WhatsApp Image 2024-04-17 at 5.37.27 PM

ಶ್ರೀರಾಮುಲು ಗೆಲುವಿಗಾಗಿ ಬಿಜೆಪಿ ಕಾರ್ಯಕರ್ತರಿಂದ ವಿಶೇಷ ಪೂಜೆ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 17- ಲೋಕಸಭಾ ಬಿಜೆಪಿ ಅಭ್ಯರ್ಥಿ, ಬಿ ಶ್ರೀರಾಮುಲು ಗೆಲುವಿಗಾಗಿ ಇಂದು ಕೌಲ್ ಬಜಾರ್ ವಿಭಾಗದ ಬಿಜೆಪಿ ನಾಯಕರು ಕಾರ್ಯಕರ್ತರಿಂದ ಬಂಡಿಹಟ್ಟಿ, ರಾಮಾಂಜನೇಯನಗರ್ ಪ್ರಾಂತಗಳಲ್ಲಿರುವ ಶ್ರೀರಾಮ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ಮಾಡಲಾಯಿತು.

ಕೌಲ್ ಬಜಾರ್ ವಿಭಾಗದ ಬಿಜೆಪಿ ಮಂಡಲ ಅಧ್ಯಕ್ಷ, ನಾಗರಾಜ್ ರೆಡ್ಡಿ ನೇತೃತ್ವದಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಅನಂತರ ಪ್ರಚಾರದಲ್ಲಿ ಬಿಜೆಪಿ ಮುಖಂಡ ನಾಗರಾಜ್ ರೆಡ್ಡಿ ಮಾತನಾಡುತ್ತಾ, ಇಂದು ಹಿಂದುಗಳ ಪವಿತ್ರವಾದ ಶ್ರೀರಾಮ ನವಮಿಯಂದು, ವಿಶೇಷ ಪೂಜೆ ಮಾಡಲಾಯಿತು, ಹಾಗೆ ನಮ್ಮ ನಾಯಕ ಲೋಕಸಭಾ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆಯಲ್ಲಿದ್ದ ಬಿ ಶ್ರೀರಾಮುಲು ಗೆಲುವಿಗಾಗಿ ಶ್ರೀರಾಮ ದೇವರು ಆಶೀರ್ವದಿಸಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಇತರ ಮುಖಂಡರು ಶ್ಯಾಮಸುಂದರ್, ಗೋವಿಂದರಾಜುಲು, ವೆಂಕಟೇಶ್ ಗಳ ಜತೆಗೆ ಹಲವಾರು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!