ಸತ್ಯ ಅಹಿಂಸೆ ಶಾಂತಿಯ ಸಂದೇಶ ಸಾರಿದ ಭಗವಾನ್ : ರಾಘವೇಂದ್ರ ಸಿದ್ದಾರ್ಥ ಕಾರಂಜಿ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 21- ಭಾರತ ದೇಶದ ಬಿಹಾರ್ ಪ್ರಾಚೀನ ವೈಶಾಲಿ ಸಾಮ್ರಾಜ್ಯದಲ್ಲಿ ಮಹಾನ್ ಆಧ್ಯಾತ್ಮಿಕ ನಾಯಕ ಮತ್ತು ತತ್ವಜ್ಞಾನಿ ವರ್ಧಮಾನ ಎಂದು ಕರೆಯಲ್ಪಡುವ ಭಗವಾನ್ ಮಹಾವೀರ ಜೈನ ಧರ್ಮದ 24ನೇ ತೀರ್ಥಂಕ ರಾಗಿದ್ದರು ಮಹಾವೀರ ರಾಜ ಮನೆತನದಲ್ಲಿ ರಾಜ ಸಿದ್ದಾರ್ಥ ಮತ್ತು ರಾಣಿ ತ್ರಿಶಾಲ ಅವರ ಪುಣ್ಯ ಗರ್ಭದಲ್ಲಿ ಜನಿಸಿದ ಮಹಾತ್ಮರು ಎಂದು ತಾಲೂಕ ತಹಸಿಲ್ದಾರ್ ರವರ ಶಿರಸ್ತೆದಾರರು ರಾಘವೇಂದ್ರ ಸಿದ್ದಾರ್ಥ ಕಾರಂಜಿ ಅಭಿಪ್ರಾಯಪಟ್ಟರು.
ನಗರದ ಮಿನಿ ವಿಧಾನಸೌಧ ತಾಲೂಕ ಕಚೇರಿ ಸಭಾಂಗಣದಲ್ಲಿ ಸಹಾನುಭೂತಿ ಮತ್ತು ಅಹಿಂಸೆಯ ಸಂದೇಶವನ್ನು ಸಾರಿದ ಭಗವಾನ್ ಮಹಾವೀರರ ಜಯಂತಿ ಕಾರ್ಯಕ್ರಮದಲ್ಲಿ ಭಗವಾನ್ ಮಹಾವೀರ ಭಾವಚಿತ್ರಕ್ಕೆ ಮಾಲಾರ್ಪಣೆ ಪುಷ್ಪ ಅರ್ಪಿಸಿ ಗೌರವಿಸಿ ಸ್ಮರಿಸಿ ನಮನ ಸಲ್ಲಿಸಿ ಅವರು ಮಾತನಾಡಿ ಮಹಾವೀರ ಜೈನರು ಅತ್ಯಂತ ಉದಾತ ಆದರ್ಶ ವಾದಿಗಳು ಮತ್ತು ಪಾತ್ರವಂತರು ಅಹಿಂಸೆ ಸತ್ಯ ಶಾಂತಿಯ ಸಂದೇಶ ಸಾರಿದ ತ್ಯಾಗ ಆದರ್ಶ ಗುಣ ತತ್ವ ಸಿದ್ಧಾಂತ ಜೈನ್ ಧರ್ಮದ ಮೂಲ ಆಧಾರ ಗಳನ್ನು ಜೈನ್ ರು ಸಿದ್ದಾಂತ ಜೀವನದಲ್ಲಿ ಅಳವಡಿಸಿ ಪಾಲಿಸಬೇಕು ಸಮಾಜದಲ್ಲಿ ಶಾಂತಿ ಮತ್ತು ಪ್ರೀತಿ ಕರುಣೆ ಸುಧಾರಣೆಯ ಮಾರ್ಗ ತೋರಿಸಿದ ಎಲ್ಲರಿಗೂ ಶಾಂತಿ ಸಂದೇಶ ಭೋಧಿಸಿದ ಭಗವಾನ್ ಮಹಾವೀರ ಎಂದರು.
ಸಮಾಜ ಸುಧಾರಕ ಅಬ್ದುಲ್ ನಬಿ ತಾಲೂಕ ಕಚೇರಿಯ ಪ್ರಥಮ ದರ್ಜೆ ಸಹಾಯಕ ಎಸ್ ಎಂ ಮಹಾಂತೇಶ ಗ್ರಾಮ ಆಡಳಿತ ಅಧಿಕಾರಿ ಬಿ ಗುಡದೀಶ ಮತ್ತು ಸಿಬ್ಬಂದಿ ವರ್ಗದವರು ಇದ್ದರು.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿ ಇರುವುದರಿಂದ ಜಯಂತಿಯನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು.
