ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ರೈತರ ಸಾಲ ಮನ್ನಾ : ಶಾಸಕ ಬಿ.ಎಂ.ನಾಗರಾಜ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 19- ತಾಲೂಕು ತಾಳೂರು ಗ್ರಾಮದಲ್ಲಿ ಲೋಕಸಭಾ ಚುನಾವಣಾ ಕೊಪ್ಪಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಅವರ ಪರವಾಗಿ ಬಿರುಸಿನ ಪ್ರಚಾರ ನಡೆಸಿದ ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರು ಮಾತನಾಡಿದರು.
ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ರೈತರ ಸಾಲ ಮನ್ನಾ ಮಹಿಳೆಯರಿಗೆ ಒಂದು ವರ್ಷಕ್ಕೆ ಒಂದು ಲಕ್ಷ 24 ಸಾವಿರ ರೂ ಕರ್ನಾಟಕ ದಂತೆಯೇ ರಾಷ್ಟ್ರಮಟ್ಟದಲ್ಲಿ 25 ಗ್ಯಾರಂಟಿ ಜಾರಿ ಗೊಳಿಸಲು ಮಲ್ಲಿಕಾರ್ಜುನ ಖರ್ಗೆ ಯವರ ಕಾಂಗ್ರೆಸ್ ರಾಹುಲ್ ಗಾಂಧಿಯವರ ಕೈ ಬಲಪಡಿಸಿ ಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ಶಾಸಕ ಬಿ ಎಂ ನಾಗರಾಜ ಅವರು ಮತದಾರರಲ್ಲಿ ಮತ ಯಾಚಿಸುತ್ತ ಮಾತನಾಡುತ್ತಿದ್ದರು.
ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಸಿರುಗುಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕರಿಬಸಪ್ಪ, ತೆಕ್ಕಲಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರುದ್ರ ಗೌಡ, ತಾಳೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ದಿದಿಗಿ ದುರ್ಗಮ್ಮ ಗಾದಿಲಿಂಗಪ್ಪ, ಉಪಾಧ್ಯಕ್ಷರು, ಎಲ್ಲಾ ಸದಸ್ಯರು, ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ, ಬಾಲಪ್ಪ ಕರ್ಣಂ, ಬಸವರಾಜ ಗೌಡ ಜಮೀನ್ದಾರ್, ಸೈಯದ್ ಮೋಹಿದ್ದೀನ್ ಖಾದ್ರಿ, ಗೊರವರ ಶ್ರೀನಿವಾಸ, ಮರಿ ರಾಜ್ ಗೌಡ, ಸಿರುಗುಪ್ಪ ನಗರ ಸಭೆ ಸದಸ್ಯರಾದ ಆರ್ ನಾಗರಾಜ, ಹೆಚ್ ಗಣೇಶ್, ನಗರಸಭೆ ಮಾಜಿ ಸದಸ್ಯ ಬಿ ಅಬ್ಜಲ್ ಹುಸೇನ್, ತಾಳೂರು ಗ್ರಾಮದ ಮುಖಂಡರು ಪುರುಷೋತ್ತಮರೆಡ್ಡಿ, ದೇವರೆಡ್ಡಿ, ಮಲ್ಲ ರೆಡ್ಡಿ, ಕೆ ನಾಗಪ್ಪ, ಶೇಷಗಿರಿ ಪಕೀರಪ್ಪ, ಕೆ ರಾಮಾಂಜನೇಯ, ಕೆ ಮಲ್ಲಿಕಾರ್ಜುನ, ಡಿ ಮಾರೆಪ್ಪ, ಗ್ರಾಮದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡು ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಅವರ ಕಾಂಗ್ರೆಸ್ಸಿಗೆ ಮತ ಯಾಚಿಸಿ ಮನೆ ಮನೆ ತೆರಳಿ ಪ್ರಚಾರ ಕೈಗೊಂಡರು.
