
ಇಟ್ಟಿಗೆಹಾಳ್ ಮದ್ಯ ಮಾರಾಟ ಮುಕ್ತ ಗ್ರಾಮವಾಗುವವರೆಗೆ ನಿರಂತರ ಹೋರಾಟ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 16- ತಾಲೂಕು ಇಟ್ಟಿಗೆಹಾಳ್ ಗ್ರಾಮವನ್ನು ಮದ್ಯ ಮಾರಾಟ ಮುಕ್ತ ಗ್ರಾಮವನ್ನಾಗಿ ಸರ್ಕಾರ ಅಧಿಕೃತವಾಗಿ ಗೆಜೆಟ್ ನೋಟಿಫಿಕೇಶನ್‌ನಲ್ಲಿ ಪ್ರಕಟಣೆ ಮಾಡಬೇಕು ಮತ್ತು ಇಟ್ಟಿಗೆಹಾಳ್ ಗ್ರಾಮಸ್ಥರ ಮೇಲೆ ವಿನಾಕಾರಣ ಹಾಕಿರುವ ಪ್ರಕರಣಗಳನ್ನು ಹಿಂಪಡೆಯವರೆಗೂ ನಮ್ಮ ಗ್ರಾಮದಲ್ಲಿ ಬಿ.ಎಂ.ಸುಗೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಇಟ್ಟಿಗೆಹಾಳು ಗ್ರಾಮದಿಂದ ಗ್ರಾಮ ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸುತ್ತಾ ಬಂದಿದ್ದೇವೆ ಇಟ್ಟಿಗೆಹಾಳು ಗ್ರಾಮದಲ್ಲಿ ಎರಡು ಸದಸ್ಯ ಸ್ಥಾನಗಳಿಗೆ ನಡೆಯಬೇಕಿದ್ದ ಚುನಾವಣೆಯನ್ನು ಇಲ್ಲಿಯವರೆಗೂ ಬಹಿಷ್ಕರಿಸುತ್ತ ಬಂದಿದ್ದೇವೆ ಎಂದು ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನ ರೆಡ್ಡಿ ಹೇಳಿದರು.
ಇಟ್ಟಿಗೆಹಾಳು ಗ್ರಾಮದ ಸಾಮಾನ್ಯ ಮಹಿಳಾ ಸ್ಥಾನಕ್ಕೆ ನಡೆಯಬೇಕಿದ್ದ ಉಪಚುನಾವಣೆಗೆ ನಾಗರಹಾಳು ಗ್ರಾಮದ ಲಲಿತಮ್ಮ ನಾಮಪತ್ರ ಸಲ್ಲಿಸುವಂತೆ ನೋಡಿಕೊಂಡಿದ್ದು ಈ ಮಹಿಳೆಯು ಸಲ್ಲಿಸಿದ ನಾಮಪತ್ರದಲ್ಲಿ ಕೆಲವು ದೋಷಗಳು ಕಂಡುಬAದಿವೆ ಆದ್ದರಿಂದ ಈ ಮಹಿಳೆಯ ನಾಮಪತ್ರವನ್ನು ತಿರಸ್ಕರಿಸುವಂತೆ ಚುನಾವಣಾ ಅಧಿಕಾರಿಗಳಿಗೆ ತಿಳಿಸಿದರು.
ಅಧಿಕಾರಿಗಳು ಮಾತ್ರ ಆ ಮಹಿಳೆ ಸಲ್ಲಿಸಿದ ನಾಮಪತ್ರ ಸರಿಯಾಗಿದೆ ಅದನ್ನು ಅಂಗೀಕಾರ ಮಾಡಿದ್ದೇವೆ ಈ ಬಗ್ಗೆ ನಿಮಗೆ ಯಾವುದೇ ತಕರಾರು ಇದ್ದರೆ ನ್ಯಾಯಾಲಯಕ್ಕೆ ಹೋಗಿ ಎಂದು ಚುನಾವಣಾ ಅಧಿಕಾರಿ ತಿಳಿಸಿದರು ನಾವು ಚುನಾವಣಾ ಅಧಿಕಾರಿಗಳ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಿದ್ದೇವೆ ಎಂದರು.
ಆದರೆ ಚುನಾವಣಾ ಅಧಿಕಾರಿಗಳು ಮಾತ್ರ ಯಾವುದೇ ದಾಖಲೆಗಳನ್ನು ನೀಡಲು ನಮಗೆ ಮುಂದಾಗುತ್ತಿಲ್ಲವೆ0ದು ಆರೋಪಿಸಿದರು.
ಮದ್ಯ ಮಾರಾಟ ಮುಕ್ತ ಗ್ರಾಮವೆಂದು ಇಟ್ಟಿಗೆಹಾಳ್ ಗ್ರಾಮವನ್ನು ಘೋಷಣೆ ಮಾಡುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಅಲ್ಲದೆ ಇನ್ನು ಒಂದು ಸದಸ್ಯ ಸ್ಥಾನಕ್ಕೆ ನಡೆಯಬೇಕಾದ ಚುನಾವಣೆಯನ್ನು ನಾವು ಬಹಿಷ್ಕರಿಸಿದ್ದೇವೆ ನಮ್ಮ ಹೋರಾಟಕ್ಕೆ ಸರ್ಕಾರ ಮಣಿಯುವವರೆಗು ಚುನಾವಣೆ ಬಹಿಷ್ಕಾರವನ್ನು ಗ್ರಾಮಸ್ಥರೆಲ್ಲರೂ ಸೇರಿ ಒಟ್ಟಾಗಿ ಮಾಡುತ್ತೇವೆ ಎಂದು ಹೇಳಿದರು.
ಮುಖಂಡರಾದ ಆರ್.ಉಮಾಕಾಂತ ರೆಡ್ಡಿ, ವೀರೇಶ, ರಾಮಚಂದ್ರ ರೆಡ್ಡಿ, ರಂಗಪ್ಪ, ಹುಸೇನಪ್ಪ ನಾಯಕ, ಸುಡಪ್ಪ ಕೊಡ್ಲೆ, ಮಹಾದೇವ, ರಾಮಪ್ಪ, ವೀರೇಶ್, ಪರಿಮಳ, ಕಮಲಮ್ಮ, ಹುಲಿಗೆಮ್ಮ ಮತ್ತಿತರರು ಇದ್ದರು.