WhatsApp Image 2024-04-16 at 4.56.40 PM

ಕುಡುತಿನಿ ರೈತರ ಹೋರಾಟ 478 ದಿನಗಳ ಕಳೆದರೂ, ನ್ಯಾಯ ಸಿಕ್ಕಿಲ್ಲ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 16- ಕುಡುತಿನಿ ಭೂ ಸಂತ್ರಸ್ತರ ಹೋರಾಟ ಸಮಿತಿ ನೇತೃತ್ವದಲ್ಲಿ 478 ದಿನಗಳಿಂದ ಈ ಪ್ರಾಂತ್ಯದ ರೈತರಿಗೆ ಆದ ಅನ್ಯಾಯವನ್ನು ಸರಿಪಡಿಸಲು ನಡೆಸುತ್ತಿರುವ ಹೋರಾಟಕ್ಕೆ ಇದುವರೆಗೂ ಏನೂ ಪಲಿತ ಸಿಕ್ಕಿಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಯು ಬಸವರಾಜ್ ಬೇಸರ ವ್ಯಕ್ತ ಮಾಡಿದರು.

ಮರ್ಚೆಟ್ ಹೋಟೆಲ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸುಮಾರು 500 ದಿನಗಳಿಂದ 2010ರಲ್ಲಿ ಕುಡುತಿನಿ ಸುತ್ತಮುತ್ತಲ ಗ್ರಾಮಗಳ ರೈತರ ಸಾಗುವಳಿ ಭೂಮಿಯನ್ನು ಮೋಸದ ಬೆಲೆ ನಿಗದಿ ಮಾಡಿ ಖರೀದಿ ಮಾಡಿರುವುದನ್ನು ಜಿಲ್ಲಾಡಳಿತ ಮತ್ತು ಜಿಲ್ಲಾ ನ್ಯಾಯಾಲಯ ಹಾಗೂ ಸುಪ್ರೀಂಕೋರ್ಟ್ ಗಳು ಒಪ್ಪಿಕೊಂಡಿದ್ದರು ಅನ್ಯಾಯವನ್ನು ಸರಿಪಡಿಸಿ ಪರಿಹಾರ ನೀಡಲು ಸಾಧ್ಯವಾಗಿಲ್ಲ ಎಂದರು.

ಸುಮಾರು 13 ಸಾವಿರಕ್ಕೂ ಹೆಚ್ಚಿನ ರೈತ ಕುಟುಂಬಗಳು ಅದರಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ದೇವದಾಸಿ ಮಹಿಳೆಯರು ಸೇರಿದಂತೆ ಶೇಕಡ 25 ರಷ್ಟು ಬಡ ರೈತ ಕುಟುಂಬಗಳಿಗೆ ಅನ್ಯಾಯದ ಬಹುಬಲೆಯಿಂದ ಸಂತ್ರಸ್ತರಾಗಿದ್ದಾರೆ ಎಂದರು. ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷ ಹತ್ತರವ ಬಂದಿದ್ದರು ರೈತರಿಗೆ ಆಶಾದಾಯಕ ತೀರ್ಮಾನಗಳು ತೆಗೆದುಕೊಳ್ಳಲು ವಿಳಂಬ ಮಾಡುತ್ತಿರುವುದು ಈಗಾಗಲೇ ಎರಡು ಸುತ್ತಿನ ಮಾತುಕತೆ ನಡೆದರೂ ಪರಿಹಾರ ಸಿಕ್ಕಿರುವುದಿಲ್ಲ ಎಂದರು.

ಈ ರೀತಿಯಾದ ಅನ್ಯಗಳು ಕೇವಲ ಪ್ರಾಂತಕ್ಕೆ ಮಾತ್ರ ಸೀಮಿತವಲ್ಲ ಎಂದು ರಾಜ್ಯದ್ಯಂತ ಭೂಕಬಳಿಕೆ ನಡೆಯುತ್ತಲೇ ಇದೆ ಎಂದರು.

ಅನಾಥರ ಸಿಐಟಿಯು ರಾಜ್ಯ ಉಪಾಧ್ಯಕ್ಷರಾದ ಜೆ ಸತ್ಯ ಬಾಬು ನವರು ಮಾತನಾಡುತ್ತಾ 2023 ನವೆಂಬರ್ 14ರಂದು ಮುಖ್ಯಮಂತ್ರಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆಯನ್ನು ನಡೆಸಲಾಯಿತು ಹಾಗೂ ಕಳೆದ ತಿಂಗಳು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಸಮ್ಮುಖದಲ್ಲಿ ಸಭೆಯನ್ನು ನಡೆಸಲಾಗಿದೆ. ರೈತರಿಗೆ ನೀಡಿದ ಅನ್ಯಾಯದ ಭೂಬಲೆಯ ಸರಿಪಡಿಸುವ ಕುರಿತು ಸುಪ್ರೀಂಕೋರ್ಟಿನ ಆದೇಶ ಅನುಸಾರ ಪರಿಹಾರ ನೀಡಲು ರೈತರು ಪರ ಸರ್ಕಾರ ಮಧ್ಯಪ್ರವೇಶ ಮಾಡಲಾಗುವುದು ಎಂದು ಹೇಳಿದ್ದರು. ಆದರೆ ಇನ್ನೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷರು ವಿ ಎಸ್ ಶಿವಶಂಕರ್, ಪ್ರಧಾನ ಕಾರ್ಯದರ್ಶಿ ಜೆಎಂ ಚೆನ್ನಬಸಯ್ಯ, ಜಂಟಿ ಕಾರ್ಯದರ್ಶಿ ಎಮ್ ತಿಪ್ಪೇಸ್ವಾಮಿ, ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರಾದ ಜಂಗ್ಲಿ ಸಾಬ್, ರೈತ ಮುಖಂಡರು ಬಿಳಿ ಬಾಯಪ್ಪ ಸಿದ್ದಮ್ಮನಹಳ್ಳಿ ಅಂಜನಪ್ಪ ವೆಂಕಟೇಶ್ ಕುಡುತಿನಿ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾ ಕಾರ್ಯದರ್ಶಿ ಎ ಸ್ವಾಮಿ ಜನವಾದಿ ಮಹಿಳಾ ಸಂಘಟನೆಯ ಜೈ ಚಂದ್ರಕುಮಾರಿ ಮತ್ತು ಕುಡುತಿನಿ ಸುತ್ತಮುತ್ತಲಿನ ಗ್ರಾಮಗಳ ಭೂಸಂತ್ರಸ್ಥರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!