತನಾಡಿ, ಸಂವಿಧಾನ ಶಿಲ್ಪಿ ಸಮಾನತೆಯ ಹರಿಕಾರ ದೇಶದ ಮೊದಲ ಕಾನೂನು ಸಚಿವರು ದೇಶ ಕಂಡ ಮಹಾನ್ ವ್ಯಕ್ತಿ ಡಾ. ಬಿ. ಆರ್. ಅಂಬೇಡ್ಕರ್ ಪ್ರತಿ ವರ್ಷ ಏಪ್ರಿಲ್ 14ರಂದು ಡಾ. ಬಿ. ಆರ್ ಅಂಬೇಡ್ಕರ ಜಯಂತಿಯನ್ನು ಆಚರಣೆ ಮಾಡಲಾಗುತ್ತದೆ.
ಭಾರತದ ಕಾನೂನು, ಸುವ್ಯವಸ್ಥೆ ಅಸ್ಪೃಶ್ಯತೆ , ನಿವಾರಣೆ ಪ್ರಜೆಗಳ ಮೂಲಭೂತ ಕರ್ತವ್ಯ ಸಮಾನತೆ ಶಿಕ್ಷಣ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಲು ಪ್ರತಿ ವರ್ಷವೂ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿಯನ್ನು ಶಾಲಾ, ಕಾಲೇಜುಗಳು, ಸರ್ಕಾರಿ, ಖಾಸಗಿ, ಕಚೇರಿಗಳಲ್ಲಿಯೂ ಆಚರಣೆ ಮಾಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರೇಡ್-2 ತಹಸಿಲ್ದಾರ್ ಮುರಳಿಧರ್ ರಾವ್ ಕುಲಕರ್ಣಿ, ರಾಮಚಂದ್ರ ಹಣಗಿ, ಮಾರುತಿ, ಗಿರೀಶ್, ತಹಶೀಲ್ದಾರ್ ಕಚೇರಿಯ ಸಿಬ್ಬಂದಿಗಳು ಇದ್ದರು.
