ಕೊಪ್ಪಳ ವಿಶ್ವವಿದ್ಯಾಲಯದಿಂದ ಅಂತರ್ ಕಾಲೇಜು ಟೇಬಲ್ ಟೆನ್ನಿಸ್ ಸ್ಪರ್ಧೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 16- ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಕೊಪ್ಪಳ ವಿಶ್ವವಿದ್ಯಾಲಯವು ಪ್ರಪ್ರಥಮ ಭಾರಿಗೆ ಅಂತರ್ ಕಾಲೇಜು ಟೇಬಲ್ ಟನ್ನಿಸ್ ಪಂದ್ಯಾಟಗಳನ್ನು ಆಯೊಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲೆಯ ವಿವಿಧ ಪದವಿ ಮಹಾವಿದ್ಯಾಲಯಗಳು ಭಾಗವಹಿಸಿದ್ದು, ಈ ಪಂದ್ಯಾಟದಲ್ಲಿ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಶ್ರೀಮತಿ ಶಾರದಮ್ಮ ವಿ.ಕೊತಬಾಳ ಪದವಿ ಮಹಾವಿದ್ಯಾಲಯ, ದ್ವೀತಿಯ ಸ್ಥಾನವನ್ನು ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯ ಮತ್ತು ತೃತೀಯ ಸ್ಥಾನವನ್ನು ಹೆಚ್.ಆರ್.ಶ್ರೀರಾಮುಲು ಪದವಿ ಮಹಾವಿದ್ಯಾಲಯ, ಗಂಗಾವತಿ ಪಡೆಯಿತು.
ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯ ದ್ವೀತಿಯ ಸ್ಥಾನವನ್ನು ಹೆಚ್.ಆರ್.ಶ್ರೀರಾಮುಲು ಪದವಿ ಮಹಾವಿದ್ಯಾಲಯ, ಗಂಗಾವತಿ ಮತ್ತು ತೃತೀಯ ಸ್ಥಾನವನ್ನು ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಕೊಪ್ಪಳ ಪಡೆದುಕೊಂಡವು.
ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದ ಕೊಪ್ಪಳ ವಿಶ್ವವಿದ್ಯಾಲಯ ಸಿಂಡಿಕೆಟ್ ಸದಸ್ಯ ರಾಜರಾಜೇಶ್ವರರಾವ್ ಕೊಪ್ಪಳ ವಿಶ್ವವಿದ್ಯಾಲಯದ ಅದೀನದಲ್ಲಿ ಕ್ರೀಡಾ ಕಾರ್ಯಕ್ರಮವನ್ನು ಆಯೋಜಿಸಿರುವ ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವುದು ತುಂಬಾ ಸಂತೋಷಕರ ವಿಷಯ ಕೊಪ್ಪಳ ವಿಶ್ವವಿದ್ಯಾಲಯದ ಎಲ್ಲಾ ಮುಖ್ಯಸ್ಥರರಿಗೂ ನನ್ನ ಅನಂತ ಅನಂತ ಅಭಿನಂದನೆಗಳನ್ನು ತಿಳಿಸಿ ಮುಂದಿನ ದಿನಗಳಲ್ಲಿ ಕೊಪ್ಪಳ ವಿಶ್ವವಿದ್ಯಾಲಯವು ಇಂತಹ ಹಲವಾರು ಸಕ್ರೀಯ ಕ್ರೀಡಾ ಕಾರ್ಯಕ್ರಮವನ್ನು ಆಯೋಜಿಸಿ ಎಲ್ಲಾಯುವ ಸಮೂಹದಲ್ಲಿ ಕ್ರೀಡಾಸ್ಪೂರ್ತಿ ತುಂಬಿಸಲಿ ಮತ್ತು ಕ್ರೀಡೆಯ ಮಹತ್ವವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಎಲ್ಲರನ್ನು ಪ್ರೋಸ್ತಾಹಿಸಿ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷಿಯ ನುಡಿಗಳನ್ನು ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲದ ಪ್ರಾಂಶುಪಾಲ ಡಾ.ಚನ್ನಬಸವ ಮಾತನಾಡುತ್ತಾ ಎಲ್ಲಾ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಧನಾತ್ಮಕ ಪ್ರೇರಣೆಯೊಂದಿಗೆ ಸ್ವೀಕರಿಸಿಕೊಳ್ಳುವುದರ ಮೂಲಕ ಬಂದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಆಶಿಸಿದರು.
ಸಮಾರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ಸ್ವಾಗತವನ್ನು ಡಾ.ಪ್ರಶಾಂತ ಕೊಂಕಲ್, ನಿರೂಪಣೆಯನ್ನು ಡಾ.ನಾಗರಾಜ ದಂಡೋತಿ ಮತ್ತು ಶರಣಪ್ಪ ಮಾಡಿದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ ಜಯರಾಮ ಮರಡಿತೋಟ, ಡಾ.ಮೋಹನ ಹೊಸಕೋಟಿ, ಈಶಪ್ಪ ದೊಡ್ಡಮನಿ ಹಾಗೂ ಪರಶುರಾಮ ಗುಗ್ರಿ ಹಾಜರಿದ್ದರು.
ಮಹಾವಿದ್ಯಾಲಯದ ಎಲ್ಲಾ ವಿಭಾಗದ ಮುಖ್ಯಸ್ಥರು ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದು ಕಾರ್ಯಕ್ರವನ್ನು ಯಶಸ್ವಿಗೊಳಿಸಿದರು.
