
ಶ್ರೀ ಬಿನ್ನಾಳ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಕುಕನೂರು, 23- ತಾಲೂಕಿನ ಬಿನ್ನಾಳ ಗ್ರಾಮದ ಶ್ರೀ ಬಿನ್ನಾಳ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮಗಳು ನಾಳೆಯಿಂದ ಪ್ರಾರಂಭ ಎಂದು ಶ್ರೀ ಬಿನ್ನಾಳ ಬಸವೇಶ್ವರ ಪ್ರಸಾದ ಸೇವಾ ಸಮಿತಿಯವರಾದ ಸಂಗಪ್ಪ ತಹಶೀಲ್ದಾರ ಅವರು ಹೇಳಿದರು .
ದಿ.25.08.2024ರಂದು ಬೆಳಗ್ಗೆ 8 ಗಂಟೆಗೆ ಧರ್ಮ ಧ್ವಜಾರೋಹಣ ಹಾಗೂ ಕಳಸಾರೋಹಣಕ್ಕೆ ಶ್ರೀ ವೇ. ಮೂ. ಚನ್ನಯ್ಯ ತೋಟಯ್ಯ ಹಿರೇಮಠ ಸಾ. ಮಲ್ಲದಗುಡ್ಡ ತಾ. ಮಸ್ಕಿ ಇವರುಗಳ ಅಮೃತ ಹಸ್ತದಿಂದ ಶ್ರೀ ಬಸವ ಮಂಟಪದಲ್ಲಿ ಜರಗುವುದು.
ಸಾಯಂಕಾಲ 3ಗಂಟೆಗೆ ಧರ್ಮ ಸಭೆ ಹಾಗೂ ಲಘು ರಥೋತ್ಸವ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾ ಸ್ವಾಮೀಜಿಗಳು ಸಂಸ್ಥಾನ ಗವಿಮಠ, ಸುಕ್ಷೇತ್ರ ಕೊಪ್ಪಳ, ಶ್ರೀ ಮ. ನಿ. ಪ್ರ. ಸ್ವ. ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಸಾ. ಹಾಲಕೇರಿ, ಹಾಗೂ ಶ್ರೀ ಮ. ನಿ. ಪ್ರ. ಸ್ವ. ಚನ್ನಬಸವ ಮಹಾಸ್ವಾಮಿಗಳು ಶಾಖಾ ಶಿವ ಯೋಗ ಮಂದಿರ, ನಿಡಗುಂದಿಕೊಪ್ಪ, ಶ್ರೀ ವೇ. ಮೂ. ಚನ್ನಯ್ಯ ತೋಟಯ್ಯ ಹಿರೇಮಠ ಹಾಗೂ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳ ಶಿಷ್ಯರಾದ ಪುರಾಣ ತತ್ವ ಪ್ರವಚಕ ಶ್ರೀ ವೇ. ಮೂ. ಚಂದ್ರಶೇಖರಯ್ಯ ಶಾಸ್ತ್ರಿಗಳು ಹಿರೇಮಠ ಸಾ. ಮಲ್ಲದಗುಡ್ಡ, ತಾ. ಮಸ್ಕಿ ಇವರುಗಳ ದಿವ್ಯ ಸಾನಿಧ್ಯದಲ್ಲಿ ಜರುಗುವುದು.
ದಿ.26.08.2024ರಂದು ಶ್ರಾವಣ ಬ. ಪಂಚಮಿ, ಬೆಳಗ್ಗೆ 5 ಗಂಟೆಗೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಬಸವೇಶ್ವರನಿಗೆ ಮಹಾ ರುದ್ರಭಿಷೇಕ ಜರಗುವುದು. ಜಾತ್ರೆಗೆ ಆಗಮಿಸಿದ ಭಕ್ತಾದಿಗಳಿಗೆ ಗ್ರಾಮದ ನೌಕರರ ವರ್ಗ, ಗೆಳೆಯರ ಬಳಗ ಹಾಗೂ ಸದ್ಭಕ್ತರ ಸಹಕಾರದೊಂದಿಗೆ ಮಧ್ಯಾಹ್ನ 12 ಗಂಟೆಗೆ ಮಹಾ ಪ್ರಸಾದ, 2 ಗಂಟೆಗೆ ಪ್ರತಿ ವರ್ಷದಂತೆ ನಂದಿಕೋಲು ಮೆರವಣಿಗೆ ಪಾದಗಟ್ಟಿಗೆ ಹೊರಡುವದು, ಮಧ್ಯಾಹ್ನ 2ಗಂಟೆಗೆ ಧರ್ಮ ಚಿಂತನಾ ಸಭೆ ಸಂಜೆ 5.30 ಗಂಟೆಗೆ ಮಹಾ ರಥೋತ್ಸವ ಸರ್ವ ಪೂಜ್ಯರಿಂದ ಚಾಲನೆ ನೀಡಲಾಗುವುದು. ರಾತ್ರಿ 8 ಗಂಟೆಗೆ ಹವ್ಯಾಹತವಾಗಿ ನಡೆದು ಬಂದ 67 ವರ್ಷಗಳು ಗತಿಸಿ 68ನೇ ವರ್ಷದ ಶ್ರೀ ಕಲಬುರ್ಗಿ ಮಹಿಮಾ ಪುರುಷ ಸಂತಾನ ಸಂಜೀವಿನಿ, ಬರಗಾಲ ಬಂಟ ಶರಣರ ಮಹಾಪುರಾಣ ಜರಗುವುದು. ರಾತ್ರಿ 10 ಗಂಟೆಗೆ ಹೆಡೆ ಎತ್ತಿದ ಸರ್ಪಕ್ಕೆ ಗುರಿಯಿಟ್ಟ ಗರುಡ ನಾಟಕದ ಅರ್ಥಾತ್ : ಧರ್ಮದ ಕಣ್ಣೀರು ಎಂಬ ನಾಟಕವನ್ನು ಶ್ರೀ ಬಸವೇಶ್ವರ ನಾಟ್ಯ ಸಂಘ ಇವರಿಂದ ಜರುಗುವುದು.
ದಿ. 27.08.2024 ರಂದು ಸಾಯಂಕಾಲ 3 ಗಂಟೆಗೆ ಧರ್ಮಸಭೆ ಹಾಗೂ ಎತ್ತಿನ ಮೆರವಣಿಗೆ ಶ್ರೀ ಷ. ಬ.108 ಬಸವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಶ್ರೀಧರ ಮುರುಡಿಮಠ, ಯಲಬುರ್ಗಾ, ಶ್ರೀ ಮ. ನಿ. ಪ್ರ. ಸ್ವ. ಡಾ. ಮಹಾದೇವ ಮಹಾ ಸ್ವಾಮಿಗಳು ಅನ್ನದಾನೇಶ್ವರ ಮಠ. ಮುಂಡರಗಿ ಮತ್ತು ಕುಕನೂರು ಹಾಗೂ ಶ್ರೀ ವೇ. ಮೂ. ಮಲ್ಲಯ್ಯ ಶೇಖರಯ್ಯ ಪೂಜಾರ ಇವರಿಂದ ಚಾಲನೆ ನೀಡಲಿದ್ದಾರೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಲಿದ್ದು, ಗ್ರಾಮದ ಸಕಲಸದಕ್ತರು. ವಿವಿಧ ಸಂಘಟನೆಗಳು, ಮಹಿಳಾ ಸಂಘ ಸಂಸ್ಥೆಯವರು ಆಗಮಿಸಿ ಶ್ರೀ ಬಿನ್ನಾಳ ಬಸವೇಶ್ವರನ ಕೃಪೆಗೆ ಪಾತ್ರರಾಗಬೇಕು ಎಂದು ಈ ಮೂಲಕ ಪತ್ರಿಕಾ ಪ್ರಕಟಣೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಬಿನ್ನಾಳ ಬಸವೇಶ್ವರ ಪ್ರಸಾದ ಸೇವಾ ಸಮಿತಿಯವರಾದ ಶರಣಪ್ಪ ಗಡದ, ಕಲ್ಲಪ್ಪ ಬನ್ನಿಕೊಪ್ಪ, ವೀರಯ್ಯ ಹಿರೇಮಠ, ಬಸವಂತಪ್ಪ ಗಡದ್, ಚನ್ನವೀರಯ್ಯ ಪೂಜಾರ, ಶರಣಪ್ಪ ತಿಮ್ಮಪೂರ, ಅಮರಪ್ಪ ಪಲ್ಲೇದ ಇನ್ನಿತರರು ಇದ್ದರು.