WhatsApp Image 2024-04-15 at 5.26.31 PM

ಅಕ್ಕಿಪಿಕ್ಕಿ ಸಮುದಾಯ ಜನಾಂಗದವರಿಗೆ ಮತದಾನ ಜಾಗೃತಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 15-  ಮೇ-7ರಂದು ಜರುಗುವ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತ ಚಲಾಯಿಸಬೇಕೆಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಕರೆ ನೀಡಿದರು.

ಕೊಪ್ಪಳ 12ನೇ ವಾರ್ಡ್ ಕೊಟಗಾರ ಕಾಲೋನಿ ಅಕ್ಕಿ-ಪಿಕ್ಕಿ ಸಮುದಾಯ ಜನಾಂಗದವರಿಗೆ ಮತದಾನ ಜಾಗೃತಿಯ ಸ್ವೀಪ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರತಿ ಮತ ದೇಶಕ್ಕೆ ಹಿತ ಎನ್ನುವಂತೆ ಮತದಾನದಿಂದ ದೂರ ಉಳಿಯಬಾರದು. ಪ್ರತಿ ಮತವು ನಿರ್ಣಾಯಕವಾಗಿದೆ ಎಂದರು. ಯಾವುದೇ ರೀತಿಯ ಆಸೆ, ಅಮೀಷಗಳಿಗೆ ಒಳಗಾಗದೇ ನಿರ್ಭಯವಾಗಿ ಮತ ಚಲಾಯಿಸಿರೆಂದು ಕರೆ ನೀಡಿದರು.

ಸದರಿ ಸ್ವೀಪ್‌ ಕಾರ್ಯಕ್ರಮದಲ್ಲಿ ತಾಲೂಕ್ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ಕಳಕಾಪುರ ಹಾಗು ಆರೋಗ್ಯ ಇಲಾಖೆಯ ಇತರೇ ಸಿಬ್ಬಂದಿಗಳು,ಅಕ್ಕಿಪಿಕ್ಕಿ ಸಮುದಾಯ 70 ಕ್ಕೂ ಹೆಚ್ಚು ಮತದಾರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!