WhatsApp Image 2024-04-19 at 6.28.34 PM

ಮರಿಯಮ್ಮನಹಳ್ಳಿ ಪಟ್ಟಣದ ಶಾಲಾ ಆವರಣ ಅಕ್ಷರಶಃ ಕುಡುಕರ ತಾಣ

ಕರುನಾಡ ಬೆಳಗು ಸುದ್ದಿ

ಮರಿಯಮ್ಮನಹಳ್ಳಿ, 19- ಪಟ್ಟಣದ ಹೃದಯ ಭಾಗದಲ್ಲಿ ಬರುವ ಹೈಸ್ಕೂಲ್ ಆವರಣದಲ್ಲಿ ಹೈಸ್ಕೂಲ್ ಸೇರಿದಂತೆ, ಶ್ರೀ ಗಣೇಶ್ ಮಲ್ ಸರಕಾರಿ ಬಾಲಕಿಯರ ಶಾಲೆ, ಮಾದರಿ ಸರಕಾರಿ ಶಾಲೆ, ಸರಕಾರಿ ಉರ್ದು ಶಾಲೆ ಹಾಗೂ ಅಂಗನವಾಡಿ ಶಾಲೆಗಳನ್ನು ಒಳಗೊಂಡಿದ್ದು, ನಿತ್ಯ ಸಾವಿರಾರು ಮಕ್ಕಳ ವಿದ್ಯಾರ್ಜನೆಯ ಕೇಂದ್ರವಾಗಿದೆ.

ಬಾರ್  ಆದ ಆವರಣ : ಶಾಲೆಗಳು ಊರಿನ ದೇವಸ್ಥಾನ ಅವುಗಳನ್ನು ಸ್ವಚ್ಛವಾಗಿ ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ.

ಹಗಲು ಹೊತ್ತು ಶಾಲೆ ರಾತ್ರಿ ಹೊತ್ತು ಬಾರ್ ಆಗಿ ಪರಿವರ್ತನೆಯಾಗುತ್ತಿದೆ. ಎಲ್ಲೆಂದರಲ್ಲಿ ಮದ್ಯದ ಖಾಲಿ ಬಾಟಲ್ ಗಳು ಬಿಸಾಡಲಾಗಿದೆ.  ಕುಡಿದ ಅಮಲಿನಲ್ಲಿ ಶಾಲಾ ಕಟ್ಟೆಗಳ ಮೇಲೆ ಗುಟಕಾ ಅಗೆದು ಉಗುಳುತಿದ್ದು, ಅಸಹ್ಯ ಹುಟ್ಟಿಸುವಂತಿದೆ.

ಪೊಲೀಸರ ನಿರ್ಲಕ್ಷ : ಮದ್ಯದ ಬಾಟಲಿಗಳನ್ನು ಸ್ವಚ್ಚಗೊಳಿಸುವುದು ಮಕ್ಕಳಿಗೆ ಮತ್ತು ಬಿಸಿಯೂಟದ ಸಿಬ್ಬಂದಿಗೆ ಮೊದಲಿನ ಕಾಯಕವಾಗಿದೆ. ಹೊಡೆದು ಹಾಕಿದ ಮದ್ಯದ ಬಾಟಲಿಗಳು ಓಡಾಡುವರ ಖಾಲಿಗೆ ಗಾಯ ಮಾಡುತ್ತಿವೆ. ಇಷ್ಟೆಲ್ಲಾ ಘಟನೆಗಳು ದಿನಂಪ್ರತಿ ನಡೆಯುತ್ತಿದ್ದು, ಪೊಲೀಸ್ ಇಲಾಖೆಗೆ ಸೇರಿದಂತೆ ಪ್ರತಿಯೊಬ್ಬರಿಗೂ ಗೊತ್ತಿರುವ ವಿಚಾರವಾಗಿದೆ.

ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳ ಬೇಕಾದ ಪಟ್ಟಣ ಪೊಲೀಸರು ಮೂಕ ಪ್ರೇಕ್ಷಕರಾಗಿರುವುದು ಸಾರ್ವಜನಿಕರಿಗೆ, ಶಾಲಾ ಶಿಕ್ಷಕರು ಮತ್ತು ಮುದ್ದು ಮಕ್ಕಳ ನೋವಿಗೆ ಕಾರಣವಾಗಿದೆ. ಆರಕ್ಷಕರು ಇನ್ನಾದರೂ ಅಕ್ಷರ ದೇವಾಲಯ ಮತ್ತು ಅಕ್ಷರ ಕಲಿವ ಎಳೆ ಹೃದಯಗಳಿಗೆ ಸ್ಪಂದಿಸುವರೊ ಕಾದು ನೋಡ ಬೇಕು.

“ಪ್ರತಿದಿನ ಸಾರ್ವಜನಿಕರು ಇದೇ ಮೈದಾನದಲ್ಲಿ ವಾಯುವಿಹಾರ ಮಾಡುತ್ತಾರೆ ಮತ್ತು ಮಕ್ಕಳು ಆಟ ಆಡಲು ಬರುತ್ತಾರೆ ಕುಡುಕರು ಮದ್ಯಪಾನ ಮಾಡಿ ಬಾಟೇಲ್ ಹೋಡೆದು ಬಿಸಾಡುವುದರಿಂದ ಕಾಲಿಗೆ ಚುಚ್ಚಿ ಗಾಯ ವಾಗುತ್ತದೆ. ಸಂಭಂದಪಟ್ಟ ಅಧಿಕಾರಿಗಳು ಇಲ್ಲಿ ಮದ್ಯಪಾನ ವ್ಯಸನಿಗಳ ಹಾವಳಿ ತಪ್ಪಿಸಬೇಕು.

– ಹೆಚ್. ನಾಗರಾಜ್

ಅಧ್ಯಕ್ಷರು ಸಮತಾ ಸೈನಿಕ ದಳ

Leave a Reply

Your email address will not be published. Required fields are marked *

error: Content is protected !!