18 TVR 01

ತಾವರಗೇರಾ : ಸಂಭ್ರಮದ ಶ್ರೀರಾಮನವಮಿ ಆಚರಣೆ

ಕರುನಾಡ ಬೆಳಗು ಸುದ್ದಿ

ತಾವರಗೇರಾ, 18- ಪಟ್ಟಣದ ವಿವಿಧ ಮಂದಿರಗಳಲ್ಲಿ ಬುಧುವಾರ ಶ್ರೀರಾಮ ನವಮಿಯನ್ನು ಆಚರಿಸಲಾಯಿತು. ಪಟ್ಟಣದ ರಾಮಮಂದಿರದಲ್ಲಿ ರಜಪೂತ ಸಮಾಜದಿಂದ ರಾಮನವಮಿ ಪ್ರಯುಕ್ತ ಶ್ರೀ ರಾಮ ಸೇವಾ ಟ್ರಸ್ಟ ಸಮೀತಿ ವತಿಯಿಂದ ಶ್ರೀರಾಮನ ಭಾವಚಿತ್ರ ಮೆರವಣಿಗೆ ನಡೆಯಿತು.

ಶ್ರೀರಾಮ ಮಂದಿರದಲ್ಲಿ ಬೆಳಿಗ್ಗೆ ಅಭೀಷೇಕ, ಪೂಜೆ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರೀರಾಮನ ಭಾವಚಿತ್ರ ಮತ್ತು ಗೋಪುರ ಕಳಸದ ಮೆರವಣಿಗೆ ನಡೆಯಿತು.

ತದನಂತರ ಗೋಪುರಕ್ಕೆ ಕಳಸಾರೋಹಣ, 20 ಉಪನಯನ ಕಾರ್ಯಕ್ರಮಗಳು ಜರುಗಿದವು, ಈ ಸಂದರ್ಬದಲ್ಲಿ ಸಮಾಜದ ಪ್ರಮುಖ ಮುಖಂಡರಾದ ಲಕ್ಷ್ಮಣಸಿಂಗ ಹೊಸಮನಿ, ಲಕ್ಷö್ಮಣಸಿಂಗ ವಗರನಾಳ, ಹನುಮಾನಸಿಂಗ, ಭೀಮಸಿಂಗ ವೆಂಕಟಸಿಂಗ, ದಶರತಸಿಂಗ, ಶ್ರೀನಿವಾಸ ಸಿಂಗ, ದೇವಸಿಂಗ ರಾಮಸಿಂಗ, ನಾರಾಯಣಸಿಂಗ್, ಗಂಗಾರಾಮಸಿಂಗ, ಹನುಮಾನಸಿಂಗ ಹಾಗು ರಾಣಾಪ್ರತಾಪ ಯುವಕ ಸಂಘದ ಸರ್ವ ಪದಾದಿಕಾರಿಗಳು ಪಾಲ್ಗೋಂಡಿದ್ದರು.

ಪಾಂಡುರಂಗ ಮಂದಿರದಲ್ಲಿ ಶ್ರೀರಾಮನವಮಿ ಆಚರಣೆ-ಶ್ರೀರಾಮನವಮಿ ಪ್ರಯುಕ್ತ ಶರೀಪಾಂಡುರಂಗ ದೇವಸ್ಥನದಲ್ಲಿ 4 ದಿವಸ ಅಂದರೆ ಏ15 ರಿಂದ 18ರವರೆಗೆ 5ಕ್ಕೆ ಪೋತಿ ಸ್ಥಾಪನೆ, ಸಂಜೆ 5ರಿಂದ 6 ರವರೆಗೆ ನಾಮಜಪ, 6ರಿಂದ 7 ರವರೆಗೆ ಹರಿಪದ, 7ರಿಂದ 9ರವರೆಗೆ ಕಿರ್ತನೆ ಈಎಲ್ಲಕಾರ್ಯಕ್ರಮಗಳಲ್ಲ ಊರಿನ ಸಂತರು ಹಾಗು ಬೇರೆ ಉರುಗಳಿಂದ ಭಕ್ತರು ತಾಳ, ಮೃದಂಗದಿಂದ ಆಗಮಿಸಿ ತನು, ಮನ, ಧನದಿಂದ ಸೇವೆ ಸಲ್ಲಿಸಿ ಶ್ರೀಹರಿ ಕೃಪಾರ್ಶಿರ್ವಾದ ಪಡೆದರು.

ಲಕ್ಷ್ಮೀವೆಂಕಟೇಶ್ವರ ದೇವಸ್ಥನದಲ್ಲಿ ಶ್ರೀರಾಮನವಮಿ ಆಚರಣೆ-ಮಂದಿರದಲ್ಲಿ ಗೊಂದಳು ಹಾಗು ದೇವಾಂಗ ಸಮಾಜದ ಭಕ್ತರು ಶ್ರೀರಾಮನವಮಿಯನ್ನು ಆಚರಿಸಿದರು. ಶ್ರೀರಾಮ ದೇವರಿಗೆ ಹಾಗು ವೆಂಕಟರಮಣನಿಗೆ ವಿಶೇಷ ಪೂಜೆ ಸಲ್ಲಿಸುವದರ ಮೂಲಕ ಆಚರಿಸಿದರು.

Leave a Reply

Your email address will not be published. Required fields are marked *

error: Content is protected !!